Wednesday, 14th May 2025

ರಾಹುಲ್‌ ಫಾರ್ಮ್‌‌ಗೆ ಮರಳಲು ಒಂದು ಇನ್ನಿಂಗ್ಸ್ ಸಾಕೆಂದ ಕ್ಯಾಪ್ಟನ್‌ ಕೊಹ್ಲಿ

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯ ಮೂರನೇ ಪಂದ್ಯದಲ್ಲೂ ಖಾತೆ ತೆರೆಯುವಲ್ಲಿ ಕೆ.ಎಲ್. ರಾಹುಲ್ ವಿಫಲವಾಗಿದ್ದರು.

ಆದರೆ, ಆರಂಭಿಕ ಸ್ಥಾನಕ್ಕೆ ಕೆ.ಎಲ್. ರಾಹುಲ್ ಯೋಗ್ಯ ಬ್ಯಾಟ್ಸ್‌ಮನ್ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸಮರ್ಥಿಸಿಕೊಂಡಿದ್ದಾರೆ.

ಕೆಎಲ್ ರಾಹುಲ್ ಚಾಂಪಿಯನ್ ಆಟಗಾರ. ಕಳೆದ 2-3 ವರ್ಷಗಳಲ್ಲಿ ಅವರ ಅಂಕಿಅಂಶಗಳನ್ನು ನೋಡಿದರೆ ಬಹುಶಃ ಅವರೇ ಎಲ್ಲರಿಗಿಂತಲೂ ಅತ್ಯುತ್ತಮ ಆಟಗಾರ ಎಂದೆನಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಜೊತೆಗೆ ನಮ್ಮ ಪ್ರಮುಖ ಬ್ಯಾಟ್ಸ್‌ಮನ್ ಆಗಿ ರಾಹುಲ್ ಮುಂದುವರಿಯಲಿದ್ದಾರೆ. ಎರಡು ಪಂದ್ಯಗಳ ಹಿಂದೆ ನಾನು ಕೂಡಾ ವೈಫಲ್ಯ ಅನುಭವಿಸಿದ್ದೆ. ಟಿ20 ಪಂದ್ಯದಲ್ಲಿ ಐದು-ಆರು ಎಸೆತಗಳನ್ನು ಎದುರಿಸುವ ವಿಚಾರವಾಗಿದ್ದು, ಇದ್ದಕ್ಕಿದ್ದಂತೆ ನೀವು ಲಯಕ್ಕೆ ಮರಳುವಿರಿ ಎಂದು ಹೇಳಿದರು.

ಟಿ20 ಮಾದರಿಯಲ್ಲಿ ಯಾರೂ ಕೂಡಾ ವೈಫಲ್ಯ ಅನುಭವಿಸಬಹುದು. ಕೆಎಲ್ ರಾಹುಲ್ 145ರ ಸ್ಟ್ರೇಕ್‌ರೇಟ್‌ನಲ್ಲಿ 40ಕ್ಕೂ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಹೇಳಿದರು.

ನಾವೀಗ ಕೆ.ಎಲ್. ರಾಹುಲ್‌ರನ್ನು ಬೆಂಬಲಿಸಬೇಕಿದೆ. ಕೇವಲ ಒಂದು ಇನ್ನಿಂಗ್ಸ್ ಅಥವಾ ಹೊಡೆತದಿಂದ ಫಾರ್ಮ್‌ಗೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ. ಈ ಕೆಟ್ಟ ಫಾರ್ಮ್‌ನಿಂದ ಅವರು ಆದಷ್ಟು ಬೇಗನೇ ಹೊರಬರುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *