Tuesday, 13th May 2025

ಕಾಬೂಲ್ ಸ್ಫೋಟ: ಮಾನವ ಬಾಂಬರ್‌ನಿಂದ 25 ಪೌಂಡ್ ಸ್ಫೋಟಕ ಬಳಕೆ !

ವಾಷಿಂಗ್ಟನ್: ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿ ಕಾಬೂಲ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಮಾನವ ಬಾಂಬರ್ ಕನಿಷ್ಟ 25 ಪೌಂಡ್ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದರು ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಾನವ ಬಾಂಬರ್‍ಗಳು ಐದರಿಂದ 10 ಕೆಜಿ ಸ್ಫೋಟವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಅಮೆರಿಕಾದ ಅಧಿಕಾರಿಗಳು ವಿವರಿಸಿದ್ದಾರೆ.

ಜನ ಸಂದಣಿಯ ನಡುವೆ ಭಾರೀ ಪ್ರಮಾಣದ ಸ್ಫೋಟ ಬಳಸಿದ್ದರಿಂದಾಗಿ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ವಿವರಿಸಲಾಗಿದೆ. ಇದು ಶತ್ರುಗಳನ್ನು ಹಿಮ್ಮೆಟ್ಟಿಸುವ, ಮುಂದಡಿ ಇಡುವ ಹಾಗೂ ಬೆದರಿಕೆಯನ್ನು ಮಣಿಸುವ ಸಮಯ ಎಂದು ನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಜೆನ್ ಪಕ್ಸಿ ಹೇಳಿದ್ದಾರೆ.

ತಾಲಿಬಾನಿಗಳ ಬೆದರಿಕೆ ಹೊರತಾಗಿಯೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನಿಗದಿ ಪಡಿಸಿದಂತೆ ಆಗಸ್ಟ್ 31ರ ಒಳಗೆ ಸೇನೆಯನ್ನು ಹಿಂಪಡೆಯುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಆಫ್ಘಾನಿಸ್ತಾನದಿಂದ ಈವರೆಗೂ 1.05 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಆಫ್ಘಾನಿಸ್ತಾನದಿಂದ ಸ್ಥಳೀಯರು ಹಾಗೂ ವಿದೇಶಿ ಪ್ರಜೆಗಳ ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಿ ಇಸ್ಲಾಮಿಕ್ ಸ್ಟೇಟ್ ಖೂರಸನ್ ಸಂಘಟನೆ ಕಾಬೂಲ್‍ನಲ್ಲಿ ಸರಣಿ ಸ್ಪೋಟ ನಡೆಸಿತ್ತು. ಅದರಲ್ಲಿ 169 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಆದಗ್ಯೂ ನ್ಯಾಟೋ ಪಡೆಗಳು ಬಿಗಿ ಭದ್ರತೆಯಲ್ಲಿ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದುವರೆಸಿವೆ.

Leave a Reply

Your email address will not be published. Required fields are marked *