Thursday, 15th May 2025

ಏಷ್ಯಾಟಿಕ್ ಸಿಂಹಗಳಿಗೆ ತವರೂರೆಂಬ ಹೆಮ್ಮೆ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿನ ಸಿಂಹಗಳ ಸಂಖ್ಯೆಯು ನಿರಂತರ ಏರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ಸಿಂಹ ದಿನದಂದು ಶುಭಾಶಯ ಕೋರಿದ್ದಾರೆ.

‘ಸಿಂಹವು ಗಂಭೀರ ಮತ್ತು ಧೈರ್ಯಶಾಲಿ ಪ್ರಾಣಿಯಾಗಿದೆ ಮತ್ತು ಏಷ್ಯಾಟಿಕ್ ಸಿಂಹಗಳಿಗೆ ತವರೂರೆಂಬ ಹೆಮ್ಮೆ ಭಾರತಕ್ಕಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಸಿಂಹ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿನ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ ಎಂಬುದನ್ನು ಕೇಳಲು ಸಂತವಾಗುತ್ತದೆ’ ಎಂದು ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಗಿರ್ ಸಿಂಹಗಳಿಗೆ ಸುರಕ್ಷಿತ ಮತ್ತು ನಿರ್ಭೀತ ಆವಾಸಸ್ಥಾನಗಳನ್ನು ಖಾತ್ರಿಪಡಿಸುವತ್ತ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು’ ಎಂದಿರುವ ಅವರು, ‘ಸಿಂಹಗಳ ಆವಾಸಸ್ಥಾನಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆಯೇ’ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಮುದಾಯಗಳ ಮಟ್ಟದಲ್ಲಿ ಮತ್ತು ಜಾಗತಿಕವಾಗಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *