ಟೆಕ್ ಫ್ಯೂಚರ್
ವಸಂತ ಗ ಭಟ್
ವಾತಾವರಣವನ್ನು ಕಲುಷಿತಗೊಳಿಸುವ ಕಾರ್ಬನ್ನ್ನು ಮರಳಿ ಭೂಮಿಗೆ ಸೇರಿಸಲೆಂದೇ ಖಾಸಗಿ ಸಂಸ್ಥೆಯೊಂದು ಹುಟ್ಟಿಕೊಂಡಿದೆ ಎಂದರೆ ಅಚ್ಚರಿಯೆ?
ಪ್ರತಿ ವರ್ಷ ಮಾನವನ ವಿವಿಧ ಚಟುವಟಿಕೆಗಳಿಂದ 40 ಬಿಲಿಯನ್ ಮೆಟ್ರಿಕ್ ಟನ್ನಷ್ಟು ಇಂಗಾಲ ವಾತಾವರಣ ಸೇರುತ್ತಿದೆ. ಇಂಟರ್ ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್ ಪ್ರಕಾರ ಭವಿಷ್ಯದಲ್ಲಿ ಭೂಮಿ ಯಥಾಸ್ಥಿತಿಯನ್ನು ಕಾಯ್ದು ಕೊಳ್ಳಬೇಕಾದರೆ ವಾತಾವರಣದ ತಾಪಮಾನವನ್ನು 1.5 ಡಿಗ್ರಿ ಕಡಿಮೆಗೊಳ್ಳುವುದು ಅನಿವಾರ್ಯ.
ಆದರೆ ಇದು ಹೇಳಿದಷ್ಟು ಸುಲಭದ ಕೆಲಸವಲ್ಲ. ಇಂಟರ್ ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್ ನೀಡಿರುವ ಹಲವಾರು ಕ್ರಮಗಳಲ್ಲಿ ಮುಖ್ಯವಾದುದು ವಾತಾವರಣದಿಂದ ಇಂಗಾಲವನ್ನು ಹೀರಿ ಅದನ್ನು ಭೂಮಿಗೆ ಸೇರಿಸುವ ತಂತ್ರಜ್ಞಾನ ವನ್ನು ಸಿದ್ಧಪಡಿಸಿ ಅದನ್ನು ಎಲ್ಲೆಡೆ ಬಳಸುವುದು. ಇದೇ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತವಾಗಿರುವ ಬಿಲ್ ಗೇಟ್ಸ್ ಹೂಡಿಕೆ ಮಾಡಿ ರುವ ಸಂಸ್ಥೆಯ ಹೆಸರು ‘ಕಾರ್ಬನ್ ಎಂಜಿನಿಯರಿಂಗ್’.
ಅಮೇರಿಕದ ಟೆಕ್ಸಾಸ್ ನಲ್ಲಿ ತನ್ನ ಮೊದಲ ಪ್ಲಾಂಟ್ ಅನ್ನು ಸ್ಥಾಪಿಸಿರುವ ಕಾರ್ಬನ್ ಎಂಜಿನಿಯರಿಂಗ್, 40 ಮಿಲಿಯನ್ ಮರಗಳು ವಾತಾವರಣದಿಂದ ಹೊರ ತೆಗೆಯಬಹುದಾದಷ್ಟು ಕಾರ್ಬನ್ ಅನ್ನು ತೆಗೆಯಲು ಶಕ್ಯವಾಗಿದೆ. ಇದಲ್ಲದೆ ವಾತಾವರಣ ದಿಂದ ಇಂಗಾಲವನ್ನು ಹೀರಲು ಇತರ ತಂತ್ರಜ್ಞಾನ ಗಳು ಇವೆ.
ಎಲ್ಲರಿಗೂ ಗೊತ್ತಿರುವಂತೆ ಇಂಗಾಲ ಅಥವಾ ಕಾರ್ಬನ್ ನಾವು ನಿತ್ಯ ಬಳಕೆ ಮಾಡುವ ಹೆಚ್ಚಿನ ವಸ್ತುಗಳಲ್ಲಿ ಲಭ್ಯ. ಅಡಿಗೆ ಉಪ್ಪು, ಪೆಟ್ರೋಲ್, ಹಣ್ಣು ಗಳಲ್ಲಿರುವ ರಸಾಯನಿಕಗಳಲ್ಲಿ ಕಾರ್ಬನ್ ಇದೆ. ಕೊನೆಗೆ ವಜ್ರ ಕೂಡ ಅತ್ಯಂತ ಒತ್ತಡದಲ್ಲಿ ಘನೀಕೃತಗೊಂಡ ಇಂಗಾಲವೇ ಆಗಿದೆ. ಇಂಗಾಲ ಮೂಲಭೂತವಾಗಿ ಭೂಮಿಯ ಆಳದಲ್ಲಿ ಅನಿಲ ಅಥವಾ ಘನರೂಪದಲ್ಲಿ ಲಭ್ಯವಿರುವ ಮೂಲವಸ್ತು. ಗಣಿಗಾರಿಕೆ ಮತ್ತು ಪೆಟ್ರೋಲಿಯಂನ್ನು ಭೂಮಿಯಿಂದ ತೆಗೆದು ಸುಟ್ಟಾಗ ಅದು ನಮ್ಮ ವಾತಾವರಣವನ್ನು ಸೇರಿ, ಭೂಮಿಯ ತಾಪಮಾನ ಹೆಚ್ಚಿಸುತ್ತದೆ.
ಇಂಗಾಲದ ಪ್ರಮಾಣ ಕಡಿಮೆ ಮಾಡುವ ಸುಲಭ ಉಪಾಯ ಅದನ್ನು ಭೂಮಿಯಿಂದ ತೆಗೆಯುವುದನ್ನು ನಿಲ್ಲಿಸಬೇಕು. ಸದ್ಯದ ಪೆಟ್ರೋಲಿಯಂ ಅವಲಂಬನೆಯ ಪ್ರಮಾಣವನ್ನು ನೋಡಿದರೆ ಅದು ಅಸಾಧ್ಯ. ಹಾಗಾಗಿ ವಾತಾವರಣದಲ್ಲಿರುವ ಪೆಟ್ರೋ ಲಿಯಂ ಅನ್ನು ಮತ್ತೆ ಭೂಮಿಗೆ ಸೇರಿಸುವ ಕೆಲಸವಾಗಬೇಕಿದೆ. ಇದಕ್ಕೆ ಕೆಲವು ಉಪಾಯಗಳಿವೆ.
1. ಕಾರ್ಬನ್ ಹೀರುವ ಸಸ್ಯಗಳನ್ನು ಹೆಚ್ಚು ಬೆಳೆಸಿ, ಅವು ಬೆಳೆದ ನಂತರ ಅವುಗಳನ್ನು ಸುಟ್ಟು ಹೊರಬರುವ ಇಂಗಾಲವನ್ನು ಭೂಮಿಯ ಆಳಕ್ಕೆ ಸೇರಿಸುವುದು.
2. ವಾತಾವರಣದಿಂದ ಇಂಗಾಲವನ್ನು ಹೀರದಿದ್ದರೂ ಉತ್ಪಾದನೆಯಾಗುವ ಜಾಗದಲ್ಲಿ ಅದನ್ನು ಸಂಸ್ಕರಿಸಿ ಭೂಮಿಯ ಆಳಕ್ಕೆ ಸೇರಿಸುವುದು. ವಿಶ್ವದ ಖ್ಯಾತ ಪೆಟ್ರೋಲಿಯಂ ಸಂಸ್ಕರಣ ಸಂಸ್ಥೆ ಶೆಲ್, ಕ್ವೆಸ್ಟ್ ಎನ್ನುವ ಅಂಗಸಂಸ್ಥೆಯನ್ನು ಇದೇ ಕಾರ್ಯಕ್ಕಾಗಿ ಸ್ಥಾಪಿಸಿದೆ.
