Saturday, 10th May 2025

ಆಟೋ ಚಾಲಕನ ಚೆಲ್ಲಾಟಕ್ಕೆ ಆರು ಮಂದಿ ಪ್ರಯಾಣಿಕರ ದುರ್ಮರಣ 40ಮಂದಿಗೆ ಗಾಯ

*ಆಟೋ ಚಾಲಕನ ಚೆಲ್ಲಾಟಕ್ಕೆ ಆರು ಮಂದಿ ಪ್ರಯಾಣಿಕರ ದುರ್ಮರಣ 40ಮಂದಿಗೆ ಗಾಯ..
*

ಕೊರಟಗೆರೆ:- ಆಟೋ ಚಾಲಕನ ಅಜಾರುಕತೆ ಮತ್ತು ಚೆಲ್ಲಾಟದಿಂದ ಖಾಸಗಿ ಬಸ್ ಮೂರು ಪಲ್ಟಿ ಹೊಡೆದಿರುವ ಘಟನೆ ಬುಧವಾರ ನಡೆದಿದೆ..

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರಾಜ್ಯಹೆದ್ದಾರಿಯಲ್ಲಿ ಅಪಘಾತವಾಗಿ 6ಜನ ಮೃತ ಮತ್ತು 30ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ..

ಜಗನ್ನಾಥಪುರ ಗ್ರಾಮದಿಂದ ಬರಕ ರಸ್ತೆಯ ಮೂಲಕ ಜೆಟ್ಟಿಅಗ್ರಹಾರದ ರಾಜ್ಯ ಹೆದ್ದಾರಿಗೆ ಸೇರಲು ಬರುತ್ತೀದ್ದ ಚಾಲಕ ಏಕಾಏಕಿ ರಸ್ತೆಗೆ ನುಗ್ಗಿದ್ದಾನೆ..

ಆಟೋ ಚಾಲಕ ವೇಗವಾಗಿ ಬರುತ್ತೀದ್ದ ಬಸ್ಸನ್ನು ನೋಡಿಯು ಚಮಕ್ ನೀಡಿದ ಪರಿಣಾಮ ಅಪಘಾತ ನಡೆದಿದೆ.. ಆಟೊ ಮತ್ತು ಬಸ್ಸಿನ ಚಾಲಕರಿಬ್ಬರು ಸ್ಥಳದಿಂದ ಪರಾರಿ ಅಗಿದ್ದಾರೆ..

ಪಾವಗಡ-ಮಧುಗಿರಿ-ಕೊರಟಗೆರೆ ಮೂಲಕ ತುಮಕೂರು ಹೋಗುತ್ತೀದ್ದ ಕೆಎ64-1849ಎಂಬ ನಂಬರಿನ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ಸಿನ ಚಾಲಕ ಆಟೋ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊದೆದಿದೆ..

ಖಾಸಗಿ ಬಸ್ಸು ಪಲ್ಟಿ ಹೊಡೆದಿರುವ ರಭಸಕ್ಕೆ ಬಸ್ಸಿನ ಗಾಜಿನ ಜೊತೆ ಮೃತ ರ ದೇಹಗಳು ನುಜ್ಜುಗುಜ್ಜಾಗಿವೆ.. ಗಾಯಾಳುಗಳಿಗೆ ಕೈಕಾಲು ಮುರಿದಿದ್ದು ನೋವಿನ ಆಕ್ರಂಧನ ಮುಗಿಲು ಮುಟ್ಟಿದೆ..

ಅಪಘಾತದಲ್ಲಿ ಮೃತಪಟ್ಟ ಮೃತದೇಹ ಮತ್ತು ಗಾಯಾಳುಗಳನ್ನು ಕೊರಟಗೆರೆ ಮತ್ತು ತುಮಕೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ..

ಅಪಘಾತವಾದ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು ರಸ್ತೆ ತೆರವುಗೊಳಿಸಲು ಪೋಲಿಸರು ಹರಸಾಹಸ ಪಡುತ್ತೀರುವ ಘಟನೆ ನಡೆದಿದೆ..

ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ಸ್ಥಳದಲ್ಲಿಯೇ ಮೊಕ್ಕಾ ಹೊಡಿದ್ದಾರೆ..

Leave a Reply

Your email address will not be published. Required fields are marked *