Tuesday, 13th May 2025

ಪಬ್ಜಿ ಆಟಕ್ಕೆ ಹೆತ್ತವರ ಖಾತೆಯಲ್ಲಿ 1 ಲಕ್ಷ ರೂ. ಗುಳುಂ

ಕೋಝಿಕೋಡ್: ಕೋಝಿಕೋಡ್ ಮೂಲದ ಇಬ್ಬರು ಮಕ್ಕಳು ತಮ್ಮ ಹೆತ್ತವರ ಖಾತೆಯಿಂದ 1 ಲಕ್ಷ ರೂ.ಬಳಸಿ ಪಬ್ಜಿ ಆಟಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೋಝಿಕೋಡ್‌ನ ಮಹಿಳೆಯೊಬ್ಬರು ತನ್ನ ಖಾತೆಯಿಂದ 1 ಲಕ್ಷ ರೂ ಕಳುವಾಗಿದೆ ಎಂದು ಸೈಬರ್ ಕ್ರೈಮ್ ಗೆ ದೂರು ನೀಡಿದ್ದು, ಪೊಲೀಸರು ಸಾಕ್ಷ್ಯಗಳ ಜಾಡು ಹಿಡಿಯುತ್ತಾರೆ. ಒಂಬತ್ತನೇ ಮತ್ತು ಹತ್ತನೇ ತರಗತಿಯಲ್ಲಿ ಓದುತ್ತಿರುವ ಅವರ ಮಕ್ಕಳು ಇನ್ನೊಬ್ಬ ವಿದ್ಯಾರ್ಥಿಯ ಬೆಂಬಲದೊಂದಿಗೆ, ಈ ಹಣವನ್ನು ಆನ್‌ಲೈನ್ ಗೇಮಿಂಗ್ಗಾಗಿ ಖರ್ಚು ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ಮಕ್ಕಳ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಮತ್ತು ಆನ್‌ಲೈನ್ ತರಗತಿಗಳ ಕಾರಣದಿಂದಾಗಿ  ಮಕ್ಕಳಿಗಾಗಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ ಅನ್ನು ಖರೀದಿಸಿದ್ದರು. ಮಕ್ಕಳು ನಿಷೇಧಿತ ಪಬ್ಜಿ ಆಟವನ್ನು ಆಡುತ್ತಿದ್ದು, ಆಟದ ಹೊಸ ಹಂತಗಳನ್ನು ತಲುಪಲು ಅವರಿಗೆ ಹಣದ ಅಗತ್ಯವಿತ್ತು. ಇದು ಮಕ್ಕಳು ತಾಯಿಯ ಖಾತೆಯಿಂದ ಹಣವನ್ನು ತೆಗೆಯಲು, ತಾಯಿಯ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಇತರ ಮಾಹಿತಿಯನ್ನು ಬಳಸಿಕೊಳ್ಳಲು ಕಾರಣ ವಾಯಿತು.

Leave a Reply

Your email address will not be published. Required fields are marked *