Thursday, 15th May 2025

ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲೇ ಹನಿಮೂನ್ !

ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿದ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯಕ್ಕೆ ಸೇರಿದ ಅತಿಥಿಗೃಹಗಳನ್ನು ವಿವಿಗೆ ಸಂಬಂಧಿತ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗು ತ್ತದೆ. ಸೆಮಿನಾರ್, ಉಪನ್ಯಾಸ, ಕಾರ್ಯಾಗಾರ ಮೊದಲಾದ ಉದ್ದೇಶದಿಂದ ಬೇರೆ ಕಡೆಯಿಂದ ಬರುವ ವಿದ್ವಾಂಸರು, ತಜ್ಞರಿಗೆ ವಿವಿ ಅತಿಥಿಗೃಹ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಇದೇ ವಿವಿ ಅತಿಥಿಗೃಹ ದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಸ್ವರ್ಣಕುಮಾರಿ ಆ.18 ರಿಂದ ಎರಡು ದಿನಗಳ ಕಾಲ ಅತಿಥಿಗೃಹದ ವಸತಿ ಬಳಸಲು ಅನುಮತಿ ಪಡೆದುಕೊಂಡಿದ್ದರು. ಆದರೆ, ಕೋಣೆ ಯಲ್ಲಿಯೇ ದಂಪತಿ ಮಧುಚಂದ್ರ ಆಚರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಕುರಿತಾದ ಫೋಟೋ, ವಿಡಿಯೋ ವೈರಲ್ ಆಗಿದೆ. ಅದರಲ್ಲಿ, ಬೆಡ್ ಮೇಲೆ ಹೂವು ಹಾಕಿ ಮಧುಚಂದ್ರಕ್ಕೆ ವ್ಯವಸ್ಥೆ ಮಾಡಿರುವುದು ಕಂಡುಬಂದಿದೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶ್ರೀನಿವಾಸರಾವ್ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯನ್ನು ವಿಚಾರಿಸಿದ್ದಾರೆ.

 

Leave a Reply

Your email address will not be published. Required fields are marked *