Monday, 12th May 2025

ಕೊಪ್ಪಳ ಗವಿಶ್ರೀ ನಡೆ ಅನುಕರಣೀಯ

ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಘಟನೆ ನಮ್ಮ ಕೊಪ್ಪಳ ಜಿಲ್ಲೆಯ ಶಾಸಕರೊಬ್ಬರು ನೂತನವಾಗಿ ಸಚಿವ ಸಂದರ್ಭ  ದಲ್ಲಿ ಅವರ ಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಅಂದಿನ ಸಮಾರಂಭಕ್ಕೆ ಪೂಜ್ಯ ಗವಿಶ್ರೀಗಳ ದಿವ್ಯ ಸಾನಿಧ್ಯವಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ಹಾರ ತುರಾಯಿಗಳ ಹೊಗಳುಭಟ್ಟರ ಆರ್ಭಟ ಆಡಂಬರ ಮುಗಿದು ಕೊನೆಗೆ ಎಲ್ಲರೂ ಆರ್ಶೀವಚನಕ್ಕೆ ಕಾಯುತ್ತಿದ್ದರು.

ಪ್ರಸ್ತುತ ದಿನಮಾನದಲ್ಲಿ ಮಠಮಾನ್ಯಗಳು ಮಠಾಧೀಶರು ರಾಜಕಾರಣದಲ್ಲಿ ಹೊಕ್ಕಿರುವಾಗ ಹಾಗೇ ಜಾತಿ ಧರ್ಮಗಳ ಓಲೈಕೆ ಗಾಗಿ ರಾಜಕಾರಣಿಗಳೇ ಮಠಮಾನ್ಯಗಳನ್ನು ಮಠಾಽಶರನ್ನು ಪರೋಕ್ಷವಾಗಿ ರಾಜಕಾರಣಕ್ಕೆ ಎಳೆ ತಂದಿರುವಾಗ ಸುಮಾರು ಒಂದೂವರೆ ದಶಕದಿಂದ ಪೀಠಕ್ಕೇರಿದ ದಿನದಿಂದಲೂ ರಾಜಕಾರಣದ ಸೋಂಕನ್ನು ಮಠಕ್ಕೆ ಒಂಚೂರು ತಾಗಿಸದೇ ಜಿಯಲ್ಲಿ ಅನ್ನ ದಾಸೋಹ ಅಕ್ಷರ ದಾಸೋಹ ಜಿಯ ಹಲವು ಕೆರೆಗಳ ಜಿರ್ಣೋದ್ದಾರ ಪರಿಸರ ಸಂರಕ್ಷಣೆ ಇನ್ನು ಅನೇಕಾನೇಕ ಕಾರ್ಯ ಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಮಾದರಿ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗೇ ಪ್ರಸ್ತುತ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊಪ್ಪಳ ಜಿಲ್ಲೆ ಕೂಡ ಕರೋನಾ ಹೊಡೆತಕ್ಕೆ ನಲುಗಿದೆ. ಇಂತಹ ಸಂದರ್ಭದಲ್ಲಿ ಗವಿಮಠದಿಂದ ಕರೋನಾ ಸೋಂಕಿತಗಾಗಿ ನೂರು ಐಸಿಯು ಬೆಡ್ ಕೇಂದ್ರ ಜತೆಗೆ ಕರೋನಾ ಸೋಂಕಿತರ ಆರೈಕೆಗಾಗಿ 200 ಹಾಸಿಗೆಗಳ ಕೇಂದ್ರ ಸ್ಥಾಪಿಸುವುದರ ಜತೆಗೆ ಅಲ್ಲಿ ದಾಖಲಾಗುವ ಸೋಂಕಿತರಿಗೆ ಭಯಮುಕ್ತ ವಾತಾವರಣ ನಿರ್ಮಿಸಲು ಅಧ್ಯಾತ್ಮ ಪ್ರವಚನ ಜತೆಗೆ ಪೌಷ್ಟಿಕ ಆಹಾರ ವ್ಯವಸ್ಥೆ ಹಾಗೇ ವಿವಿಧ ಮನೋಲ್ಲಾಸದ ಚಟುವಟಿಕೆಗಳನ್ನು ಏರ್ಪಡಿಸುವ ಮುಖೇನ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿರುವ ಕೊಪ್ಪಳ ಗವಿಶ್ರೀಗಳ
ನಡೆ ಅನುಕರಣೀಯ. ಇಷ್ಟೆ ಮಾಡಿಯೂ ನಾನು ನಿಮಿತ್ಯ ಮಾತ್ರ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವ ಗವಿಶ್ರೀಗಳ ಕಾರ್ಯ ಶ್ಲಾಘನೀಯ.

– ಲಕ್ಷ್ಮೀಕಾಂತ ಕೆ.ಬಳೂಟಗಿ ಕೊಪ್ಪಳ

Leave a Reply

Your email address will not be published. Required fields are marked *