Wednesday, 14th May 2025

ಕಪ್ಪು ಸ್ಕ್ರೀನ್‌ನ ಹೊಸ ಲೋಕ

ಟೆಕ್‌ ಟಾಕ್‌

ಬಡೆಕ್ಕಿಲ ಪ್ರದೀಪ

ಮೊದಮೊದಲು ತುಸು ಅಪರೂಪ ಎನಿಸಿದ್ದ ಡಾರ್ಕ್ ಮೋಡ್ ಈಗ ಸಾರ್ವತ್ರಿಕವಾಗಿ ಬಹುಪಾಲು ಮೊಬೈಲ್ ‌ಗಳಲ್ಲಿ ಲಭ್ಯ. ಇದರಿಂದ ಲಾಭಗಳೇನು? ನಷ್ಟಗಳೇನು? ಒಂದು ಅವಲೋಕನ.

ಮೊಬೈಲ್ ಸ್ಕ್ರೀನ್ ಅಥವಾ ಇನ್ಯಾವುದೇ ಪರದೆಯಲ್ಲಿ ನಾವು ನೋಡುವುದು ಸ್ಪಷ್ಟವಾಗಿರಬೇಕು ಅನ್ನುವುದು ಸಹಜವಾದ ನಿರೀಕ್ಷೆ. ಅದಕ್ಕಾಗಿಯೇ ಹೊಸ ಹೊಸ ಫೀಚರ್‌ಗಳಿರುವ, ಉತ್ತಮ ಕ್ವಾಲಿಟಿ ಸ್ಕ್ರೀನ್‌ಗಳ ಫೋನ್‌ಗಳನ್ನೇ ಮಾರುಕಟ್ಟೆಗೆ ಕಳುಹಿಸುತ್ತಿವೆ ಫೋನ್ ಕಂಪೆನಿಗಳು.

ಅಲ್ಲಿ ಕಾಣುವ ಸ್ಕ್ರೀನ್‌ನ ಒಳಗೂ ಏನು ಹೇಗೆ ಕಾಣಬೇಕು ಅನ್ನುವುದರ ಬಗ್ಗೆೆ ತಲೆ ಕೆಡಿಸಿಕೊಳ್ಳೋದು ಆ್ಯಪ್ ತಯಾರಕಾ ಕಂಪೆನಿಗಳು ಮತ್ತು ಆಂಡ್ರಾಯ್ಡ್‌ ಅಥವಾ ಆಪಲ್‌ನ ಓಎಸ್ ಡೆವಲಪ್ ಮಾಡುವ ತಂಡಗಳು. ಹೀಗಿರುವಾಗ ಇಷ್ಟು ದಿನ ಕಂಡ ರೂಪಕ್ಕೆ ತದ್ವಿರುದ್ಧ ಬಣ್ಣದಲ್ಲಿ ಪರದೆಯನ್ನು ಕಾಣುವಂತೆ ಬದಲಿಸುವುದು ಸಾಧ್ಯವಾದರೆ ಆಗ ಈ ಆ್ಯಪ್‌ಗಳು ಕಾಣಿಸಿಕೊಳ್ಳುವ
ರೀತಿಯೇ ಬೇರೆಯದಾಗುತ್ತದೆ.

ಒಟ್ಟಿನಲ್ಲಿ ಡಾರ್ಕ್ ಮೋಡ್ ಅನ್ನುವುದು ಹೆಚ್ಚಿನೆಲ್ಲ ಮೊಬೈಲ್ ಫೋನ್‌ಗಳಿಗೆ ಬಂದಿ. ಆಂಡ್ರಾಯ್ಡ್‌‌ನ ಫೀಚರ್ ಆಗಿರುವ ಇದು ಆ್ಯಪ್‌ಗಳಲ್ಲಿ ಕೂಡ ಈ ಡಾರ್ಕ್‌ಮೋಡ್ ಬರುವ ರೀತಿ ವ್ಯವಸ್ಥೆಯೂ ಇಲ್ಲದಿಲ್ಲ. ಆದರೆ ಇದೀಗ ಆಂಡ್ರಾಯ್ಡ್‌‌‌ 2019ರ ನಂತರದ ಅಪ್‌ಡೇಟ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಪೂರ್ತಿ ಸಿಸ್ಟಂನಲ್ಲಿ ಅಳವಡಿಸಿಕೊಳ್ಳುವ ಅವಕಾಶ ನೀಡಿದೆ.

