Monday, 12th May 2025

ನಟಿ ಶಿಲ್ಪಾ ಪತಿ, ಉದ್ಯಮಿ ರಾಜ್ ಕುಂದ್ರಾಗೆ ನ್ಯಾಯಾಂಗ ಬಂಧನ

ಮುಂಬೈ: ನೀಲಿ ಸಿನಿಮಾಗಳನ್ನ ಮಾಡಿ ಆಯಪ್‌ಗಳಲ್ಲಿ ಅಪ್ಲೋಡ್‌ ಮಾಡುತ್ತಿದ್ದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನ ಬಂಧಿಸಲಾಗಿದ್ದು, ಮಂಗಳವಾರ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ಉದ್ಯಮಿಯನ್ನ ಜು.23ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ, ಅಶ್ಲೀಲ ಚಲನಚಿತ್ರಗಳ ರಚನೆ ಮತ್ತು ಕೆಲವು ಅಪ್ಲಿಕೇಶನ್ ಗಳ ಮೂಲಕ ಪ್ರಕಟಿಸುವ ಬಗ್ಗೆ ಫೆಬ್ರವರಿ 2021ರಲ್ಲಿ ಕ್ರೈಮ್ ಬ್ರಾಂಚ್ ಮುಂಬೈನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಪ್ರಮುಖ ಆರೋಪಿ ಎಂದು ತೋರು ತ್ತಿರುವುದರಿಂದ ಅವರನ್ನ ಬಂಧಿಸಿದ್ದೇವೆ’ ಎಂದಿದ್ದಾರೆ. ಬಂಧನವಾದಾಗಿನಿಂದ ರಾಜ್ ಕುಂದ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ʼನಲ್ಲಿದ್ದಾರೆ. ‘ಪೋರ್ನ್ ವರ್ಸಸ್ ವೇಶ್ಯಾವಾಟಿಕೆ’ ಬಗ್ಗೆ 2021ರಿಂದ ಅವರ ಟ್ವಿಟರ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

 

Leave a Reply

Your email address will not be published. Required fields are marked *