ಟೆಕ್ ಮಾತು
ಇಂಧುದರ ಹಳೆಯಂಗಡಿ
ವಿಡಿಯೋ ಕಾಲ್ ಇಂದು ಸಾಮಾನ್ಯ ಎನಿಸಿದೆ. ಇಂತಹ ಸೌಲಭ್ಯವು 3ಡಿ ಅಥವಾ ಮೂರು ಆಯಾಮಗಳಲ್ಲಿ ದೊರೆತರೆ ಎಷ್ಟು ಚೆನ್ನ ಅಲ್ಲವೆ!
ಈಗ ಜಗತ್ತನ್ನು ಕಾಡುತ್ತಿರುವ ಸಾಂಕ್ರಾಮಿಕದಿಂದಾಗಿ ಹಲವಾರು ಪರಿವರ್ತನೆಗಳಾಗಿವೆ. ಹಲವಾರು ಕ್ಷೇತ್ರಗಳು ಡಿಜಿಟಲ್
ಆಗಿವೆ. ಪ್ರತಿನಿತ್ಯ ಶಾಲೆ-ಕಾಲೇಜಿಗೆ ಹೋಗಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಮನೆಯೊಳಗಿಂದಲೇ ಆನ್‌ಲೈನ್ ಕ್ಲಾಸ್!
ಮನೆಯಿಂದ ಕೆಲಸ, ಆನ್‌ಲೈನ್ ಶಾಪಿಂಗ್, ಒಟಿಟಿ ಸಿನಿಮಾ ಈ ರೀತಿ ಜೀವನ ಶೈಲಿ ಬದಲಾಗಿದೆ. ಆದರೆ, ಯಾರೊಂದಿಗಾದರೂ ಕೋಣೆಯೊಳಗೆ ಒಟ್ಟಿಗೆ ಇರಬೇಕು ಎಂದೆನಿಸಿದರೆ ಈ ಅಂತರ್ಜಾಲವು ನಮಗೆ ಸಹಾಯ ಮಾಡಬಲ್ಲದೆ? ಕಾನರೆನ್ಸಿಂಗ್ ಅಪ್ಲಿಕೇಶನ್‌ಗಳಾದ ಜೂಮ, ಗೂಗಲ್ ಮೀಟ, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳು ನಿಮ್ಮ ಸ್ನೇಹಿತರು, ಒಡನಾಡಿ ಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆಯಾದರೂ, ಒಟ್ಟಿಗೆ ಕುಳಿತು ಸಂವಹನ ಮಾಡುವಂತಹ ಅನುಭವ ಅದರಲ್ಲಿ ಸಿಗುವುದಿಲ್ಲ. ಅಂತಹ ನೈಜ ಅನುಭವ ನೀಡಲು ಈಗ ಗೂಗಲ್ ಮುಂದಾಗಿದೆ!
ಜನರೊಂದಿಗೆ ಒಳ್ಳೆಯ ಸಂಬಂಧ ಮತ್ತು ಸಂಪರ್ಕ ಇಟ್ಟುಕೊಳ್ಳಲು ಸಹಕಾರಿಯಾಗಲು, ಪ್ರಾಜೆಕ್ಟ್ ಸ್ಟಾರ್‌ಲೈಟ್‌ನ್ನು ಈಗ ಗೂಗಲ್ ಪರಿಚಯಿಸುತ್ತಿದೆ.
ಏನಿದು ಪ್ರಾಜೆಕ್ಟ್ ಸ್ಟಾರ್ಲೈನ್?
ಯಾವುದೇ ಕನ್ನಡಕ ಅಥವಾ ಇನ್ನಿತರ ಸಾಧನ ಬಳಸದೇ, ವೀಡಿಯೋ ಕರೆ/ಕಾನರೆನ್ಸಿಂಗ್ ಕಾಲ್ನಲ್ಲಿ 3ಡಿ ಅನುಭವ ನೀಡುವ ಪ್ರಾಜೆಕ್ಟ್ ಇದು. ಗೂಗಲ್ ಐ/ಒ 2021ರಲ್ಲಿ ತಮ್ಮ ಕಂಪನಿಯು ಹಲವಾರು ವರ್ಷಗಳಿಂದ ಕಂಪ್ಯೂಟರ್ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಾಂಶ ನಿರ್ಮಿಸುವ, ಸ್ವ-ನಿರ್ಮಿತ ಯಂತ್ರಾಂಶ ಮತ್ತು ಹೆಚ್ಚು ವಿಶೇಷವಾದ ಸಾಧನಗಳನ್ನು ಅವಲಂಬಿಸಿರುವ ಯೋಜನೆಯನ್ನು ಪ್ರಾರಂಭಿಸಿದತ್ತು ಎಂದು ಗೂಗಲ್ ಸಿಇಒ ಸುಂರ್ದ ಪಿಚೈ ಅವರು ಹೇಳಿದ್ದರು.
ಪ್ರಾಜೆಕ್ಟ್ ಸ್ಟಾರ್ ಲೈನ್ ಎಂಬ ಹೆಸರಿರುವ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಪೂರ್ಣಗೊಂಡ ನಂತರ, ವೀಡಿಯೋ ಕರೆಗಳಲ್ಲಿ ಹೈಪರ್ ರಿಯಾಲಿಸ್ಟಿಕ್ 3ಡಿ ಅನುಭವ ಸಿಗಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಸರಳವಾಗಿ ವಿವರಿಸುವುದಾದರೆ, ನೀವು ಒಂದು ಕಡೆ ಕುಳಿತಿರುತ್ತೀರಿ. ದೂರದ ಊರಿನಲ್ಲಿರುವವರಿಗೆ ವೀಡಿಯೋ ಕರೆ ಮಾಡುತ್ತೀರಿ. ಎದುರುಗಡೆ ಒಂದು ಮ್ಯಾಜಿಕ್ ವಿಂಡೋ ಹಾಗೂ ಅದರಾಚೆಗೆ ದೂರದಲ್ಲಿರುವವರೊಂದಿಗೆ ಕುಳಿತು ಸಂವಹನ ನಡೆಸುತ್ತಿದ್ದೀರಿ ಎಂಬುವುದನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಂತರ ಬಹಳವಿದ್ದರೂ, ಹತ್ತಿರದಲ್ಲಿ ಕುಳಿತು ಮಾತನಾಡಿದ ಅನುಭವವನ್ನು ಸ್ಟಾರ್ ಲೈನ್ ನೀಡಬಲ್ಲದು. ಪ್ರಾಜೆಕ್ಟ್ ಸ್ಟಾರ್‌ಲೈನ್‌ನಲ್ಲಿ 3 ಅಂಶಗಳಿವೆ
1 ಕ್ಯಾಮೆರಾಗಳು ಮತ್ತು ಆಳ ಸಂವೇದಕಗಳು:
ವ್ಯಕ್ತಿಯನ್ನು ಅನೇಕ ದೃಷ್ಟಿಕೋನಗಳಿಂದ ಸೆರೆಹಿಡಿಯುವ
ವಿಶೇಷ ಸೆನ್ಸರ್ ಮತ್ತು ಕ್ಯಾಮೆರಾಗಳು.
2 ಹೆಚ್ಚಿನ ಶಕ್ತಿಯ ಕಂಪ್ಯೂಟರ್, ಸ್ಟ್ರೀಮಿಂಗ್ ಸೇರಿದಂತೆ ಕಸ್ಟಮ್ ಸಾಫ್ಟ್ ವೇರ್.
3ಬೆಳಕಿನ ಕ್ಷೇತ್ರ ಪ್ರದರ್ಶನ: 3ಡಿ ಯಲ್ಲಿ ಯಾರೊಬ್ಬರ ವಾಸ್ತವಿಕ ಪ್ರಾತಿನಿಧ್ಯವನ್ನು ನೀಡುವ ಕಸ್ಟಮ್ ಯಂತ್ರಾಂಶ.
ಈ ಯೋಜನೆಯಲ್ಲಿ ಬಳಕೆದಾರರ ಆಕಾರ ಮತ್ತು ನೋಟವನ್ನು ಅನೇಕ ದೃಷ್ಟಿಕೋನಗಳಿಂದ ಸೆರೆಹಿಡಿಯಲು ಹೈರೆಸೊಲ್ಯೂ ಷನ್ ಕ್ಯಾಮೆರಾಗಳನ್ನು ಮತ್ತು ಕಸ್ಟಮ್ ಡೆಪ್ಟ್ ಸೆನ್ಸರ್ ಗಳನ್ನು ಬಳಸುತ್ತದೆ. ತದನಂತರ ಸಾಫ್ಟ್ ವೇರ್ ಸಹಾಯದಿಂದ
ಎಲ್ಲವನ್ನೂ ವಿವರವಾಗಿ, ಸ್ಪಷ್ಟವಾಗಿ, ರಿಯಲ್-ಟೈಮ್ 3ಡಿ ಮಾದರಿಯನ್ನು ರಚಿಸುತ್ತದೆ.
