Tuesday, 13th May 2025

ದರ್ಶನಕ್ಕೆ ತೆರೆದ ಪುರಿ ಜಗನ್ನಾಥ ದೇವಸ್ಥಾನ

ಪುರಿ: ನಾಲ್ಕು ತಿಂಗಳ ನಂತರ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಸ್ಥಾನವು ತೆರೆದಿದೆ. ಯಾತ್ರಿಕರಿಗೆ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿ ಅಥವಾ ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ಹೊಂದಿದ್ದರೆ ಅವಕಾಶ ನೀಡಲಾಗುತ್ತದೆ.

ಒಡಿಶಾದ ಪುರಿಯಲ್ಲಿನ 12 ನೇ ಶತಮಾನದ ದೇವಸ್ಥಾನವು ಏಪ್ರಿಲ್ 24 ರಿಂದ ಮುಚ್ಚಲ್ಪಟ್ಟಿತು. ಪರಿಣಾಮ ವಾಗಿ ಜೂನ್ ನಲ್ಲಿ ಪ್ರಸಿದ್ಧ ರಥಯಾತ್ರೆಯು ಎರಡನೇ ವರ್ಷದಲ್ಲಿ ಭಕ್ತರ ಉಪಸ್ಥಿತಿ ಇಲ್ಲದೆ ನಡೆಯಿತು.

ದೇವಸ್ಥಾನದಲ್ಲಿ ದರ್ಶನ ಸಮಯವನ್ನು ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ವಾರದಲ್ಲಿ 5 ದಿನ ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ನಿಗದಿ ಮಾಡಲಾಗಿದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ ದೇವಾಲಯದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸ ಲಾಗುತ್ತದೆ ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಹೇಳಿದರು.

ಸಂಪೂರ್ಣ ಲಸಿಕೆ ಹಾಕಿರುವ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿದ್ದರೆ, ಮಾತ್ರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಭಕ್ತರು ಆಧಾರ್ ಅಥವಾ ವೋಟರ್ ಕಾರ್ಡ್ ನಂತಹ ತಮ್ಮ ಫೋಟೋ ಐಡಿಯನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದರು.

ಎಲ್ಲಾ ಭಕ್ತರಿಗೆ ಸಿಂಗದ್ವಾರದ ಮೂಲಕ ಮತ್ತು ದೇವಸ್ಥಾನದ ಉತ್ತರದ್ವಾರದ ಮೂಲಕ ನಿರ್ಗಮಿಸಲು ಅವಕಾಶವಿದೆ. ಭಕ್ತರು ದೈಹಿಕ ಅಂತರ ಕಾಯ್ದುಕೊಳ್ಳುವು ದನ್ನು ಖಚಿತಪಡಿಸಿಕೊಳ್ಳಲು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಸರಿಯಾದ ನೈರ್ಮಲ್ಯೀಕರಣಕ್ಕೆ ಅನುಕೂಲವಾಗುವಂತೆ ಎಂಟು ಗೂಡಂಗಡಿಗಳನ್ನು ಸ್ಥಾಪಿಸಲಾಗಿದೆ.

 

Leave a Reply

Your email address will not be published. Required fields are marked *