Tuesday, 13th May 2025

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಟುವರ್ಟ್‌ ಬಿನ್ನಿ

ಬೆಂಗಳೂರು: ಟೀಂ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡದ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

‘ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ನೀಡಿದೆ’ ಎಂದು ಬಿನ್ನಿ ನಿವೃತ್ತಿ ಸಮಯದಲ್ಲಿ ಹೇಳಿ ದ್ದಾರೆ.

ಬೌಲಿಂಗ್‌ನಲ್ಲಿ ದಾಖಲೆ ಹೊಂದಿರುವ ಬಿನ್ನಿ, 2014ರಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 4 ರನ್‌ ನೀಡಿ 6 ವಿಕೆಟ್‌ಗಳನ್ನು ಪಡೆದಿದ್ದರು. ಈ ದಾಖಲೆ ಯನ್ನು ಇದುವರೆಗೂ ಯಾರು ಸಹ ಮುರಿದಿಲ್ಲ. 94 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿರುವ ಬಿನ್ನಿ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಪದಾರ್ಪಣೆ ಮಾಡಿ ದ್ದರು.

ವೆಸ್ಟ್‌ ಇಂಡೀಸ್‌ ವಿರುದ್ಧ ಫ್ಲೋರಿಡಾದಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ ಇವಿನ್‌ ಲೂಯಿಸ್‌ಗೆ ಒಂದೇ ಓವರ್‌ನಲ್ಲಿ ಬಿನ್ನಿ 31 ರನ್‌ ಬಿಟ್ಟುಕೊಟ್ಟು ದುಬಾರಿ ಬೌಲರ್‌ ಎನಿಸಿಕೊಂಡಿದ್ದರು. ಆ ಓವರ್‌ನಲ್ಲಿ ಲೂಯಿಸ್‌ 5 ಸಿಕ್ಸರ್‌ ಗಳನ್ನು ಸಿಡಿಸಿದ್ದರು. ಬಿನ್ನಿಗೆ ಅದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಸ್ಟುವರ್ಟ್‌ ಬಿನ್ನಿ ಅವರ ತಂದೆ ರೋಜರ್‌ ಬಿನ್ನಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದರು.

6 ಟೆಸ್ಟ್‌ ಪಂದ್ಯಗಳಿಂದ 194 ರನ್‌, 14 ಏಕದಿನ ಪಂದ್ಯಗಳಿಂದ 230 ರನ್‌ ಹಾಗೂ 3 ಟಿ20 ಪಂದ್ಯಗಳಿಂದ 35 ರನ್ ಗಳಿಸಿದ್ದಾರೆ. ಇದರ ಜೊತೆಗೆ ಬೌಲಿಂಗ್‌ ನಲ್ಲಿ ಎಲ್ಲಾ ಸ್ವರೂಪದಲ್ಲಿಯೂ 24 ವಿಕೆಟ್‌ ಪಡೆದಿದ್ದಾರೆ. 

Leave a Reply

Your email address will not be published. Required fields are marked *