Monday, 12th May 2025

ಫಾಸ್ಟ್ಯಾಗ್ ಕಡ್ಡಾಯ ಸ್ವಾಗತಾರ್ಹ

ಕಳೆದ ಜನವರಿಯಿಂದ ಎಲ್ಲ ಮಾದರಿಯ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಸ್ವಾಗತಾರ್ಹ.

ಆದರೆ ಫಾಸ್ಟ್ಯಾಗ್ ನಿಯಮ ಜಾರಿಗೆ ಬಂದಾಗಿನಿಂದಲೂ ಫಾಸ್ಟ್ಯಾಗ್ ಎನ್ನುವುದೇ ಗೊಂದಲದ ಗೂಡಾಗಿದೆ. ಯಾಕೆಂದರೆ ಕಾರುಗಳು ಚಲಿಸದಿದ್ದರೂ ಅಥವಾ ಮನೆಯಲ್ಲಿ ಇದ್ದರೂ ಕೂಡ ಫಾಸ್ಟ್ಯಾಗ್ ನಿಂದ ಹಣ ಕಡಿತವಾಗುತ್ತಿದ್ದು ಈ ಬಗ್ಗೆ ಕಾರು ಮಾಲೀಕರು ರೋಸಿ ಹೋಗಿದ್ದಾರೆ. ಈ ಸಮಸ್ಯೆಯಿಂದ ರಾಜ್ಯದಾದ್ಯಂತ ಈವರೆಗೂ ಪೊಲೀಸ್ ಠಾಣೆಗೆ ಅನೇಕ ದೂರುಗಳು ಹೋಗಿವೆ ಜೊತೆಗೆ ಟೋಲ್ ಸಿಬ್ಬಂದಿ ಜೊತೆ ಪ್ರತಿ ನಿತ್ಯ ಜಗಳ ಉಂಟಾಗುತ್ತಲೇ ಇರುತ್ತವೆ.

ಕೆಲವೊಮ್ಮೆ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಇದ್ದರೂ ಬಾರ್ಕೋಡ್ ಸರಿಯಾಗಿ ರೀಡಾಗದೆ ಹಣ ಕಡಿತ ವಾಗುವುದಿಲ್ಲ ಇದರಿಂದ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿರುವ ಉದಾಹರಣೆಗಳು ಇವೆ. ಫಾಸ್ಟ್ಯಾಗ್ ನಲ್ಲಿ ಹಣ ಇಲ್ಲದಿದ್ದರೆ ಡಬಲ್ ರೇಟ್ ವಸೂಲಿ ಮಾಡುವ ಸಿಬ್ಬಂದಿ ಇಂತಹ ತಾಂತ್ರಿಕ ಸಮಸ್ಯೆ ಬಗೆಹರಿಸುವುದಲ್ಲವೇ, ಇವೆಲ್ಲವುಗಳನ್ನು ನೋಡುತ್ತಿದ್ದರೆ ಹಣ ಕೊಟ್ಟು ಪಾವತಿ ಮಾಡುವ ಹಿಂದಿನ ನಿಯಮವೇ ಉತ್ತಮ ಎನಿಸುತ್ತದೆ,

ಕೇಂದ್ರ ಸರ್ಕಾರ ತುರ್ತಾಗಿ ಇತ್ತ ಗಮನಹರಿಸಿ ಗೊಂದಲದ ಗೂಡಾಗಿರುವ ಫಾಸ್ಟ್ಯಾಗ್ ನಲ್ಲಿ ಉಂಟಾಗಿರುವ ತಾಂತ್ರಿಕ
ಲೋಪವನ್ನು ಬಗೆಹರಿಸಬೇಕಾಗಿದೆ.

– ಮುರುಗೇಶ.ಡಿ ದಾವಣಗೆರೆ

Leave a Reply

Your email address will not be published. Required fields are marked *