Wednesday, 14th May 2025

ಭಾರತಕ್ಕೆ ಬರಲಿದೆ ಟೆಸ್ಲಾ ಕಾರ್‌

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ಮುಂದಿನ ದಿನಗಳಲ್ಲಿ ಏನಿದ್ದರೂ ವಿದ್ಯುತ್ ಕಾರುಗಳದೇ ಭರಾಟೆ. ಅದನ್ನು ಗುರುತಿಸಿದ ಹೆಚ್ಚಿನ ಸಂಸ್ಥೆಗಳು ಅದಾಗಲೇ ವಿದ್ಯುತ್ ಕಾರುಗಳನ್ನು ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ, ಅಮೆರಿಕದ ಖ್ಯಾತ ಟೆಸ್ಲಾ ಸಂಸ್ಥೆಯು ತನ್ನ ಅತ್ಯಾಧುನಿಕ ವಿದ್ಯುತ್ಕಾರುಗಳನ್ನು ಭಾರತದ ಗ್ರಾಹಕರಿಗೆ ಪರಿಚಯಿಸಲು ಸನ್ನದ್ಧವಾಗಿದೆ.

2003 ರಲ್ಲಿ ಅಮೇರಿಕದಲ್ಲಿ ಆರಂಭವಾದ ಟೆಸ್ಲಾ ಕಾರು ನಿರ್ಮಾಣ ಸಂಸ್ಥೆ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಿ ಇಂದು  ವಿಶ್ವದ ಲಾಭದಾಯಕ ಸಂಸ್ಥೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. 2021 ಜನವರಿ 8 ರಂದು ನಮ್ಮ ಬೆಂಗಳೂರಿನಲ್ಲಿ ತನ್ನ ಭಾರತದ ಕಚೇರಿಯನ್ನು ನೋಂದಣಿ ಮಾಡಿದ ಟೆಸ್ಲಾ ಭಾರತದಲ್ಲಿ ಕಾರು ಉತ್ಪಾದಿಸುವುದಕ್ಕೆ ಆಸಕ್ತಿ ತೋರಿಸಿದೆ.

ವಿಶ್ವದ ಐದನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿರುವ ಭಾರತದಲ್ಲಿ ಅದಾಗಲೇ ಹಲವಾರು ದೈತ್ಯ ಕಾರು ಉತ್ಪಾದಕ ಸಂಸ್ಥೆಗಳಿವೆ. ದಶಕಗಳಿಂದ ಭಾರತದಲ್ಲಿ ಕಾರು ಉತ್ಪಾದಿಸುತ್ತಿರುವ ವಿದೇಶಿ ಸಂಸ್ಥೆಗಳಾದ ಫೋಕ್ಸ್‌ ವಾಗನ್, ಫೋರ್ಡ್, ನಿಸ್ಸಾನ್ ನಂತಹ ಸಂಸ್ಥೆಗಳು ಇಂದಿಗೂ ಭಾರತದ ಕಾರು ಮಾರು ಕಟ್ಟೆಯ ಒಂದು ಪ್ರತಿಶತ ಪಾಲನ್ನು ಪಡೆಯಲು ಕಷ್ಟ ಪಡುತ್ತಿವೆ.

2019 ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ಕಿಯಾ ಮಾತ್ರ ಇದಕ್ಕೆ ವಿರುದ್ಧ. ಕಾರುಗಳ ವಾರ್ಷಿಕ ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತು ಹುಂಡೈ ನಂತರದ ಸ್ಥಾನ ಸದ್ಯ ಕಿಯಾದ ಪಾಲಾಗಿದೆ, ಅದೇ ವರ್ಷ ಮಾರುಟ್ಟೆಯನ್ನು ಪ್ರವೇಶಿಸಿದ ಎಂಜಿ ಹೆಕ್ಟರ್ ಮಾರಾಟದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. 2020ರ ಕೋವಿಡ್‌ನಿಂದಾದ ಆರ್ಥಿಕ ಹೊಡೆತವನ್ನು ಸರಿಪಡಿಸಿ ಕೊಳ್ಳುತ್ತಿರುವ ಭಾರತದ ಜನತೆಗೆ ದುಬಾರಿ ಬೆಲೆಯ ಟೆಸ್ಲಾ ಕಾರು ಖರೀದಿ ನಿಜಕ್ಕೂ ಕಷ್ಟಸಾಧ್ಯ.

