Tuesday, 13th May 2025

ಕುಸ್ತಿಪಟು ಸುಶೀಲ್ ಕುಮಾರ್‌ಗೆ ಅಮಾನತು ಭೀತಿ

ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಅಮಾನತು ಗೊಳಿಸಲಾಗುವುದು ಎಂದು ಉತ್ತರ ರೈಲ್ವೆ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಉತ್ತರ ರೈಲ್ವೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ, ಒಲಿಂಪಿಕ್ ಪದಕ ವಿಜೇತ ಕುಮಾರ್ ಅವರನ್ನು ದೆಹಲಿ ಸರ್ಕಾರವು ಶಾಲಾ ಮಟ್ಟದಲ್ಲಿ ಕ್ರೀಡೆಗಳ ಅಭಿವೃದ್ಧಿಗಾಗಿ ಹತ್ರಾಸಲ್ ಕ್ರೀಡಾಂಗಣದಲ್ಲಿ ವಿಶೇಷ ಕರ್ತವ್ಯದ (ಒಎಸ್ಡಿ) ಅಧಿಕಾರಿಯಾಗಿ ನೇಮಕ ಮಾಡಿದೆ.

ಜತ್ರಾಸಲ್ ಕ್ರೀಡಾಂಗಣದಲ್ಲಿ ಕಿರಿಯ ಕುಸ್ತಿಪಟು ಮೃತಪಟ್ಟಿದ್ದು, ಆರೋಪದ ಮೇಲೆ ಸುಶೀಲ್ ಕುಮಾರ್‌ನನ್ನು ಒಂದು ದಿನದ ಹಿಂದೆ ಬಂಧಿಸಲಾಗಿತ್ತು, ಜೊತೆಗೆ ದೆಹಲಿಯ ಹೊರಗಿನ ಮುಂಡ್ಕಾ ಪ್ರದೇಶದ ಸಹ-ಆರೋಪಿ ಅಜಯ್ ನನ್ನು ಬಂಧಿಸಲಾಗಿತ್ತು.

ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರನ್ನು ಅಮಾನತುಗೊಳಿಸಲಾಗುವುದು. ಒಂದೆರಡು ದಿನಗಳಲ್ಲಿ ಕುಸ್ತಿಪಟು ಅಮಾನತುಗೊಳಿಸುವ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *