Monday, 12th May 2025

ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾ ಸೋಲು, ಸುಶೀಲ್ ಕುಮಾರ್ ಭಾವುಕ

ನವದೆಹಲಿ: ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾ ಸೋತಿದ್ದರಿಂದ ತಿಹಾರ್ ಜೈಲಿನಲ್ಲಿರುವ ಸುಶೀಲ್ ಕುಮಾರ್ ಭಾವುಕ ರಾದರೆಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣವೊಂದರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್, ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಚಾಂಪಿಯನ್ ಜಾವೂರ್ ಉಗುವ್ ವಿರುದ್ಧ ರವಿ ದಹಿಯಾ 4-7ರಿಂದ ಸೋತಿದ್ದನ್ನು ನೋಡಿ ಭಾವುಕ ರಾದರು. ಆದಾಗ್ಯೂ, ದಹಿಯಾ ಬೆಳ್ಳಿ ಗೆದ್ದರು.

ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಭಾರತದ ಇನ್ನೊಬ್ಬ ಕುಸ್ತಿಪಟು. 2012 ರ ಲಂಡನ್ ಗೇಮ್ಸ್‌ ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು. ಅಲ್ಲಿ ಯೋಗೇಶ್ವರ್ ದತ್ ಕೂಡ ಕಂಚು ಗೆದ್ದಿದ್ದರು. 2008 ರ ಬೀಜಿಂಗ್ ಕ್ರೀಡಾಕೂಟದಲ್ಲಿ ಸುಶೀಲ್ ಕಂಚು ಗೆದ್ದಿದ್ದರು. 23 ವರ್ಷದ ದಹಿಯಾ ಭಾರತದ ಕಿರಿಯ ಒಲಿಂಪಿಕ್ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಸುಶೀಲ್ ಕುಮಾರ್ ಮಧ್ಯಾಹ್ನದಿಂದ ದೂರದರ್ಶನ ಸೆಟ್ ಬಳಿ ಕುಳಿತು, ನಿರ್ಣಾಯಕ ಪಂದ್ಯವನ್ನು ನೋಡಲು ಕಾಯುತ್ತಿದ್ದರು ಎಂದು ವರದಿಯಾಗಿದೆ.

ಜೈಲಿನ ಹೊರಗೆ ಕುಸ್ತಿ ಪಂದ್ಯಗಳು ಮತ್ತು ಇತರ ಘಟನೆಗಳ ಬಗ್ಗೆ ಅಪ್‌ಡೇಟ್ ಸಿಗಲು ತನಗೆ ದೂರದರ್ಶನ ಒದಗಿಸು ವಂತೆ ಜೈಲು ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಜೈಲಿನ ಅಧಿಕಾರಿಗಳು ಆತನ ವಾರ್ಡ್‌ನ ಸಾಮಾನ್ಯ ಪ್ರದೇಶದಲ್ಲಿ ಟೆಲಿವಿಷನ್ ನೋಡಲು ಅವಕಾಶ ನೀಡಿದರು.

Leave a Reply

Your email address will not be published. Required fields are marked *