ಕಂಪ್ಯೂಟರ್ ದೃಷ್ಟಿ, ಯಂತ್ರ ಕಲಿಕೆ, ಪ್ರಾದೇಶಿಕ ಆಡಿಯೋ ಮತ್ತು ರಿಯಲ್‌ಟೈಮ್ ಕಂಪ್ರೆಶನ್ ವಿಷಯದಲ್ಲಿ ಇನ್ನೂ ಸಂಶೋಧನೆ ನಡೆಸುತ್ತಿದೆ ಎಂದು ಗೂಗಲ್ ಹೇಳಿದೆ. ಆದರೆ, ಸಂಪೂರ್ಣ 3ಡಿ ಮಾದರಿಯಲ್ಲಿ ವಿಡಿಯೋ ಪ್ರದರ್ಶಿಸುವುದರಿಂದ, ಅತಿ ಹೆಚ್ಚಿನ ಡೇಟಾ ಬಳಕೆಯಾಗುತ್ತದೆ. ಅದಕ್ಕೆ 5 ಜಿ ತಂತ್ರಜ್ಞಾನ ಬೇಕಾದೀತು.
ಈಗ ಬಳಕೆಯಲ್ಲಿರುವ ಬ್ಯಾಂಡ್‌ವಿಡ್ತ್‌ನಲ್ಲಿ 3ಡಿ ಚಿತ್ರಣವನ್ನು ರವಾನಿಸಲು ಕಷ್ಟವಾಗುವುದರಿಂದ, ಡೇಟಾ ಬಳಕೆಯನ್ನು ಕಡಿಮೆಗೊಳಿಸುವಲ್ಲಿಯೂ ಸಂಶೋಧನೆಯನ್ನೂ ಮಾಡುತ್ತಿದೆ. ಗೂಗಲ್ ಒಂದು ಲೈಟ್ ಫೀಲ್ಡ ಡಿಸ್ಪ್ಲೇ (ಬೆಳಕಿನ ಬಗ್ಗೆ)ಯನ್ನೂ ಸಹ ಅಭಿವೃದ್ಧಿಪಡಿಸಿದೆ. ನಿಮ್ಮ ತಲೆ ಮತ್ತು ದೇಹವನ್ನು ನೀವು ಚಲಿಸುವಾಗ, ನಿಮ್ಮ ದೃಷ್ಟಿಗೆ ಸರಿಹೊಂದುವಂತೆ ಲೈಟ್ ಡಿಸ್ಪ್ಲೇಯೂ ಸಹ ಹೊಂದಿಕೊಳ್ಳುತ್ತದೆ. ಇದರಿಂದಾಗಿ 3ಡಿ ಅನುಭವ ಪಡೆಯಲು ಹೆಚ್ಚುವರಿ ಕನ್ನಡಕ ಅಥವಾ ಇತರ ಹೆಡ್‌ಸೆಟ್ ಅಗತ್ಯವಿರುವುದಿಲ್ಲ.
ಇದು ಈಗಾಗಲೇ ಗೂಗಲ್‌ನ ಕೆಲವು ಕಛೇರಿಗಳಲ್ಲಿ ಬಳಕೆಯಲ್ಲಿದ್ದು, ಪರೀಕ್ಷೆ ನಡೆದಿದೆ. ಆದರೆ, ಗ್ರಾಹಕರಿಗಾಗಿ ಮಾರುಕಟ್ಟೆ ಯಲ್ಲಿ ಬಿಡಲು ಸಾಕಷ್ಟು ಕಾಲಾವಕಾಶ ಬೇಕು ಎಂದಿದೆ ಗೂಗಲ್.
ಪ್ರಾಜೆಕ್ಟ್ ಸ್ಟಾರ್‌ಲೈನ್‌ನಲ್ಲಿ 3 ಅಂಶಗಳಿವೆ
1 ಕ್ಯಾಮೆರಾಗಳು ಮತ್ತು ಆಳ ಸಂವೇದಕಗಳು: ವ್ಯಕ್ತಿಯನ್ನು ಅನೇಕ ದೃಷ್ಟಿಕೋನಗಳಿಂದ ಸೆರೆಹಿಡಿಯುವ ವಿಶೇಷ ಸೆನ್ಸರ್ ಮತ್ತು ಕ್ಯಾಮೆರಾಗಳು.
2 ಹೆಚ್ಚಿನ ಶಕ್ತಿಯ ಕಂಪ್ಯೂಟರ್, ಸ್ಟ್ರೀಮಿಂಗ್ ಸೇರಿದಂತೆ ಕಸ್ಟಮ್ ಸಾಫ್ಟ್ವೇರ್.
3 ಬೆಳಕಿನ ಕ್ಷೇತ್ರ ಪ್ರದರ್ಶನ: 3ಡಿ ಯಲ್ಲಿ ಯಾರೊಬ್ಬರ ವಾಸ್ತವಿಕ ಪ್ರಾತಿನಿಧ್ಯವನ್ನು ನೀಡುವ ಕಸ್ಟಮ್ ಯಂತ್ರಾಂಶ.