Wednesday, 14th May 2025

ತ್ರೈಮಾಸಿಕ: ಜಿಡಿಪಿ ಶೇ.18.5ರಷ್ಟು ಬೆಳವಣಿಗೆ

ನವದೆಹಲಿ: ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಜಿಡಿಪಿ ಶೇ.18.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.

ಜಾಗತಿಕ ಅರ್ಥ ವ್ಯವಸ್ಥೆಯ ಜತೆ ಬೆಸೆದುಕೊಂಡಿರುವ 41 ಸೂಚ್ಯಂಕಗಳನ್ನು ಆಧರಿಸಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಎಸ್‌ಬಿಐ ಅಳವಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿರುವ ಅಂದಾಜಿಗಿಂತ ಕಡಿಮೆ, ಆರ್‌ಬಿಐ ಅಂದಾಜಿನ ಪ್ರಕಾರ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.21.4ರಷ್ಟು ಇರಲಿದೆ. ಒಟ್ಟು 4069 ಕಂಪನಿ ಗಳು ಕಾರ್ಪೊರೇಟ್ ಶೇ.28.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಭಾರತವನ್ನು ವಿಶ್ವದ ಟಾಪ್ 5 ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರ, ಅಭಿವೃದ್ಧಿಶೀಲ ರಾಷ್ಟ್ರ ಎಂದೇ ಪರಿಗಣಿಸ ಲಾಗಿತ್ತು. ಆದರೆ, ವಿಶ್ವಬ್ಯಾಂಕ್ ಇದೀಗ ಭಾರತವನ್ನು ಅಭಿವೃದ್ಧಿಶೀಲ ರಾಷ್ಷ್ರಗಳ ಪಟ್ಟಿಯಿಂದಲೇ ಹೊರಗಿಟ್ಟಿದೆ. ಇದಕ್ಕೆ ಕಾರಣ ಭಾರತದ ಆರ್ಥಿಕತೆಯಲ್ಲಿನ ಭಾರೀ ಕುಸಿತ.

ವಾಸ್ತವದಲ್ಲಿ ಭಾರತದ ಆರ್ಥಿಕತೆ ಇದೀಗ ಕುಸಿತದ ಹಾದಿ ಹಿಡಿದಿದೆ. ದೇಶದ ಜಿಡಿಪಿ ದರ 9 ರಿಂದ 5ಕ್ಕೆ ಕುಸಿದಿದೆ. ಇದೇ ಸತ್ಯ ಎಂದು ಈಗಾಗಲೇ ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಯಾವ ದೇಶದಲ್ಲಿ ಆಂತರಿಕವಾಗಿ ಅಧಿಕ ಪ್ರಮಾಣದ ದ್ರವರೂಪಿ ಹಣ ವಹಿವಾಟು ನಡೆಯುತ್ತದೆಯೋ ಅದರ ಆಧಾರದಲ್ಲಿಯೇ ಆ ದೇಶದ ಜಿಡಿಪಿ ದರವನ್ನು ಅಳೆಯಲಾಗುತ್ತದೆ ಮತ್ತು ಅದನ್ನು ಉತ್ತಮ ಅಥವಾ ಅಭಿವೃದ್ಧಿಯ ಆರ್ಥಿಕತೆ ಎಂದು ಕರೆಯಲಾಗುತ್ತದೆ.

 

Leave a Reply

Your email address will not be published. Required fields are marked *