ಆದರೆ ಅದಕ್ಕಿಂತಲೂ ಹಿಂದಿನ ಫೋನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆ್ಯಪ್‌ ಗಳಲ್ಲಿ ಬಳಸಬಹುದು. ಆದರೆ ಸಂಪೂರ್ಣ ಸಿಸ್ಟಂ ಡಾರ್ಕ್ ಮೋಡ್ ಮಾಡುವ ಮೂಲಕ ಬಳಸುವ ರೀತಿಯನ್ನೇ ವಿಭಿನ್ನಗೊಳಿಸಿಕೊಳ್ಳೋ ಸಾಧ್ಯತೆ ಇರೋದು ಹೊಸ ಓಎಸ್ (ಆಪರೇಟಿಂಗ್ ಸಿಸ್ಟಂ)ನಲ್ಲಿ ಮಾತ್ರ. ಇದೇನೇ ಇದ್ರೂ ಡಾರ್ಕ್ ಮೋಡ್ ತನ್ನದೇ ಆದ ಹೊಸ ಸ್ಥಾನವನ್ನು ಗಳಿಸಿಕೊಳ್ಳೋದಕ್ಕೆ ಹೊರಡ್ತಾ ಇದೆ. ಒಂದೆಡೆ ಇದರ ಲಾಭಗಳ ಬಗ್ಗೆ ಜನ ಮಾತಾಡಿಕೊಳ್ತಾ ಇದ್ರೆ, ಇನ್ನೊಂದೆಡೆ ಇದರ ಮೂಲಕ ಸ್ಕ್ರೀನ್‌ನ ಲುಕ್‌ನಲ್ಲಿ ಬದಲಾವಣೆ ಆಗು ವುದು ಕೂಡ ಅವರ ಗಮನ ಸೆಳೆದಿದೆ.

ಬ್ಯಾಟರಿ ಉಳಿತಾಯ
ಡಾರ್ಕ್ ಮೋಡ್‌ಗೆ ನಿಮ್ಮ ಸ್ಕ್ರೀನ್ ಅನ್ನು ಬದಲಾಯಿಸುವುದರಿಂದ ಹಲವಾರು ಲಾಭಗಳಿವೆ ಅನ್ನುತ್ತವೆ ಕಂಪೆನಿಗಳು.
ಅದರಲ್ಲಿ ಮೊದಲನೆಯದು ಬ್ಯಾಟರಿ ಉಳಿತಾಯ. ಬಿಳಿ ಪರದೆಗೆ ಬೇಕಾಗುವ ಬ್ಯಾಟರಿ ಅಥವಾ ಶಕ್ತಿಗಿಂತ ಕಪ್ಪು ಪರದೆಯನ್ನು ಕಾಣಿಸುವಂತೆ ಮಾಡಲು ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಸಹಜವಾಗಿಯೇ ಈ ಡಾರ್ಕ್ ಮೋಡ್‌ನ ಕಪ್ಪು ಸ್ಕ್ರೀನ್ ಒಟ್ಟಾರೆ ಸ್ಕ್ರೀನ್ ಟೈಮ್ ಅನ್ನ ಅಂದರೆ ಅದು ಬೆಳಗುವ ಸಮಯವನ್ನು ಹೆಚ್ಚಿಸುತ್ತದೆ.

ಆದರೆ ಈ ಕುರಿತಾಗಿಯೂ ಹಲವು ವೈರುಧ್ಯದ ಮಾತುಗಳೂ ಕೇಳಿ ಬರುತ್ತಿರೋದೂ ಸತ್ಯ. ಯಾಕೆಂದರೆ ಡಾರ್ಕ್ ಮೋಡನ್ನು ಬೆಳಗುವಾಗಲೂ ಇತ್ತೀಚಿನ ಓಲೆಡ್ ಪರದೆಗಳಲ್ಲದ ಎಲ್‌ಇಡಿಗಳು ಸಹಜವಾಗಿಯೇ ಬ್ಲ್ಯಾಕ್ ಹಾಗೂ ಬಿಳಿ ಪರದೆಯನ್ನು ಸೃಷ್ಟಿಸುವಾಗ ಅಷ್ಟೇ ಶಕ್ತಿಯನ್ನು ಬಳಸುವ ಕಾರಣ, ಕಪ್ಪು ಪರದೆಯೂ ಕತ್ತಲೆಯ ಕೋಣೆಯಲ್ಲಿ ನಿಮಗೆ ಬೆಳಕಿನಿಂದ ತುಂಬಿರೋದು ಕಂಡುಬರುತ್ತದೆ. ಹಾಗಾಗಿ, ಈ ಕಪ್ಪು ಪರದೆಯಿಂದ ಶಕ್ತಿ ಉಳಿತಾಯ ಆಗಬೇಕಾಗಿದೆ, ಆದರೆ ಅದು ಅವರು ನಿರೀಕ್ಷಿತ ಮಟ್ಟಿಗೆ ಆಗದೆ ಇರಬಹುದು ಅನ್ನುತ್ತವೆ ಕೆಲವು ಸಂಶೋಧನೆಗಳು.

ಕಣ್ಣಿಗೆ ಹಿತ
ಇದರೊಂದಿಗೆ ಈ ಮೋಡ್‌ನಿಂದಾಗಿ ಕಣ್ಣಿಗೆ ಒತ್ತಡ ಕಡಿಮೆಯಾಗುತ್ತದೆ ಅನ್ನುವ ಮಾತುಗಳೂ ಕೇಳಿ ಬರುತ್ತದೆ. ಅಂದರೆ ಬಿಳಿ ಬ್ರೈಟ್ ಸ್ಕೀನ್ ಕಣ್ಣು ಕುಕ್ಕುವ ಬೆಳಕನ್ನು ಸೂಸುವುದರಿಂದ ಅದರ ಪ್ರಖರತೆಗೆ ಕಣ್ಣು ಕಾಂತಿ ಕಳೆದುಕೊಳ್ಳುವುದು ಒಂದೆಡೆಯಾದರೆ, ಬೆಳಕಿನ ಪ್ರಖರತೆಗೆ ನಿದ್ದಗೆಡಿಸುವ ಸಾಧ್ಯತೆಗಳೂ ಇವೆ. ಆದರೆ ಕಪ್ಪು ಪರದೆ ಅಥವಾ ಹಳದಿಯಾಗಿ ಕಾಣಿಸುವ ಅಕ್ಷರಗಳು ಬೆಳಕನ್ನು ಹೆಚ್ಚು ಕಣ್ಣಿಗೆ ಬೀಳದಂತೆ ಮಾಡುವ ಮೂಲಕ ಕಣ್ಣಿಗೆ ಒತ್ತಡ ಬೀಳದಂತೆ ಮಾಡುವುದು ಸಾಧ್ಯವಿದೆ ಅನ್ನಲಾಗಿದೆ.

ಇನ್ನೊಂದು ಅಧ್ಯಯನದ ಪ್ರಕಾರ ಕಣ್ಣಿಗೆ ಯಾವುದು ಹಿತ ಅನ್ನುವುದು ಒಂದೆಡೆಯಾದರೆ, ಕಪ್ಪು ಪರದೆಯ ಮೇಲೆ
ಇರುವುದನ್ನು ಓದಿದರೆ ಅದು ಅರ್ಥವಾಗುವುದು ಕಷ್ಟ. ಇದರ ಪ್ರಕಾರ ಬಿಳಿ ಪರದೆ ಮೇಲೆ ಇರುವುದನ್ನು ಓದುವುದು ಸಹಜ ವಾಗಿಯೇ ಬಂದಿರುವುದು ಒಂದೆಡೆಯಾದರೆ ಈ ರೀತಿಯ ಪರದೆಯ ಮೇಲಿರುವುದನ್ನು ಓದುವುದು ಸುಲಭ ಹಾಗು ಅರ್ಥೈಸಿಕೊಳ್ಳುವುದೂ ಅಷ್ಟೇ ಉತ್ತಮವಾಗಿ ಮಾಡಬಹುದಾಗಿದೆ.

