Wednesday, 14th May 2025

ಅಪಾಯಕಾರಿ App ಗಳು !

ರವಿ ದುಡ್ಡಿನಜಡ್ಡು

ಕೆಲವು ಜನಪ್ರಿಯ ಆಪ್‌ಗಳು ಅಪಾಯಕಾರಿ ಎಂದು ಗುರುತಿಸಿರುವ ಗೂಗಲ್, ಅಂತಹ ಆಪ್‌ಗಳನ್ನು ತನ್ನ ಪ್ಲೇಸ್ಟೋರ್‌ನಿಂದ ತೆಗೆದು ಹಾಕುವ ಕೆಲಸವನ್ನು
ಆರಂಭಿಸಿದೆ. ‘ಹೋರೋಸ್ಕೋಪ್ ಡೈಲಿ’ ಎಂಬುದು ಒಂದು ಆಕರ್ಷಕ ಹೆಸರಿನ ಆಪ್.

ಪ್ರತಿದಿನ ಬಳಕೆದಾರರ ಭವಿಷ್ಯವನ್ನು ತಿಳಿಸುವ ಆಪ್ ಇದು. ಆದರೆ, ಇದನ್ನು ಡೌನ್ ಲೋಡ್ ಮಾಡಿಕೊಂಡವರು ಭವಿಷ್ಯ ತಿಳಿಯಲು ಪ್ರಯತ್ನಿಸುತ್ತಿರು ವಂತೆಯೇ, ಆ ಬಳಕೆದಾರನ ಭವಿಷ್ಯವನ್ನೇ ಈ ಆಪ್ ಬದಲಿಸಲು ಪ್ರಯತ್ನಿಸುತ್ತಿತ್ತು! ಅಂದರೆ, ಅದನ್ನು ಬಳಸುವವರ ಫೇಸ್‌ಬುಕ್ ಖಾತೆಯ ಲಾಗಿನ್ ವಿವರ, ಪಾಸ್‌ವರ್ಡ್ ಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿತ್ತು. ಇದೇ ಕೆಲಸ ಮಾಡುತ್ತಿದ್ದ ‘ರಬ್ಬಿಷ್ ಕ್ಲೀನರ್’ ಎಂಬ ಕ್ಲೀನಿಂಗ್ ಆಪ್‌ನ್ನು ಸಹ ಗೂಗಲ್ ತೆಗೆದು ಹಾಕಿದೆ.

ಇಂತಹ ಒಂಬತ್ತು ಕುತಂತ್ರಾಂಶಗಳನ್ನು ಗೂಗಲ್ ಈಗ ತನ್ನ ಆಪ್ ಸ್ಟೋರ್‌ನಿಂದ ಇತ್ತೀಚೆಗೆ ತೆಗೆದು ಹಾಕಿದ್ದು, ಈ ರೀತಿಯ ಇನ್ನಷ್ಟು ಆಪ್‌ಗಳು ಇರಬಹುದೆಂಬ ಶಂಕೆಯಿಂದ, ಪತ್ತೇದಾರಿ ಕೆಲಸ ಆರಂಭವಾಗಿದೆ. ಈಗಾಗಲೇ ಇಂತಹ ಮೋಸದ ಆಪ್ ಗಳನ್ನು ತಯಾರಿಸಿದ ಡೆವಲಪರ್‌ಗಳನ್ನು ಪ್ಲೇಸ್ಟೋರ್ ನಿಂದ ನಿಷೇ
ಽಸಲಾಗಿದೆ ಎಂದು ಗೂಗಲ್ ಹೇಳಿದೆ. ಆದರೆ, ಅಂತಹ ಡೆವಲಪರ್‌ಗಳು ಹೊಸ ಖಾತೆಯನ್ನು ತೆರೆದು ಮತ್ತಷ್ಟು ಕುತಂತ್ರಾಂಶಗಳನ್ನು ಪ್ಲೇಸ್ಟೋರ್‌ಗೆ ಸೇರಿಸುವ ಸಾಧ್ಯತೆ ಇದ್ದೇ ಇದೆ.

ಯಾವುದೇ ಆಪ್, ಪ್ಲೇಸ್ಟೋರ್‌ಗೆ ಸೇರ್ಪಡೆಯಾಗುವ ಮುಂಚೆ ಗೂಗಲ್ ಸಾಕಷ್ಟು ಸುರಕ್ಷಾ ಚೆಕ್‌ಗಳನ್ನು ನಡೆಸುತ್ತಿರುವುದು ನಿಜ. ಆಟೊಮ್ಯಾಟಿಕ್ ಸ್ಕ್ರೀನಿಂಗ್ ಮೂಲಕ ಹಲವು ಹಾನಿಕಾರಕ ಆಪ್‌ಗಳನ್ನು ಗೂಗಲ್ ಆರಂಭದ ಹಂತದಲ್ಲೇ ಚಿವುಟಿ ಹಾಕುತ್ತದೆ. ಆದರೆ, ಆಧುನಿಕ ತಂತ್ರಜ್ಞಾನ ಬಳಸುವ ಕೆಲವು
ಡೆವಲಪರ್‌ಗಳು, ಮೋಸದ ಆಪ್ ಗಳನ್ನು ಪ್ಲೇಸ್ಟೋರ್‌ಗೆ ಅಪ್‌ಲೋಡ್ ಮಾಡುವಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆಗ, ಅಮಾಯಕ ಬಳಕೆದಾರರು ಅವುಗಳನ್ನು
ಡೌನ್‌ಲೋಡ್ ಮಾಡಿಕೊಂಡಾಗ, ಅವರ ಫೇಸ್‌ಬುಕ್ ಮತ್ತು ಇತರ ಲಾಗ್‌ಇನ್ ವಿವರಗಳು ಸೋರಿಕೆಯಾಗುತ್ತವೆ. ಯಾವುದೇ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೊದಲು, ಅಪರಿಚಿತ ಡೆವಲಪರ್‌ಗಳು ತಯಾರಿಸಿದ್ದು ಎಂದೆನಿಸಿದರೆ, ಅವುಗಳಿಂದ ದೂರ ಇರುವುದೇ ಒಳ್ಳೆಯದು.

Leave a Reply

Your email address will not be published. Required fields are marked *