Thursday, 15th May 2025

ಪ್ರೀತಿಗೆ ಬಿದ್ದ ಶ್ರುತಿಪ್ರಕಾಶ್

ಲಂಡನ್‌ದಲ್ಲಿ ಲಂಭೋದರ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಗಮನಸೆಳೆದ ಶ್ರುತಿ ಪ್ರಕಾಶ್ ಸದ್ದಿಲ್ಲದೆ ಲವ್‌ನಲ್ಲಿ ಬಿದ್ದಿದ್ದಾರೆ. ಅಯ್ಯಯ್ಯೋ.. ಇದೇನಪ್ಪ ಎಂದು ಅಚ್ಚರಿಯಾಗಬೇಡಿ.

ಶ್ರುತಿ ಸದ್ಯ, ಲವ್ ಇನ್ ದಿ ಟೈಮ್ ಆಫ್ ಕೋವಿಡ್ ಸಿನಿಮಾದಲ್ಲಿ ಅಭಿನಯಿಸಿ ದ್ದಾರೆ. ಈ ಚಿತ್ರದಲ್ಲಿ ಶೀಲಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕರೋನಾಕ್ಕೂ
ಮೊದಲೇ ಚಿತ್ರದ ಚಿತ್ರೀಕರಣ ನಡೆಸಿದ್ದರಿಂದ ಯಾರಿಗೂ ಸಮಸ್ಯೆಯಾಗಿಲ್ಲ. ಉಳಿದ ಭಾಗವನ್ನು ಕರೋನಾ ಬಳಿಕ ಚಿತ್ರೀಕರಿಸ ಲಾಗುವುದು ಎನ್ನುತ್ತಾರೆ. ನಿರ್ದೇಶಕ ಜಯಂತ್ ಸೀಗೆ ಲವ್ ಇನ್ ದಿ ಟೈಮ್ ಆಫ್ ಕೋವಿಡ್ ಕನ್ನಡದಲ್ಲಿ ಹಿಂದೆಂದೂ ನೋಡಿರದ ಚಿತ್ರವಾಗುತ್ತದಂತೆ.

ಹಾಲಿವುಡ್‌ದಲ್ಲಿ ಸರ್ಚಿಂಗ್ ನಂತರ ಮಾಲಿವುಡ್‌ದಲ್ಲಿ ಸೀ ಯೂ ಸೂನ್ ಸಿನಿಮಾವು ಇದೇ ಶೈಲಿಯಲ್ಲಿ ಮೂಡಿ ಬಂದಿದೆಯಂತೆ. ಚಿತ್ರದ ನಾಯಕನಾಗಿ ರಾಕೇಶ್‌ಮಯ್ಯ ನಟಿಸಿದ್ದು, ಇವರೊಂದಿಗೆ ಅಪೂರ್ವಾ ಭಾರದ್ವಾಜ್, ಗೌತಮ್, ಶಂಕರಮೂರ್ತಿ, ಪವನ್
ವೇಣುಗೋಪಾಲ್, ಶ್ರವಣ್ ಐತಾಳ್ ಮುಂತಾದವರ ನಟನೆ ಇದೆ.

ಶೀರ್ಷಿಕೆಯೇ ಹೇಳುವಂತೆ ಇದು ನವಿರಾದ ಪ್ರೇಮಕಥೆಯ ಚಿತ್ರ, ಜತೆಗೆ ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು. ಹತ್ತು ವರ್ಷದ ಬಳಿಕ ಕಾಲೇಜು ಸ್ನೇಹಿತ ಆನ್‌ಲೈನ್‌ನಲ್ಲಿ ಸಿಗುತ್ತಾನೆ. ಮುಂದೆ ಇಬ್ಬರ ಒಡನಾಟ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಸಂಗೀತ ಭರತ್.ಬಿ.ಜಿ, ಛಾಯಾಗ್ರಹಣ ಪ್ರದೀಪ್‌ರೆಡ್ಡಿ ಅವರದಾಗಿದೆ.

Leave a Reply

Your email address will not be published. Required fields are marked *