Thursday, 15th May 2025

ತೆರೆಗೆ ಸಿದ್ದವಾದ ರಣಂ

ಕಳೆದ ವರ್ಷ ನಿಧನರಾದ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ‘ರಣಂ’ ಚಿತ್ರ ಇದೇ ತಿಂಗಳ 26 ರಂದು ಬಿಡುಗಡೆ ಯಾಗುತ್ತಿದೆ.

ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ರಣಂ’ ತೆರೆ ಕಾಣಲಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವ್ಧಾರಿ ಹೊತ್ತುಕೊಂಡಿದ್ದಾರೆ. ‘ರಣಂ’, ಶ್ರೀನಿವಾಸ್ ನಿರ್ಮಾಣ ಮಾಡಿರುವ 21ನೇ ಚಿತ್ರ. ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರದಲ್ಲಿ ದಿ.ಚಿರಂಜೀವಿ ಸರ್ಜಾ ನಟಿಸಿದ್ದಾರೆ. ಅವರೇ ಡಬ್ಬಿಂಗ್ ಸಹ ಪೂರ್ಣಗೊಳಿಸಿದ್ದರು. ಇದು ಚಿರು ಡಬ್ಬಿಂಗ್ ಮಾಡಿದ ಕೊನೆಯ ಚಿತ್ರವಾಗಿದೆ.

ಬಹಳ ನಿರೀಕ್ಷೆಯಿದ್ದ, ‘ರಣಂ’ ಈ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ ಕರೋನಾ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ತಡವಾಗಿತ್ತು. ಈಗ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಚಿರು ಅಭಿಮಾನಿಗಳುವ ಸಂತಸಗೊಂಡಿದ್ದಾರೆ. ಮತ್ತೊಮ್ಮೆ ತೆರೆಯಲ್ಲಿ ಚಿರು ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿ ಕರ್ ಹಾಗೂ
ಎಸ್.ಚಿನ್ನ ಸಂಗೀತ ನೀಡಿzರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿದೆ.

ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಪಾರ್ವತಿ ಚಂದು ಮತ್ತು ಮೋಹನ್ ಅವರ ಸಂಭಾಷಣೆ ಚಿತ್ರಕ್ಕಿದೆ. ಆ ದಿನಗಳು ಖ್ಯಾತಿಯ ಚೇತನ್, ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *