Thursday, 15th May 2025

ಆಂಧ್ರ ಸ್ಥಳೀಯ ಸಂಸ್ಥೆ ಚುನಾವಣೆ: ಮುಂಚೂಣಿಯಲ್ಲಿ ವೈಎಸ್ ಆರ್ ಸಿ

ವಿಜಯವಾಡ: ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ ಆರ್ ಸಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ.

ಇತ್ತೀಚಿನ ಫಲಿತಾಂಶದ ಪ್ರಕಾರ, ಎಲ್ಲಾ 10 ನಗರ ಪಾಲಿಕೆ ಮತ್ತು 69 ಪುರಸಭೆಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು ವೈಎಸ್ ಆರ್ ಸಿ ಮುಂಚೂಣಿಯಲ್ಲಿದೆ. ವಿಪಕ್ಷ ಟಿಡಿಪಿ ಗುಂಟೂರು ನಗರ ಪಾಲಿಕೆಗಳಲ್ಲಿ ಸಹ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಗಳಿಸಲು ಸಾಧ್ಯವಾಗುತ್ತಿಲ್ಲ.

12 ನಗರ ಪಾಲಿಕೆ ಮತ್ತು 71 ಪುರಸಭೆಗಳಿಗೆ ಮಾ.10ರಂದು ಚುನಾವಣೆ ನಡೆದಿತ್ತು. ಎಲೂರು ನಗರ ಪಾಲಿಕೆಯ ಮತ ಎಣಿಕೆ ಕಾರ್ಯ ನಡೆದಿಲ್ಲ. ವೈಎಸ್ ಆರ್ ಸಿ ತಿರುಪತಿ, ಚಿತ್ತೂರು, ಒಂಗೊಲೆ ಮತ್ತು ಕುರ್ನೂಲು ಮುನ್ಸಿಪಾಲಿಟಿ ಗಳಲ್ಲಿ ಮುಂಚೂಣಿ ಯಲ್ಲಿದ್ದು 69 ಪುರಸಭೆಗಳಲ್ಲಿ ಸಹ ಮುಂಚೂಣಿಯಲ್ಲಿದೆ.

ಬಿಜೆಪಿ-ಜನ ಸೇನಾ ಪಕ್ಷ ತನ್ನ ಛಾಪು ಮೂಡಿಸಿಲ್ಲ. ಕಡಪ, ಪೂರ್ವ ಗೋದಾವರಿ, ಒಂಗೊಲೆ ಮತ್ತು ಇತರೆಡೆಗಳಲ್ಲಿ ವೈಎಸ್ ಆರ್ ಸಿ ನಗರ ಪಾಲಿಕೆ ಮತ್ತು ಪುರಸಭೆಗಳಲ್ಲಿ ಮುಂಚೂಣಿ ವಹಿಸಿದೆ.

Leave a Reply

Your email address will not be published. Required fields are marked *