ಹಾಹಾಕಾರ್
ಇಂದುಧರ ಹಳೆಯಂಗಡಿ
ಇಂದು ಕೋವಿಡ್ 19 ವೈರಸ್ನ ಎರಡನೆಯ ಅಲೆ ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿದೆ. ಕಾರುಗಳಲ್ಲಿ ಪಯಣಿಸು ವಾಗ ಕೋವಿಡ್-19 ವೈರಸ್ನ ಭಯವನ್ನು ಹೋಗಲಾಡಿಸಲು, ಆ ವೈರಸ್ನ್ನು ದೂರ ಮಾಡುವ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸುವ ದಿನಗಳು ಈಗ ಬಂದಿವೆ.
ಕೋವಿಡ್ 19 ವೈರಸ್ ವಿಶ್ವವ್ಯಾಪಿ ಹರಡಿದಂದಿನಿಂದ ಹಲವು ಕಾರ್ಪೋರೇಟ್ ಸಂಸ್ಥೆಗಳು, ತಮ್ಮ ಉತ್ಪನ್ನಗಳಲ್ಲಿ ಆ್ಯಂಟಿ ವೈರಸ್ ಅಥವಾ ನಿರ್ದಿಷ್ಟವಾಗಿ ಕರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಗುಣಗಳನ್ನು ಪರಿಚಯಿಸಿದವು. ಸಾಬೂನು, ಸ್ಯಾನಿಟೈಜರ್ಗಳು ಮಾತ್ರವಲ್ಲದೆ ಹಲ್ಲುಜ್ಜುವ ಬ್ರಶ್, ಎಸಿ, ಪೈಂಟ್, ಪ್ಲೈವುಡ್ ಎಲ್ಲವೂ ಸಾಂಕ್ರಾಮಿಕ ರೋಗದ ವಿರುದ್ಧ
ಸಮರ ಸಾರಿದವು.
ಅದಕ್ಕೀಗ ಹೊಸ ಸೇರ್ಪಡೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು! ತಮ್ಮ ಕಾರುಗಳಲ್ಲಿ ಪ್ರಸ್ತುತ ಇರುವ ಪಿಎಂ 2.5 ಫಿಲ್ಟರ್ ಮತ್ತು ನ್ಯಾನೋ ಟೆಕ್ನಾಲಜಿ ಫಿಲ್ಟರ್ ಅನ್ನು ಬದಲಿಸಿ, ಹೊಸ ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಪರಿಚಯಿಸಲು ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಮುಂದಾಗಿದೆ. ಈ ಹೊಸ ಫಿಲ್ಟರ್ಅನ್ನು ನ್ಯಾನೋ ಎಕ್ಸ್ ಎಂದು ಕರೆಯಲಾಗುತ್ತದೆ. ಪ್ಯಾನಸೋನಿಕ್ ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸುತ್ತಿದೆ.
ಈ ನೂತನ ವಾಯು ಶುದ್ಧೀಕರಣ ತಂತ್ರಜ್ಞಾನವನ್ನು ಎರಡು ಪ್ರತ್ಯೇಕ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಪರೀಕ್ಷಿಸಿವೆ. ಪರ್ಫೆಕ್ಟಸ್ ಬಯೋಮೆಡ್ ಲಿ. ಸಂಸ್ಥೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ, 30 ನಿಮಿಷಗಳಲ್ಲಿ ಶೇ.97ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂದು ಫಲಿತಾಂಶ ಬಂದಿದೆ. ಅದಲ್ಲದೆ, ನಿರ್ದಿಷ್ಟವಾಗಿ ಕರೋನಾ ವೈರಸ್ಅನ್ನು ಗುರಿಯಾಗಿಸಿಕೊಂಡು, ಟೆಕ್ಸೆಲ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಎರಡು ಗಂಟೆಗಳೊಳಗೆ ಶೇ.99.99ರಷ್ಟು ಯಶಸ್ಸಿನ ಪ್ರಮಾಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ನ್ಯಾನೋ ಎಕ್ಸ್ ತಂತ್ರಜ್ಞಾನ
ಇದನ್ನು ಸರಳವಾಗಿ ಹೇಳುವುದಾದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪರಿಚಯಿಸಲು ಹೊರಟಿರುವ ಹೊಸ ನ್ಯಾನೋ ಎಕ್ಸ್ ತಂತ್ರಜ್ಞಾನವು ಹಳೆಯ ನ್ಯಾನೋ ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ. ವಾಯು ಶುದ್ಧೀ ಕರಣ ಮಾಡುವುದರೊಂದಿಗೆ, ಈ ತಂತ್ರಜ್ಞಾನವು ಗಾಳಿಯಲ್ಲಿ ಹರಡಿರುವ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾ ಗಳನ್ನು ನಾಶ ಮಾಡುತ್ತದೆ.
ಈ ತಂತ್ರಜ್ಞಾನವು ಗಾಳಿಯಲ್ಲಿ ನೈಸರ್ಗಿಕವಾಗಿ ಹರಿಡಿಕೊಂಡಿರುವ ಹೈಡ್ರಾಕ್ಸಿಲ್ ರಾಡಿಕಲ್ಸ್ ಅಯಾನ್ ಅನ್ನು ಬಳಸುತ್ತದೆ. ವಿಶೇಷ ಸಂಗತಿಯೆಂದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ವಿದ್ಯುತ್ ಅನ್ನು ಬಳಸಿ ಹೈಡ್ರಾಕ್ಸಿಲ್ ರಾಡಿಕಲ್ ನಂತಹ ಟ್ರಿಲಿಯನ್ ಅಯಾನ್ಗಳನ್ನು ಕಾರಿನೊಳಗೆಯೇ ಉತ್ಪಾದಿಸಿ, ಅಲ್ಲಿ ಹರಡಿರುವ ವೈರಸ್ ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚಿ, ಅದನ್ನು ಕಾರಿನಿಂದ ಹೊಡೆದೋಡಿಸುವುದಲ್ಲದೆ, ಅದರ ಸಂತಾನೋತ್ಪತ್ತಿ ಮತ್ತು ಹರಡುವ ಸಾಮರ್ಥ್ಯವನ್ನು ಕೊನೆಗೊಳಿಸು ತ್ತದೆ.
ಕಾರುಗಳಲ್ಲಿ ಆ್ಯಂಟಿವೈರಸ್ ತಂತ್ರಜ್ಞಾನವನ್ನು ಅಳವಡಿಸಲು ಕೆಲಸ ಮಾಡುತ್ತಿರುವ ಜಾಗ್ವರ್ ಲ್ಯಾಂಡ್ ರೋವರ್, ಜನರ ಹಿತಾಸಕ್ತಿಯನ್ನು ಗಮನಿಸಿ ಈ ಉಪಕ್ರಮ ಕೈಗೊಂಡಿದೆ. ಈ ಕ್ಷೇತ್ರದಲ್ಲಿ ಇದು ಮೊದಲ ಕಂಪೆನಿ ಎಂದು ಹೇಳುವಂತಿಲ್ಲ. ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕದ ವಿಚಾರ ಪ್ರಚಾರಕ್ಕೆ ಬಂದ ಕೂಡಲೆ, ಇಟಾಲಿಯನ್ ಕಾರು ಬಿಡಿಭಾಗ ತಯಾರಕ ರಾದ ಯುಎಎಫ್ಐ ಫಿಲ್ಟರ್ಸ್, ಭಾರತದಲ್ಲಿ ಆಂಟಿ-ವೈರಸ್ ಕ್ಯಾಬಿನ್ ಫಿಲ್ಟರ್ ಅನ್ನು ಬಿಡುಗಡೆ ಮಾಡಿತ್ತು.
ಜೆಎಲ್ಆರ್ ಕಾರಿನೊಳಗೆ ಕಾಲಿಡುವ ಮೊದಲು, ಈ ಆ್ಯಂಟಿ ವೈರಸ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸಬಹುದು. ಐ-ಪೇಸ್, ಲ್ಯಾಂಡ್ರೋವರ್, ಡಿಸ್ಕವರಿ ಮತ್ತು ಇವೋಕ್ ನಂತಹ ಹೊಸ ಜನರೇಷನ್ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸ ಲಾಗುವುದು ಎಂದು ಜೆಎಲ್ಆರ್ ಸಂಸ್ಥೆ ಹೇಳಿಕೊಂಡಿದೆ. ಆದರೆ ತಂತ್ರಜ್ಞಾನವನ್ನು ಯಾವಾಗ ವಾಣಿಜ್ಯೀಕರಿಸಲಾಗುವುದು ಅಥವಾ ತಮ್ಮ ಸಂಸ್ಥೆಯ ಯಾವ ಕಾರಿನಲ್ಲಿ ಈ ವ್ಯವಸ್ಥೆಯನ್ನು ಮೊದಲು ಪರಿಚಯಿಸಲಾಗುವುದು ಎಂಬುದನ್ನು
ಜೆಎಲ್ಆರ್ ಇನ್ನೂ ದೃಢೀಕರಿಸಿಲ್ಲ.
ಅದೇನೇ ಇದ್ದರೂ, ವೈರಸ್ನ ಭಯವನ್ನು ಹೋಗಲಾಡಿಸಿ, ವಾಹನ ಚಲಿಸುವ ಹೊಸ ಅನುಭವವನ್ನು ಸದ್ಯದಲ್ಲೇ ನಮ್ಮದಾಗಿಸಿ ಕೊಳ್ಳಬಹುದು. ಕೋವಿಡ್ನ ಎರಡನೆಯ ಅಲೆಯು ಈಗ ಹರಡುತ್ತಿರುವ ಸನ್ನಿವೇಶದಲ್ಲಿ ಈ ಸುದ್ದಿಯು ತುಸು ಧೈರ್ಯ ತುಂಬು ವಂತಿದೆ. ಮುಂದಿನ ದಿನಗಳಲ್ಲಿ ಕೇವಲ ಕೋವಿಡ್ 19 ಮಾತ್ರವಲ್ಲ, ಇತರ ವಿವಿಧ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಸಹ ಈ ತಂತ್ರಜ್ಞಾನ ಸಹಾಯ ಮಾಡುವುದರಿಂದಾಗಿ, ಇದರಿಂದ ಹಲವು ವಿಧದ ಉಪಯೋಗಗಳೂ ಇವೆ. ಮುಂದಿನ ವರ್ಷ ಗಳಲ್ಲಿ ಬೇರೆ ಕಂಪೆನಿಗಳು ಸಹ ಇಂತಹ ತಂತ್ರಜ್ಞಾನವನ್ನು ತಾವು ತಯಾರಿಸಲಿರುವ ಕಾರುಗಳಲ್ಲಿ ಅಳವಡಿಸಲು ಮುಂದಾಗ ಬಹುದು.
ಶೇ.99.99 ಯಶಸ್ಸು
ಜೆಎಲ್ಆರ್ನ ಹೊಸ ವಾಯು ಶುದ್ಧೀಕರಣ ತಂತ್ರಜ್ಞಾನವು ಈ ಹಿಂದೆ ಬಳಕೆಯಲ್ಲಿದ್ದ ಇಂತಹದ್ದೇ ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದು ವಿವಿಧ ರೀತಿಯ ಶೇಕಡಾ 97 ರಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ ಳೊಂದಿಗೆ ಹೋರಾಡಬಲ್ಲದು. ಕೋವಿಡ್19 ವೈರಸ್ ವಿರುದ್ಧ ಶೇಕಡಾ 99.99 ರಷ್ಟು ಯಶಸ್ಸಿನ ಪ್ರಮಾಣ ಹೊಂದಿದೆ.