ಆದರೂ ಬಹಳ ವರ್ಷಗಳಿಂದ ಟೆಸ್ಲಾ ಕಾರನ್ನೇ ಖರೀದಿಸಬೇಕು ಎಂದು ಕಾದು ಕುಳಿತಿದ್ದ ಟೆಸ್ಲಾ ಅಭಿಮಾನಿಗಳಿಗೆ ಸಂಸ್ಥೆಯ ಆಗಮನ ನಿಜಕ್ಕೂ ಸಂತಸ ಮೂಡಿಸಿದೆ. ಸದ್ಯದ ಸ್ಥಿತಿಗತಿಗಳನ್ನು ನೋಡಿದರೆ ಟೆಸ್ಲಾ, ಕೀಯಾ ರೀತಿಯಲ್ಲಿ ಭಾರತದ ಮಾರುಕಟ್ಟೆ ಯಲ್ಲಿ ಯಶಸ್ಸುಗಳಿಸಬಹುದೇ ? ಭಾರತದಲ್ಲಿ ವಿದ್ಯುತ್ ಚಾಲಿತ ಕಾರುಗಳಿಗಿರುವ ಸಮಸ್ಯೆಗಳು ಇತ್ತೀಚೆಗೆ ಕಟ್ಟುತ್ತಿರುವ ಹೊಸ ಮಾಲ್, ಅಪಾರ್ಟ್‌ಮೆಂಟ್ ಗಳ ವಾಹನ ನಿಲುಗಡೆ ಜಾಗದಲ್ಲಿ ವಿದ್ಯುತ್ ಅನ್ನು ಚಾರ್ಜ್
ಮಾಡುವ ಸೌಲಭ್ಯವನ್ನು ಒದಗಿಸುವುದು ಸಾಮಾನ್ಯವಾಗಿದೆ.

ಇವುಗಳನ್ನು ಬಿಟ್ಟರೆ ಕೆಲವೇ ಕೆಲವು ವಿದ್ಯುತ್‌ಅನ್ನು ಚಾರ್ಜ್ ಮಾಡುವ ಸ್ಥಳಗಳಿವೆ ಭಾರತದಲ್ಲಿ. ಟೆಸ್ಲಾ ಮಾತ್ರವಲ್ಲ
ಯಾವುದೇ ಕಾರು ತಯಾರಿಕಾ ಸಂಸ್ಥೆ ವಿದ್ಯುತ್ ಚಾಲಿತ ಕಾರನ್ನು ಭಾರತದಲ್ಲಿ ತಯಾರಿಸಬೇಕೆಂದರೆ ಕೇವಲ ಕಾರು ಉತ್ಪಾದಿಸಿ ದರೆ ಸಾಧ್ಯವಾಗುವುದಿಲ್ಲ, ಜತೆಯಲ್ಲೇ ದೇಶಾದ್ಯಂತ ವಿದ್ಯುತ್ ಅನ್ನು ಚಾರ್ಜ್ ಮಾಡುವ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸ ಬೇಕಾಗುತ್ತದೆ. ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ವಿದ್ಯುತ್ ಅವಶ್ಯಕತೆಯನ್ನು ಹೊಂದಿರುವುದರಿಂದ ಒಂದು ಸಂಸ್ಥೆಯ ಚಾರ್ಜಿಂಗ್ ಕೇಂದ್ರವನ್ನು ಇತರ ಸಂಸ್ಥೆಯ ಕಾರುಗಳು ಉಪಯೋಗಿಸಲಾಗುವುದಿಲ್ಲ. ಹಾಗಾಗಿ ಮಾರುಕಟ್ಟೆಗೆ ಪ್ರವೇಶಿಸ ಲಿಚ್ಚಿಸುವ ಪ್ರತಿಯೊಂದು ವಿದ್ಯುತ್ ಚಾಲಿತ ಕಾರು ಉತ್ಪಾದಕ ಸಂಸ್ಥೆ ಈ ರೀತಿಯಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸು ವುದು ದುಬಾರಿಯಾಗಬಹುದು.

