Saturday, 10th May 2025

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು ಬಿಟೆಕ್ ಸ್ಟೂಡೆಂಟ್‌ಸ್‌ ಜರ್ನಿ ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಎಸ್.ಶ್ರೀನಿವಾಸ್ ‘ತಿರುಗ್ಸೋೋಮೀಸೆ’ ಚಿತ್ರಕ್ಕೆೆ ಸಂಪೂರ್ಣ ನಿರ್ಮಾಣದ ಜವಾಬ್ದಾಾರಿ ಹೊತ್ತಿಿದ್ದು ಬಂಡವಾಳ ಹೂಡಿದ್ದಾಾರೆ. ತೆಲುಗಿನಲ್ಲಿ ರಿಜ್ವಾಾನ್ ನಿರ್ಮಾಣದ ಜವಾಬ್ದಾಾರಿ ಹೊತ್ತಿಿದ್ದಾಾರೆ. ಪಬ್‌ನಲ್ಲಿ ಡಿಜೆ ಪ್ಲೇಯರ್ ಆಗಿರುವ ನಾಯಕ, ಚಿಕ್ಕ ವಯಸ್ಸಿಿನಲ್ಲಿ ಕೆಟ್ಟ ಚಾಳಿಗೆ ಮರುಳಾಗಿ ಜೀವನವನ್ನು ಹಾಳು ಮಾಡಿ ಕೊಂಡಿರುತ್ತಾಾನೆ. ನಂತರ ಒಂದು ಸಾಹಸಭರಿತ ಪ್ರಯಾಣ ಕೈಗೊಂಡು ತನ್ನ ಬದುಕನ್ನು ಹೇಗೆ ಸರಿಪಡಿಸಿಕೊಳ್ಳುತ್ತಾಾನೆ. ಇದರೊಂದಿಗೆ ತಾಯಿ ಸೆಂಟಿಮೆಂಟ್, ಆಕ್ಷನ್, ಲವ್ ಇರಲಿದೆ. ಬೆಂಗಳೂರು, ಹಿಂದೂಪುರ್, ಅನಂತಪುರ್ ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣಗೊಂಡಿದೆ.

 

ತೆಲಂಗಾಣದ ಶ್ರೀವಿಷ್ಣು ನಾಯಕ, ಬಾಂಬೆ ಮೂಲದ ನಿಕ್ಕಿಿತಂಬೋಲಿ ನಾಯಕಿಯಾಗಿ ಬಣ್ಣ ಹಚ್ಚಿಿದ್ದಾಾರೆ. ಇವರೊಂದಿಗೆ ರವಿಪ್ರಕಾಶ್, ರವಿವರ್ಮ, ದಿ.ರಘುವೀರನ್ ಪತ್ನಿಿ ರೋಹಿಣಿ, ಶ್ರೀಕಾಂತ್‌ಅಯ್ಯಂಗಾರ್ ಮುಂತಾದವರು ನಟಿಸಿದ್ದಾಾರೆ. ನಾಲ್ಕು ಹಾಡುಗಳಿಗೆ ಸುರೇಶ್‌ಬೊಬ್ಬಲಿ ಸಂಗೀತವಿದೆ. ಈ ಪೈಕಿ ಗಾಯಕಿಯಾಗಿ ಮೇಘನಾ ಕುಲಕರ್ಣಿ, ಪತ್ರಕರ್ತ ಆರ್.ಚಂದ್ರಶೇಖರ್ ವೇದ ವೇದಾಯ ಸಂಸ್ಕೃತ ಮಿಶ್ರಣ ಇರುವ ಗೀತೆ ಬರೆಯುವುದರ ಮೂಲಕ ಸಾಹಿತಿಯಾಗಿ ಚಂದನವನಕ್ಕೆೆ ಪರಿಚಯಗೊಂಡಿದ್ದಾಾರೆ. ಉಳಿದ ಹಾಡುಗಳಿಗೆ ವಿ.ಮನೋಹರ್,ರಾಘವೇಂದ್ರಕಾಮತ್ ಸಾಹಿತ್ಯ ಒದಗಿಸಿದ್ದಾಾರೆ. ರಚನೆ,ನಿರ್ದೇಶನ ಕೃಷ್ಣವಿಜಯ್.ಎಲ್, ಛಾಯಾಗ್ರಹಣ ಸಿದ್, ಸಂಕಲನ ಧರ್ಮೇಂದ್ರ, ಸಾಹಸ ರಾಮಕೃಷ್ಣ, ಸತೀಶ್, ನೃತ್ಯ ಸತೀಶ್‌ಬಾಬು,ವಿಜಯ್ ಅವರದಾಗಿದೆ. ಲಹರಿ ಸಂಸ್ಥೆೆಯು ಹಾಡುಗಳ ಹಕ್ಕುನ್ನು ಪಡೆದುಕೊಂಡಿದ್ದು, ಪ್ರಚಾರದ ಸಲುವಾಗಿ ಆಡಿಯೋ ಸಿಡಿಯನ್ನು ಲಹರಿವೇಲು, ವಿ.ಮನೋಹರ್ ಅನಾವರಣಗೊಳಿಸಿದರು. ಅಂದುಕೊಂಡಂತೆ ಆದರೆ ಚಿತ್ರವು ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *