Wednesday, 14th May 2025

‘ಸಂಸದ್‌ ಟಿವಿ’ ಸಿಇಒ ಆಗಿ ಒಂದು ವರ್ಷದ ಅವಧಿಗೆ ರವಿ ಕಪೂರ್ ನೇಮಕ

ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ, ‘ಸಂಸದ್‌ ಟಿವಿ’ ಎಂಬ ಹೆಸರಿನಡಿ ಚಾನೆಲ್‌ ತೆರೆಯಲು ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರ ಹಸಿರು ನಿಶಾನೆ ಸಿಕ್ಕಿದ್ದು, ಈ ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ರವಿ ಕಪೂರ್‌ ರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.

ಮಾ.1ರಿಂದ ಒಂದು ವರ್ಷದ ತನಕ ರವಿ ಕಪೂರ್‌ ರನ್ನು ಸಂಸದ್‌ ಟಿವಿಯ ಸಿಇಒ ಆಗಿ ನೇಮಕ ಮಾಡಲಾಗಿದೆ’ ಎಂದು ಲೋಕಸಭಾ ಸಚಿವಾಲಯ ಪ್ರಕಟಣೆ ತಿಳಿಸಿದೆ. ಚಾನೆಲ್‌ಗಳನ್ನು ವಿಲೀನ ಮಾಡಿದ್ದರೂ, ಅದು ಎರಡು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದು ವಿಭಾಗವು ಲೋಕಸಭಾ ಅಧಿವೇಶನಗಳನ್ನು ನೇರ ‍ಪ್ರಸಾರ ಮಾಡಲಿದೆ. ಎರಡೂ ವಿಭಾಗಗಳು ಒಂದೇ ಮಾದರಿಯ ವಿಷಯವನ್ನು ತೋರಿಸಲಿದೆ. ಆದರೆ ಹಿಂದಿ-ಇಂಗ್ಲೀಷ್‌ ಭಾಷೆಗಳಲ್ಲಿ ಅಧಿವೇಶನ ಪ್ರಸಾರ ಮಾಡಲಾಗುತ್ತದೆ.

ನವೆಂಬರ್‌ 2019ರಲ್ಲಿ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಈ ನಿರ್ಧಾರ ಕೈಗೊಂಡಿದ್ದರು. ಎರಡು ಚಾನೆಲ್‌ಗಳ ವಿಲೀನ ಪ್ರಕ್ರಿಯೆಗಾಗಿ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಸೂರ್ಯ ಪ್ರಕಾಶ್‌ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚಿಸಿದ್ದರು.

Leave a Reply

Your email address will not be published. Required fields are marked *