Friday, 16th May 2025

ಮದಗಜನಿಗಾಗಿ ಸಿದ್ಧವಾಯ್ತು ಅದ್ಧೂರಿ ಸೆಟ್

ರೋರಿಂಗ್ ಸ್ಟಾರ್ ಶ್ರೀಮುರಳಿ ಮದಜಗನಾಗಿ ಘೀಳಿಡಲು ರೆಡಿಯಾಗುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಅಂತಿಮ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಕ್ಲೈಮ್ಯಾಕ್ಸ್ ಫೈಟ್, ಇಂಟ್ರೊಡಕ್ಷನ್ ಸಾಂಗ್ ಹಾಗೂ ಸೆಲೆಬ್ರೆಷನ್ ಸಾಂಗ್ ಬಾಕಿ ಇದೆ. ಇದಕ್ಕಾಗಿ ಅದ್ಧೂರಿ ಸೆಟ್ ಹಾಕಿದೆ ಚಿತ್ರತಂಡ. ಬೆಂಗಳೂರಿನ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಕೋಟಿ ವೆಚ್ಚದ ಸೆಟ್ ಹಾಕಿದ್ದು, ಅಲ್ಲಿ ಇಂಟ್ರೊ ಡಕ್ಷನ್ ಸಾಂಗ್ ಹಾಗೂ ಕ್ಲೈಮ್ಯಾಕ್ಸ್ ಫೈಟ್ ಚಿತ್ರೀಕರಿಸಿಕೊಳ್ಳಲಿದೆ. ಬಳಿಕ  ಮೇಕೆ ದಾಟುವಿನಲ್ಲಿ ಸಾಹಸ ದೃಶ್ಯವನ್ನು ಸೆರೆಹಿಡಿಯಲಿದೆ.

ಅಲ್ಲಿಂದ ಮೈಸೂರಿಗೆ ಮರಳುವ ತಂಡ, ಅಲ್ಲಿ ಮತ್ತೊಂದು ಹಾಡನ್ನು ಚಿತ್ರೀಕರಿಸಿಕೊಳ್ಳಲಿದೆ. ಶ್ರೀಮುರಳಿ, ಆಶಿಕಾ ರಂಗನಾಥ್, ರಂಗಾಯಣ ರಘು, ಚಿಕ್ಕಣ್ಣ, ತೆಲುಗಿನ ಖ್ಯಾತ ಖಳನಟ ಜಗಪತಿ ಬಾಬು, ಬಹುಭಾಷಾ ನಟಿ ದೇವಯಾನಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಈಗಾಗಲೇ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಮೊದಲ ಹಂತದ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. ಈ ಹಿಂದೆಯೇ ಮದಗಜ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕ ರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಮದಗಜ ಚಿತ್ರವನ್ನು ನಿರ್ದೇಶಿಸು ತ್ತಿದ್ದಾರೆ.

Leave a Reply

Your email address will not be published. Required fields are marked *