Monday, 12th May 2025

ಅರ್ಥಹೀನ ನಿಯಮಗಳು ಬೇಕೆ ?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ರಾಜ್ಯ ಸರಕಾರ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಜನತೆ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಪಾಲಿಸುವ ಮೂಲಕ ಸಹಕಾರ ನೀಡಬೇಕು.

ಇಲ್ಲವಾದರೆ ಲಾಕ್‌ಡೌನ್ ಅನಿವಾರ್ಯವಾಗಲಿದೆ ಎಂದು ರಾಜ್ಯ ಸರಕಾರ ಜನತೆಗೆ ಪದೆಪದೇ ಲಾಕ್‌ಡೌನ್ ಭೀತಿ ಸೃಷ್ಠಿಸುತ್ತಿರು ವುದು ವಿಷಾದನೀಯ, ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತೆ ರಾತ್ರಿ ಕರ್ಫ್ಯೂ ವಿಧಿಸಿದರಿಂದ ಬಹಳಷ್ಟು ಅನುಮಾನ ಮೂಡುತ್ತವೆ.

ಏಪ್ರಿಲ್ 10ರಿಂದ 20ರವರೆಗೆ ಬೆಂಗಳೂರು ಸಹಿತ ರಾಜ್ಯದ ಎಂಟು ನಗರಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ವಿಧಿಸಿರುವುದರಿಂದ ನಿಜಕ್ಕೂ ಸೋಂಕು ಪ್ರಸಾರ ತಡೆ ಸಾಧ್ಯವಿದೆಯೇ? ಕರೋನಾ ಸಾಂಕ್ರಾಮಿಕವು ರಾತ್ರಿ 10ರ ಬಳಿಕ ದಾಳಿ ಮಾಡಿ ಬೆಳಗ್ಗೆೆ ಐದು ಗಂಟೆಗೆಲ್ಲಾ ಮಾಯ ಆಗಿ ಬಿಡುತ್ತದೆಯೇ ಎನ್ನುವ ಪ್ರಶ್ನೆ ದೊಡ್ಡದಾಗಿದೆ. ಇದು ಹಾಸ್ಯಸ್ಪದಕ್ಕೆ ಸಮ
ವಾಗಿದೆ ಹೂರತು ನಿಯಮವೇನಲ್ಲ ಇಂತಹ ನಿಯಮಗಳು ತರ್ಕಹೀನವಾಗಿದೆ. ಇಂತಹ ನಿಯಮಗಳು ಈ ಹಿಂದೆಯೂ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.

ಆದರೆ ಅದರಿಂದ ಕರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎನ್ನುವ ವಾಸ್ತವವನ್ನು ಸರಕಾರ
ಮರೆಯಬಾರದು. ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವುದಕ್ಕೆ ಸರಕಾರ ಆದ್ಯತೆ ನೀಡಬೇಕು. ಆದರೆ, ಈ ದಿಸೆಯಲ್ಲಿ ನಿರೀಕ್ಷಿತ
ವೇಗದಲ್ಲಿ ಕೆಲಸ ಆಗುತ್ತಿಲ್ಲ. ರಾತ್ರಿ 10ರ ಬಳಿಕ ಊಟ- ತಿಂಡಿಗೆಂದು ಹೊರಗೆ ಓಡಾಡುವವರಿಂದ ಕರೋನಾ ಹೆಚ್ಚುತ್ತಿದೆ
ಎಂದು ಸರಕಾರ ತಿಳಿದುಕೊಂಡಿದ್ದರೆ ಅದರಷ್ಟು ಮೂರ್ಖತನ ಇನ್ನೊಂದಿಲ್ಲ.

ಇನ್ನಾದರೂ ಇಂತಹ ಕಾಟಚಾರದ ನಿಯಮಗಳು ಮಾರ್ಗಸೂಚಿಗಳನ್ನು ಹೋರಡಿಸುವುದನ್ನು ನಿರ್ಲಕ್ಷಿಸಿಕರೋನಾ ಹೆಸರಿ ನಲ್ಲಿ ಆಡಳಿತ ಮಾಡುವುದನ್ನು ಬಿಟ್ಟರೆ ಒಳಿತು. ಇಲ್ಲವಾದಲ್ಲಿ ಮುಂದಿನ ಪರಿಣಾಮಗಳು ಊಹಿಸಲು ಅಸಾಧ್ಯ. ಏಕೆಂದರೆ ಹಸಿವಿನ ರೋಗಕ್ಕಿಂತ ಮತ್ತೊಂದಿಲ್ಲ ಹಸಿವಿನ ಸಂಕಷ್ಟ ಬಹಳಷ್ಟು ತಾಂಡವಾಡುತ್ತೀದೆ ಮೊದಲು ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಿ ಹಸಿವಿನ ಕೂರತೆ ನಿವಾರಿಸಬೇಕು.
– ಸಂತೋಷ ಜಾಬೀನ್ ಕಲಬುರಗಿ

Leave a Reply

Your email address will not be published. Required fields are marked *