Monday, 12th May 2025

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449 ಕೋಟಿ ರು. ಬಿಡುಗಡೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರಕಾರದಿಂದ ಈಗಾಗಲೇ 6,449.93 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು ಸಾಕಷ್ಟು ಹಣವಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲ ಬ್ಯಾಾಂಕ್‌ಗಳಿಗೆ ನೋಟೀಸ್ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ಪರಿಹಾರ ಧನವನ್ನು ಬ್ಯಾಾಂಕ್‌ಗಳು ಸಾಲದ ಬಾಕಿ ಹಣಕ್ಕೆೆ ಮುಟ್ಟುಗೋಲು ಹಾಕಿಕೊಳ್ಳುತ್ತಿಿವೆ ಎಂಬ ದೂರುಗಳು ರೈತರಿಂದ ಬಂದ ಹಿನ್ನೆೆಲೆಯಲ್ಲಿ ಬ್ಯಾಾಂಕ್‌ಗಳಿಗೆ ನೋಟೀಸ್ ನೀಡಲು ಸೂಚಿಸಲಾಗಿದೆ ಎಂದರು.

ಹಿಂಗಾರು ಹಂಗಾಮಿನ ಬರ ಪರಿಹಾರ ಧನ 1045 ಕೋಟಿ ರು. ಬಂದಿದ್ದು, ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಸೂಚಿಸಲಾಗಿದೆ. 2ನೇ ಹಂತದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರು, ಬೆಳೆ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು. ಆಸ್ತಿಿ-ಪಾಸ್ತಿಿ ಹಾಗೂ ಬೆಳೆ ಹಾನಿ ಬಗ್ಗೆೆ ಅಂದಾಜು ಮಾಡಲಾಗುತ್ತಿಿದೆ. ಒಂದೆರಡು ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಮುನ್ಸೂಚನೆಗಳಿವೆ. ಬೆಳಗಾವಿಯಲ್ಲಿ ಎನ್‌ಡಿಆರ್‌ಎಫ್‌ನ 2 ಹಾಗೂ ಎಸ್‌ಡಿಆರ್‌ಎಫ್‌ನ 2 ತಂಡಗಳು ಕಾರ್ಯನಿರ್ವಹಿಸುತ್ತಿಿವೆ. ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದು ತಂಡಗಳು ಕಾರ್ಯನಿರ್ವಹಿಸುತ್ತಿಿವೆ. ಅಧಿಕಾರಿಗಳಿಗೆ ರಜೆ ಇಲ್ಲದೆ ಕೆಲಸ ಮಾಡಲು ಸೂಚಿಸಲಾಗಿದೆ ಎಂದರು.

ಮನೆ ಕಳೆದುಕೊಂಡಿರುವ ಬಿ ವರ್ಗದವರಿಗೂ ಒಂದು ಲಕ್ಷ ರು. ಪರಿಹಾರ ನೀಡಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದ್ದು, 867.67 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನೂ 481 ಕೋಟಿ ರು. ಇದೆ.
ಆರ್.ಅಶೋಕ
ಕಂದಾಯ ಸಚಿವ

Leave a Reply

Your email address will not be published. Required fields are marked *