ಟೆಸ್ಲಾ ಸಹ ಮಾರುಕಟ್ಟೆಯನ್ನು ಪ್ರವೇಶಿಸಬೇಕೆಂದರೆ ಈ ರೀತಿ ಎಲ್ಲೆಡೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಭಾರತದ ಮಾರುಕಟ್ಟೆಗೆ ಟೆಸ್ಲಾ ಕಾರುಗಳು ಬಹಳ ದುಬಾರಿಯಾಗಬ. ಟೆಸ್ಲಾ ಕಾರಿನ ಆರಂಭಿಕ ಕಾರಿನ ಮೌಲ್ಯ ಸುಮಾರು 40 ಲಕ್ಷ ರುಪಾಯಿಗಳ ಆಸು ಪಾಸಿನಲ್ಲಿರಲಿದೆ. ಭಾರತದ ಮಟ್ಟಿಗೆ ಇದನ್ನು ದುಬಾರಿ ಕಾರು ಎಂದು ಹೇಳಬಹುದು. ಭಾರತದಲ್ಲಿ ಅದಾಗಲೇ ಅತ್ಯಂತ ಜನಪ್ರಿಯವಾಗಿರುವ ಬೆಂಜ್ ಮತ್ತು ಬಿಎಂಡಬ್ಲೂ ಕಾರುಗಳು ಕೇವಲ ಒಟ್ಟಾರೆ ಕಾರು ಮಾರಾಟದ  ಕೇವಲ ಒಂದು ಪ್ರತಿಶತ ಪಾಲನ್ನು ಹೊಂದಿವೆ. ಭಾರತದಲ್ಲಿ ನೆಲೆ ಕಂಡುಕೊಳ್ಳಲು ಟೆಸ್ಲಾ ಇವುಗಳ ಜೊತೆ ಸ್ಪರ್ಧಿಸಿ ಗೆಲ್ಲುವುದು
ಅನಿವಾರ್ಯ.

ಟೆಸ್ಲಾಗಿರುವ ಇನ್ನೊಂದು ಮುಖ್ಯ ಸವಾಲೆಂದರೆ ಭಾರತದ ರಸ್ತೆಗಳು. ಟೆಸ್ಲಾದಲ್ಲಿರುವ ಆಧುನಿಕ ವ್ಯವಸ್ಥೆಗಳಾದ ಚಾಲಕ ರಹಿತ ಚಾಲನೆ, ಸ್ವಯಂ ಚಾಲಿತವಾಗಿ ಕಾರಿನ ದಿಕ್ಕನ್ನು ರಸ್ತೆಯ ಮೇಲೆ ಬದಲಿಸುವುದು ಇತ್ಯಾದಿಗಳಿಗೆ ನಮ್ಮ ದೇಶದ ರಸ್ತೆಗಳು ಇನ್ನೂ ಸಿದ್ಧವಿಲ್ಲದ ಕಾರಣ ನಿಜವಾದ ಟೆಸ್ಲಾ ಅನುಭವವನ್ನು ಪಡೆಯಲು ಭಾರತದ ಗ್ರಾಹಕನಿಗೆ ಸಾಧ್ಯವಾಗುವುದಿಲ್ಲ.

ಬಹಳಷ್ಟು ಜನರಿಗೆ ಗೊತ್ತಿರದ ಸಂಗತಿಯೇನೆಂದರೆ ಭಾರತದ ಜನಸಂಖ್ಯೆಗೆ ಹೊಲಿಸಿದರೆ ಭಾರತದ ಕಾರು ಮಾರುಕಟ್ಟೆ ಅತ್ಯಂತ ಚಿಕ್ಕದಾದುದು. ವಾರ್ಷಿಕ ಕೇವಲ 3.5 ಮಿಲಿಯನ್ ಕಾರುಗಳು ಭಾರತದಲ್ಲಿ ಮಾರಟವಾಗುತ್ತವೆ. ಅದೇ ಚೀನಾದಲ್ಲಿ ಪ್ರತಿವರ್ಷ 25 ಮಿಲಿಯನ್ ಕಾರುಗಳು ಮಾರಾಟವಾಗುತ್ತವೆ. ಭಾರತದಲ್ಲಿ ಪ್ರತಿ ಸಾವಿರ ಜನ ಸಂಖ್ಯೆಗೆ ಕೇವಲ 22 ಜನರ ಬಳಿ ಮಾತ್ರ ಕಾರುಗಳಿವೆ.

