Friday, 16th May 2025

ಓಮಿನಿಯಲ್ಲಿ ಬಂದ ಪೂಜಾ ಜನಾರ್ದನ

ಸ್ಯಾಂಡಲ್‌ವುಡ್‌ನಲ್ಲಿ ಸುದ್ದು ಮಾಡುತ್ತಿರುವ ಹೊಸ ಸಿನಿಮಾಗಳಲ್ಲಿ ಓಮಿನಿ ಕೂಡ ಒಂದು. ಚಿತ್ರದ ಶಿರ್ಷಿಕೆಯೇ ಹೇಳುವಂತೆ, ಸಿನಿಮಾದ ಕಥೆಯಲ್ಲಿ ಓಮಿನಿ ಕಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಓಮಿನಿಯಲ್ಲಿ ನಟಿ ಪೂಜಾ ಜಬರ್ದಸ್ತಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ.

ದುಬೈನಲ್ಲಿ ನೆಲೆಸಿದ್ದ ಪೂಜಾ ತವರಿಗೆ ಮರಳಿದ್ದು, ಕನ್ನಡ ಸಿನಿಮಾದ ಮೂಲಕವೇ ನಟನೆಗೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಸಂತಸದಿಂದ ಮಾತನಾಡುವ ಪೂಜಾ, ಚಿತ್ರದಲ್ಲಿ ತಾವು ನಿರ್ವಹಿಸಿದ ಪಾತ್ರ ಏನು ಎಂಬುದರ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಓಮಿನಿಯಲ್ಲಿ ಇಂಟ್ರೊಡಕ್ಷನ್ ಸಾಂಗ್ ನಲ್ಲೇ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇತ್ತೀಚೆಗೆ ಚಿತ್ರೀಕರಣ ಮುಗಿಸಿದ ಪ್ರಾಬ್ಲಂ.. ಪ್ರಾಬ್ಲಂ.. ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಟನೆಯ ಜತೆಗೆ ನೃತ್ಯವನ್ನು ಇಷ್ಟಪಡುವ ಪೂಜಾಗೆ, ಮೊದಲ ಸಿನಿಮಾದಲ್ಲೇ ನೃತ್ಯಕ್ಕೂ ಅವಕಾಶ ಸಿಕ್ಕಿದ್ದು ಖುಷಿ ತಂದಿದೆಯಂತೆ. ಓಮಿನಿ ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಸಿನಿಮಾವಾಗಿದ್ದು, ಇದು ನನಗೆ ಬಿಗ್ ಬ್ರೇಕ್ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ಪೊಜಾ.

ಕನಸು ನನಸಾಗಿದೆ
ನಟನೆ ನನ್ನ ಬಹುದಿನಗಳ ಕನಸು, ಅದು ಇಂದು ನನಸಾಗಿದೆ. ಮೊದಲ ಚಿತ್ರ ತೆರೆಗೆ ಬರುವ ಮುನ್ನವೇ ಪರಭಾಷಾ ಚಿತ್ರಗಳಲ್ಲೂ ನಟಿಸಲು ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ಆದರೆ ಕನ್ನಡದಲ್ಲಿಯೇ ನಟಿಸಬೇಕು ಎಂಬುದು ನನ್ನ ಆಸೆ. ನಾನು ವಿದೇಶದಲ್ಲಿದ್ದರೂ ಕನ್ನಡ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದೆ. ನಾನು ಇಂತಹ ಪಾತ್ರಗಳಲ್ಲಿ ನಟಿಬೇಕು ಎಂಬುದು ಆಗಲೇ ಮನದಲ್ಲಿ ಮೂಡಿತ್ತು. ಅದರಂತೆ ಈಗ ಅವಕಾಶವೂ ಸಿಕ್ಕಿದೆ.

ಮಹಿಳಾ ಪ್ರಧಾನ ಪಾತ್ರವೇ ಇಷ್ಟ

ಈಗಿನ ಸಿನಿಮಾಗಳಲ್ಲಿ ನಾಯಕನ ವೈಭವೀಕರಣವೇ ಹೆಚ್ಚು. ಅಂತೆಯೇ ಮಹಿಳಾ ಪ್ರಧಾನ ಚಿತ್ರಗಳೂ ಹೆಚ್ಚಾಗಿ ತೆರೆಗೆ ಬರಬೇಕು ಎಂಬುದು ನನ್ನ ಮನ ದಿಂಗಿತ. ಮುಂದೆ ಮಹಿಳಾ ಪ್ರಧಾನ ಚಿತ್ರದಲ್ಲಿಯೇ ನಾನು ಬಣ್ಣಹಚ್ಚಬೇಕು ಎಂಬ ಆಸೆಯೂ ಇದೆ. ಅಂತಹ ಕಥೆಗಳಿ ಗಾಗಿ ಕಾಯುತ್ತಿದ್ದೇನೆ. ಮಹಿಳಾ ಪ್ರಧಾನ ಪಾತ್ರದ ಮೂಲಕ ಒಂದಷ್ಟು ಸಮಸ್ಯೆಗಳಿಗೆ ಕೈಗನ್ನಡಿ ಹಿಡಿಯಬಹುದು ಎಂಬುದು ನನ್ನ ಅಭಿಮತ.

Leave a Reply

Your email address will not be published. Required fields are marked *