Friday, 16th May 2025

ಮೇಕಿಂಗ್ ಆಫ್ ಆರ್‌ಆರ್‌ಆರ್

ರಾಜಾಮೌಳಿ ಶ್ರಮಕ್ಕೆ ಬಹುಪರಾಕ್‌

ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‌ಆರ್ ಆರ್ ಚಿತ್ರದ ಪೋಸ್ಟರ್, ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿತ್ತು. ಈಗ ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆಯಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಯುದ್ಧದ ಸನ್ನಿವೇಶಗಳು ಭವ್ಯವಾದ ಅರಮನೆ, ಮೈ ಜುಂ ಎನ್ನಿಸುವ ಸಾಹಸ ದೃಶ್ಯಗಳು ನೋಡುಗರನ್ನು ಗಮನಸೆಳೆಯುತ್ತಿವೆ. ಮೇಕಿಂಗ್ ವಿಡಿಯೊ ನೋಡಿದ ಸಿನಿಪ್ರಿಯರು ಫುಲ್ ಖುಷ್ ಆಗಿದ್ದಾರೆ. ರಾಜಮೌಳಿಯ ಶ್ರಮಕ್ಕೆ ಬಹುಪರಾಕ್ ಎಂದಿದ್ದಾರೆ. ಈ ವಿಡಿಯೊ ನೋಡಿದರೆ, ಆರ್‌ಆರ್‌ಆರ್ ಹೊಸ ದಾಖಲೆ ಬರೆಯ ಲಿದೆ ಎಂದು ಹೇಳಲಾಗುತ್ತಿದೆ.

ಇದು ಮತ್ತೊಂದು ಬಾಹುಬಲಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರ್‌ಆರ್‌ಆರ್ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಚಿತ್ರವಾಗಿದೆ. ಅಪ್ಪಟ ದೇಶ ಪ್ರೇಮಿಗಳಾಗಿದ್ದ ಕೋಮರಂ ಭೀಮ್ ಹಾಗೂ ಅಲ್ಲುರಿ ಸೀತಾರಾಮ ರಾಜು ಅವರ ಯಶೋಗಾಥೆ ತೆರೆಯಲ್ಲಿ ಅದ್ಭುತವಾಗಿ ಹಾದುಹೋಗಲಿದೆ. ಕೋಮರಂ ಭೀಮ್ ಪಾತ್ರದಲ್ಲಿ ಜೂ.ಎನ್‌ಟಿ ಆರ್ ಮತ್ತು ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಈ ಹಿಂದೆಯೇ ಎರಡು ಪಾತ್ರಗಳ ಟೀಸರ್ ರಿಲೀಸ್ ಆಗಿದ್ದು, ಅದ್ಧೂರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿತ್ತು. ವಿಶೇಷ ಎಂದರೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಅಭಿನಯಿಸು ತ್ತಿದ್ದಾರೆ. ನಟಿ ಅಲಿವಿಯಾ ಮೋರಿಸ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜತೆಗೆ ಬಾಲಿವುಡ್ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆರ್‌ಆರ್‌ಆರ್ ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ
ಈ ಹಿಂದೆಯೇ ಘೋಷಿಸಿತ್ತು. ಆದರೆ ಕರೋನಾ ಕಾಡಿದ ಹಿನ್ನೆಲೆಯಲ್ಲಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ.

Leave a Reply

Your email address will not be published. Required fields are marked *