Thursday, 15th May 2025

ಟೋಕಿಯೊ ಒಲಿಂಪಿಕ್ಸ್‌: ಹಾಕಿಯಲ್ಲಿ ಭಾರತ ಶುಭಾರಂಭ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡವು ನ್ಯೂಜಿ ಲೆಂಡ್ ವಿರುದ್ಧ 3-2 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.

‘ಎ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮನ್‌ಪ್ರೀತ್‌ಸಿಂಗ್ ಬಳಗ ಅಮೋಘ ನಿರ್ವಹಣೆ ನೀಡಿ ಅರ್ಹ ಗೆಲುವು ದಾಖಲಿಸಿದೆ. ಭಾರತದ ಪರ ಎರಡು ಗೋಲು (26 ಹಾಗೂ 33ನೇ ನಿಮಿಷ) ಬಾರಿಸಿದ ಹರ್ಮನ್‌ಪ್ರೀತ್ ಗೆಲುವಿನ ರೂವಾರಿ ಎನಿಸಿದರು. ಮಗದೊಂದು ಗೋಲು ರೂಪಿಂದರ್ ಪಾಲ್ (10ನೇ ನಿಮಿಷ) ಪಾಲಾ ಯಿತು.

ನ್ಯೂಜಿಲೆಂಡ್ ಪರ ರಸೆಲ್ ಕೆ (21ನೇ ನಿಮಿಷ) ಹಾಗೂ ಜೆನೆಸ್ ಎಸ್ (27ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು. ಇನ್ನು ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. 1980ರ ಬಳಿಕ ಹಾಕಿಯಲ್ಲಿ ಪದಕ ಜಯಿಸಲು ಸಾಧ್ಯವಾಗಿಲ್ಲ. 

 

Leave a Reply

Your email address will not be published. Required fields are marked *