ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 30
ನಡೆದು ಬಂದ ದಾರಿಗೆ ಸಂಗೀತದ ಝಲಕ್ನ ಸ್ಪರ್ಶ
ಚಾಲೆಂಜ್ಗಾಗಿ ಗಿಟಾರ್ ಹಿಡಿದ ಕತೆ ಹೇಳಿದ ರಘು ಧೀಕ್ಷಿತ್
ಬೆಂಗಳೂರು: ಇಷ್ಟು ದಿನ ಗಂಭೀರ ಚರ್ಚೆಗೆ ವೇದಿಕೆಯಾಗಿದ್ದ ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಶನಿವಾರವೇಕೋ ’ಗುಡುಗುಡುಗೋ’ ಸದ್ದು, ಇದಕ್ಕೆ ಕಾರಣವಾಗಿದ್ದು ಮಾತ್ರ ರಘು ಧೀಕ್ಷಿತ್ ಎಂಬ ಸಂಗೀತ ಮಾಂತ್ರಿಕನ ಗಿಟಾರ್ನ ಸೌಂಡ್ ಎಂದರೆ ತಪ್ಪಾಗದು.
ವಿಶ್ವವಾಣಿ ಕ್ಲಬ್ಹೌಸ್ ಕಾರ್ಯಕ್ರಮದ ಶನಿವಾರ ಸಂಜೆಯನ್ನು ರಸಮಯವಾಗಿಸಲು ಆಗಮಿಸಿದ್ದ ರಘು ಧೀಕ್ಷಿತ್ ಅವರು, ವಿಶ್ವವಾಣಿ ಕ್ಲಬ್ಹೌಸ್ ಕೇಳುಗರಿಗೆ ವೀಕೆಂಡ್ನ ಮಜಾ ನೀಡಿದರು. ತಮ್ಮ ಬಾಲ್ಯ, ಸಂಗೀತ, ಬೆಳವಣಿಗೆ, ಕನಸುಗಳ ಸೇರಿ ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡರು. ಆಗಾಗ ಗಿಟಾರ್ ಸದ್ದಿಗೆ ತಕ್ಕಂತೆ ತಮ್ಮ ಅಮಲೇರಿಸುವ ದನಿಯಲ್ಲಿ ಹಾಡಿ ರಂಜಿಸಿದರು.
ಕ್ಲಬ್ಹೌಸ್ನ ಕೇಳುಗ ಬಳಗ ಅವರ ಆಲಾಪಗಳ ಮತ್ತಲ್ಲಿ ಮುಳುಗೇಳಿದ್ದು ಸುಳ್ಳಲ್ಲ. ರಘು ದೀಕ್ಷಿತ್ ಮಾತನ್ನಾ ಡುತ್ತಾ, ತಾವು ಯಾರೋ ಒಬ್ಬ ಸ್ನೇಹಿತನ ಮೇಲಿನ ಚಾಲೆಂಜ್ಗೆ ಗಿಟಾರ್ ಹಿಡಿದ ಕತೆಯನ್ನು ನೆನಪಿಸಿಕೊಂಡರು. ಸವಾಲು ಹಾಕಿ ಗಿಟಾರ್ ಕಲಿಯಲು ಮೈಸೂರಿನಲ್ಲಿರೋ ಎಲ್ಲ ಕ್ರಿಶ್ಚಿಯನ್ನರ ಮನೆಗಳಿಗೆ ಎಡತಾಕಿದ್ದು, ನಂತರ ಸ್ನೇಹಿತನೊಬ್ಬನ ಮೂಲಕ ಚರ್ಚ್ವೊಂದರಲ್ಲಿ ಪ್ರಾರ್ಥನೆ ನುಡಿಸುವ ಸಹೋದರರ ಬಳಿ ಮೊದಲಿಗ ಬೈಸಿಕೊಂಡು ನಂತರ ಕಲಿತಿದ್ದು, ನಂತರ ಜೆಪ್ರಿ ತಮಗೆ ಗುರುವಾಗಿ ಗಿಟಾರ್ ಕಲಿಸಿದ್ದು ಎಲ್ಲವನ್ನು ಮೆಲುಕು ಹಾಕಿದರು.
ಮುಖ್ಯಾಂಶ
ಕಾರ್ಯಕ್ರಮದಲ್ಲಿ ಹಾಡಿದ ನಂತರ ಸಿಡಿ ಮಾರಾಟ ಮಾಡುತ್ತಿದ್ದೆವು. ಅಂತರಾತ್ಮಿ ಆಲ್ಬಂ ಹಿಟ್ ಆಗಿ ಯುಕೆಯಲ್ಲಿ ಜಾಸ್ತಿ ಜನಪ್ರಿಯವಾಗಿತ್ತು. ಡೆಮೊ ಸಿಡಿ ರೇಡಿಯೋ ಸಿಟಿಯಲ್ಲಿ ಪ್ರಸಾರವಾಗಿ, ಮೊದಲ ಬಹುಮಾನ ಸಂಜಯ್ ದತ್ ಕೈಲಿ ಬಿಡುಗಡೆ, ಆದರೂ ಮಾರಾಟವಾಗದ ಸಿಡಿ