Monday, 12th May 2025

ಮುಕುಲ್ ರಾಯ್- ದೀದಿ ಭೇಟಿ: ಮಾತೃಪಕ್ಷಕ್ಕೆ ಮರಳುವರೇ ?

ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಮುಕುಲ್ ರಾಯ್ ಮತ್ತು ಪುತ್ರ ಸುಬ್ರಾಂಗಶು ರಾಯ್ ಟಿಎಂಸಿಗೆ ಮರಳುವ ಸಾಧ್ಯತೆ ಇದೆಯೆನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಆಪ್ತ ಮುಕುಲ್ ರಾಯ್ ತಮ್ಮ ನಿಷ್ಠರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಶುಕ್ರವಾರ ಕೋಲ್ಕತಾದಲ್ಲಿರುವ ಟಿಎಂಸಿ ಕೇಂದ್ರ ಕಚೇರಿಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ. ಈ ವೇಳೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡಾ ಹಾಜರಿರಲಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಇತ್ತೀಚೆಗೆ ಮುಕುಲ್ ರಾಯ್ ಅವರ ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ರಾಜ್ಯ ಬಿಜೆಪಿ ಘಟಕ ಮಂಗಳವಾರ ಕರೆದ ಸಭೆಗೂ ಮುಕುಲ್ ರಾಯ್ ಗೈರು ಹಾಜರಾಗಿದ್ದರು.

2017ರಲ್ಲಿ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಪಶ್ಚಿಮಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ರಾಯ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಭಿಷೇಕ್ ಬ್ಯಾನರ್ಜಿ ಜತೆಗಿನ ಜಟಾಪಟಿ ಸೇರಿದಂತೆ ಹಲವು ವಿಷಯಗಳಲ್ಲಿ ಅಸಮಧಾನಗೊಂಡು ಮುಕುಲ್ ರಾಯ್ ಟಿಎಂಸಿಯನ್ನು ತೊರೆದಿದ್ದರು.

Leave a Reply

Your email address will not be published. Required fields are marked *