ಅಮೆರಿಕದಲ್ಲಿ ಈ ಸಂಖ್ಯೆ ಸಾವಿರಕ್ಕೆ 800. ಇಷ್ಟೆಲ್ಲ ಸಮಸ್ಯೆಗಳ ಅರಿವಿದ್ದರೂ ಟೆಸ್ಲಾ ಭಾರತದಲ್ಲಿ ಕಾರು ಮಾರಾಟ ಮಾಡಲು
ಆಸಕ್ತಿ ತೋರಿಸಲು ಕಾರಣವೇನು? 2020 ರಿಂದ 2027 ರ ವರೆಗೆ ಭಾರತದ ಕಾರು ಮಾರುಕಟ್ಟೆ 11.3 ಪ್ರತಿಶತ ಹೆಚ್ಚಾಗಲಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ದುಬಾರಿ ಬೆಲೆಯ ಕಾರುಗಳ ಮಾರಾಟ ಕೂಡ ಮುಂದಿನ 5 ವರ್ಷದಲ್ಲಿ 5 ಪ್ರತಿಶತ ಹೆಚ್ಚಾಗಲಿದೆ. ಹಾಗಾಗಿ ಟೆಸ್ಲಾ ತನ್ನ ಸಂಸ್ಥೆಯನ್ನು ಭಾರತದಲ್ಲಿ ನೋಂದಣಿ ಮಾಡಿರುವುದು ಈ ಕೂಡಲೇ ಕಾರು ತಯಾರಿಸಿ ಲಾಭ ಗಳಿಸುವು ದಕ್ಕಾಲ್ಲ, ಬದಲಾಗಿ ಭವಿಷ್ಯದ ವಿದ್ಯುತ್ ಚಾಲಿತ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿ ತನ್ಮೂಲಕ ಲಾಭಗಳಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಅದಾಗಲೇ ಟಾಟ, ಮಹೀಂದ್ರದಂತಹ ದೇಸಿ ಕಾರು ಉತ್ಪಾದಕ ಸಂಸ್ಥೆಗಳು ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲು ಅಣಿಗೊಳ್ಳುತ್ತಿವೆ. ಹಾಗೆ ನೋಡಿದರೆ ಅವು ಟೆಸ್ಲಾಗಿಂತ ಅದಾಗಲೇ ಬಹಳಷ್ಟು ಮುಂದೆ ಸಾಗಿವೆ. ಟಾಟ
ಸಂಸ್ಥೆಯಂತೂ ಭಾರತದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅದಾಗಲೇ ಯೋಜನೆ ರೂಪಿಸಿದೆ.

ಟೆಸ್ಲಾ ಕೆಲ ಕಾಲ ಕಾದು ಈ ಸಂಸ್ಥೆಗಳ ವಿದ್ಯುತ್ ಚಾಲಿತ ವಾಹನಗಳು ಹೇಗೆ ಗ್ರಾಹಕ ಸ್ವೀಕರಿಸುತ್ತಾನೆ ಎನ್ನುವುದನ್ನು ನೋಡಿ ತನ್ನ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಬಹುದು. ಆರಂಭದಲ್ಲಿ ಟೆಸ್ಲಾ ಭಾರತದಲ್ಲಿ ಕಾರು ಉತ್ಪಾದಿಸುವುದಿಲ್ಲ. ಒಂದೋ ಚೀನಾದಿಂದ ಬಿಡಿ ಭಾಗಗಳನ್ನು ತಂದು ಭಾರತದಲ್ಲಿ ಜೋಡಿಸಿ ಮಾರಾಟ ಮಾಡಬಹುದು, ಇಲ್ಲವೇ ಪೂರ್ತಿ ಸಿದ್ಧ ಗೊಂಡ ಕಾರನ್ನು ಅಮೇರಿಕ ಅಥವಾ ಚೀನಾ ದೇಶಗಳಿಂದ ತಂದು ಭಾರತದಲ್ಲಿ ಮಾರಟ ಮಾಡಬಹುದು.

ಭಾರತದಲ್ಲಿ ಲಾಭಗಳಿಸುವಲ್ಲಿ ಟೆಸ್ಲಾ ಸೋತರೂ ಕೊನೆಯಲ್ಲಿ ಭಾರತವನ್ನು ತನ್ನ ಉತ್ಪಾದಕ ಘಟಕವನ್ನು ಸ್ಥಾಪಿಸಿ ಕಡಿಮೆ
ಬೆಲೆಗೆ ಕಾರನ್ನು ಉತ್ಪಾದಿಸಿ ಇತರ ಏಶಿಯಾ ದೇಶಗಳಿಗೆ ಸರಬರಾಜು ಮಾಡಬಹುದು. ಮೊದಲಿನಿಂದಲೂ ಅಸಾಧ್ಯ ಎನ್ನುವು ದನ್ನು ಸಾಧಿಸಿ ತೋರಿಸಿದ ಎಲಾನ್ ಮಸ್ಕ್‌ ಭಾರತದಲ್ಲೂ ತನ್ನ ಮೋಡಿ ಮಾಡಬಹುದು, ಕಾದು ನೋಡೋಣ.

Leave a Reply

Your email address will not be published. Required fields are marked *