ಇವೆಲ್ಲಾ ಅಧ್ಯಯನಗಳು, ಗಮನಗಳು, ಹಾಗೂ ಟೀಕೆಗಳಿದ್ದರೂ ಡಾರ್ಕ್ ಮೋಡ್ ಈಗಷ್ಟೇ ನಮ್ಮೆಲ್ಲರ ಬಳಕೆಗೆ ಲಭ್ಯವಾಗುತ್ತಿದೆ. ಈ ಮೂಲಕ ಹೊಸತೊಂದು ಕತ್ತಲೆಯ ಲೋಕದೊಳಗೆ ನಾವು ಹೋಗುತ್ತಿದ್ದೀವಾ ಅನ್ನುವ ಪ್ರಶ್ನೆಯೂ ಮೂಡಿಬರುತ್ತದೆ. ಇದೆಲ್ಲದರ ಜೊತೆಗೆ ಈ ಹೊಸ ಸ್ಟೈಲ್ ಸ್ಟೇಟ್‌ಮೆಂಟ್ ನಮ್ಮನ್ನು ಅದರ ಬಲೆಗೆ ಬೀಳಿಸಿಕೊಂಡರೂ ಆಶ್ಚರ್ಯವಿಲ್ಲ.

ಯಾಕೆಂದರೆ ಡಾರ್ಕ್ ಮೋಡ್ ಹೊಸದೊಂದು ಲುಕ್ ಕೊಡುತ್ತಿದ್ದು, ಈ ಮೋಡ್ಗಾಗಿ ಬೇಡಿಕೆ ಇಟ್ಟವರ ದೊಡ್ಡ ದಂಡೇ ಇದೆ, ಅವರಲ್ಲಿ ಹೆಚ್ಚಿನವರಿಗೆ ಈ ಮೋಡ್ ಇಷ್ಟಾ ಆಗಿ ಅದು ಮುಂದಿನ ದಿನಗಳಲ್ಲಿ ಎಲ್ಲರ ಬಳಕೆಗೆ ಸಹಜವಾಗಿ ಲಭ್ಯವಾಗುವು ದರಿಂದ ಕಣ್ಣಿಗೆ ಹಿತವೆನಿಸುವ ಕಾರಣಕ್ಕೆ ಬಳಸಲು ತೊಡಗುವ ಸಾಧ್ಯತೆಯೇ ಹೆಚ್ಚು.

ಈ ಡಾರ್ಕ್ ಮೋಡ್ ಕಣ್ಣಿಗೆ ಹಿತ ಎನಿಸುವ ಕಾರಣದಿಂದಾಗಿಯೇ ಎಲ್ಲರ ಬಳಕೆಗೆ ಬಂದಾಗಲೂ, ಇದೇ ಕಾರಣಕ್ಕಾಗಿ ನಾವು ಪರದೆಯ ಮೇಲೆ ಇನ್ನಷ್ಟು ಹೊತ್ತು ಸಮಯ ವ್ಯಯ ಮಾಡುವ ಸಾಧ್ಯತೆಯನ್ನೂ ವಿಜ್ಞಾನಿಗಳು ತಳ್ಳಿಹಾಕುತ್ತಿಲ್ಲ.. ಇದರಿಂದಾಗಿ ನಾವು ಹೆಚ್ಚು ಕಾಲ ಅದರ ಮೇಲೆ ಸಮಯ ಕಳೆದು, ಇನ್ನಷ್ಟು ಕಡಿಮೆ ನಿದ್ದೆ ಮಾಡುವ ಅಪಾಯ ಕೂಡ ಇರುವುದು ಗಮನಿಸಬೇಕಾದ ಸಂಗತಿ.

ಒಟ್ಟಾರೆ ಡಾರ್ಕ್ ಮೋಡ್ ಇನ್ನು ಮುಂದೆ ಇರಲಿದೆ, ಅದರಿಂದ ಏನೇನೆಲ್ಲಾ ಬದಲಾವಣೆ ಬರಲಿದೆ, ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *