Thursday, 15th May 2025

ಆರು ಭಾಷೆಗಳಲ್ಲಿ ದಿ ಬರ್ತ್‌

ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿವೆ.

ಆ ಸಾಲಿಗೆ ಕೊಂಡಿಯಾಗಿ ದಿ ಬರ್ತ್ ಚಿತ್ರವೊಂದು ತಯಾರಾಗಿದ್ದು, 10000 ಬಿಸಿ ಎಂದು ಅಡಿಬಹರದಲ್ಲಿ ಹೇಳಿಕೊಂಡಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರ್ತ್ ಮೂಡಿ ಬಂದಿರುವುದು ವಿಶೇಷ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವಿಕ್ರಂ ಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ನಿರ್ದೆಶಕರಾಗಿ
ಗುರುತಿಸಿಕೊಂಡಿದ್ದಾರೆ. ವಿನಾಯಕ ಮಾರುತಿ ಕ್ರಿಯೇಷನ್ಸ್‌ ಮತ್ತು ಲಕ್ಷ್ಯ ಪ್ರೊಡಕ್ಷನ್ಸ್ ಮೂಲಕ ಚಿತ್ರವು ನಿರ್ಮಾಣವಾಗಿದ್ದು, ಸೆನ್ಸಾರ್ ಅಂಗಳಕ್ಕೆ ಹೋಗಲು ತಯಾರಿ ನಡೆಸುತ್ತಿದೆ.

ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಯಾವ ರೀತಿ ಜೀವನ ನಡೆಸುತ್ತಿದ್ದ. ಪೂರ್ವ ಇತಿಹಾಸ, ಸಾಹಸ ಹೊಂದಿರುವ ಅಪರಿಚಿತ ವ್ಯಕ್ತಿಯ ಪುರಾಣಕಥೆ. ಆತನ ಅನನ್ಯ ಪಯಣ, ಜತೆಗೆ ಅವನ ಬದುಕು ಮತ್ತು ಜೀವನದ ಶೋಧವೇ ಚಿತ್ರದ ಒಂದು ಎಳೆಯ ಸಾರಾಂಶವಾಗಿದೆ. ಮೊದಲ ಹತ್ತು ನಿಮಿಷ ಪ್ರಸಕ್ತ ಕಾಲಘಟ್ಟವನ್ನು ಪರಿಚಯಿಸಿ, ನಂತರ ಗತಕಾಲಕ್ಕೆ ಚಿತ್ರ ಕರೆದು ಕೊಂಡು ಹೋಗುತ್ತದೆ ಎನ್ನುತ್ತಾರೆ ನಿರ್ದೇಶಕರು.

ಬದ್ರಿ ವರ್ಸಸ್ ಮಧುಮತಿ ಚಿತ್ರದಲ್ಲಿ ನಟಿಸಿದ್ದ ಪ್ರತಾಪ್ ರಾಣ ಈ ಚಿತ್ರದ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಪತ್ನಿಯಾಗಿ
ಅನುಷಾ ರಮೇಶ್ ನಟಿಸಿದ್ದಾರೆ. ಸಂಗೀತ ಜ್ಯುಡಸ್ಯಾಂಡಿ, ಛಾಯಾಗ್ರಹಣ ಆನಂದ ಸುಂದರೇಶ, ಸಂಕಲನ ಮಹೇಶ್ ತೋಗಟ,
ಸಾಹಸ ರಮೇಶ್, ಸೌಂಡ್ ಡಿಸೈನ್ ರಾಷ್ಟ್ರ ಪ್ರಶಸ್ತಿ ವಿಜೇತ ಮಹಾವೀರ್ ಸಬಣ್ಣನವರ್ ಅವರದಾಗಿದೆ.

ಆಗುಂಬೆ, ಸಕಲೇಶಪುರ, ಹೊನ್ನಾವರ, ಯಾಣ, ಅಂಡಮಾನ್ ಹಾಗೂ ಮೇಘಾಲಯದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿದೆ.

Leave a Reply

Your email address will not be published. Required fields are marked *