Wednesday, 14th May 2025

ಸ್ಪೇನ್‌’ನ ಕ್ಯಾರೊಲಿನಾ ಮರಿನ್‌ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಕ್ಕೆ

ಮ್ಯಾಡ್ರಿಡ್: ಎಡ ಮೊಣಕಾಲಿನ ಗಾಯದಿಂದಾಗಿ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಬ್ಯಾಡ್ಮಿಂಟನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‌ ಅವರು ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.

ಕಳೆದ ವಾರ ನಡೆದ ತರಬೇತಿ ಅವಧಿಯಲ್ಲಿ 27 ವರ್ಷದ ಕ್ಯಾರೊಲಿನಾ ಮರಿನ್‌ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟಿ ದ್ದಾರೆ.

ಮೂರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮರಿನ್‌, 2019ರಲ್ಲಿ ಬಲಗಾಲಿನ ಎಸಿಎಲ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮರಿನ್, ಕಳೆದ ತಿಂಗಳು ಸತತ ಐದನೇ ಬಾರಿಗೆ ಯುರೋಪಿಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ರಿಯೊ ಡಿ ಜನೈರೊದಲ್ಲಿ ನಡೆದ 2016ರ ಒಲಿಂಪಿಕ್ ಫೈನಲ್‌ನಲ್ಲಿ ಭಾರತದ ಪಿವಿ ಸಿಂಧು ಅವರನ್ನು ಮರಿನ್‌ ಸೋಲಿಸಿದ್ದರು.

Leave a Reply

Your email address will not be published. Required fields are marked *