3.ವಾತಾವರಣದಲ್ಲಿರುವ ಕಾರ್ಬನ್ ಅನ್ನು ಹೀರಿ ಅದನ್ನು ಮತ್ತೊಂದು ರೂಪಕ್ಕೆ ಪರಿವರ್ತಿಸುವುದು. ಮೇಲೆ ಹೇಳಿದ ಕಾರ್ಬನ್ ಎಂಜಿನಿಯರಿಂಗ್ ಸಂಸ್ಥೆ ಮಾಡುತ್ತಿರುವುದು ಇದನ್ನೇ.
ಕಾರ್ಬನ್ ಎಂಜಿನಿಯರಿಂಗ್ನ ಕಾರ್ಯ ವಿಧಾನ ಸರಳ. ದೊಡ್ಡ ಫ್ಯಾನ್ಗಳನ್ನು ಬಳಸಿ ವಾತಾವರಣದಲ್ಲಿರುವ ಗಾಳಿಯನ್ನು ಯಂತ್ರದ ಒಳಗೆ ಎಳೆಯಲಾಗುತ್ತದೆ. ನಂತರ ಆ ಗಾಳಿಯನ್ನು ಜೇನುಗೂಡಿನ ರೀತಿಯ ವಿನ್ಯಾಸ ಹೊಂದಿರುವ ಕೋಣೆಯ ಮೂಲಕ ಹಾಯಿಸಲಾಗುತ್ತದೆ. ಈ ಕೋಣೆಯ ಮೇಲಿಂದ ಕೆಳಗೆ ಕಾರ್ಬನ್ಅನ್ನು ಹೀರುವ ಶಕ್ತಿಯಿರುವ ರಸಾಯನಿಕ
ಹರಿಯು ತ್ತಿರುತ್ತದೆ. ಹೀರಿಕೊಂಡ ಗಾಳಿಯಲ್ಲಿರುವ ಬಹುಪಾಲು ಇಂಗಾಲ ಈ ದ್ರವದೊಂದಿಗೆ ಸೇರಿಕೊಳ್ಳುತ್ತದೆ.
ದ್ರವದ ಹೀರಿಕೊಳ್ಳುವ ಸಾಮರ್ಥ್ಯ ಸಂಪೂರ್ಣವಾದ ಮೇಲೆ, ದ್ರವವನ್ನು ತೆಗೆದು ಬೇರೆ ದ್ರವವನ್ನು ಸೇರಿಸಲಾಗುತ್ತದೆ. ನಂತರ ಈ ದ್ರವದಿಂದ ಇಂಗಾಲವನ್ನು ಅನ್ನು ಬೇರ್ಪಡಿಸಿ ಕ್ಯಾಲ್ಶಿಯಮ್ ಕಾರ್ಬೊನೆಟ್ ಅಥವಾ ದ್ರವೀಕೃತ ಇಂಗಾಲವನ್ನಾಗಿ ಪರಿವರ್ತಿಸ ಲಾಗುತ್ತದೆ ಅಥವಾ ಅದನ್ನು ಅನಿಲ ಇಂಗಾಲವನ್ನಾಗಿ ಪರಿವರ್ತಿಸಿ ಭೂಮಿಯ ಆಳಕ್ಕೆ ಸೇರಿಸಬಹುದಾಗಿದೆ. ಈ ರೀತಿ ಗಾಳಿ ಯಿಂದ ಒಂದು ಟನ್ ಇಂಗಾಲವನ್ನು ತೆಗೆಯಲು 92 ರಿಂದ 232 ಅಮೆರಿಕನ್ ಡಾಲರ್ ಹಣ ಖರ್ಚಾಗಲಿದೆ. ಹಿಂದೆ ಇಂತಹ ಕೆಲಸಕ್ಕೆ 600 ಅಮೆರಿಕನ್ ಡಾಲರ್ ಬೇಕಿತ್ತು. ಈ ರೀತಿಯ 40000 ಕಾರ್ಬನ್ ಎಂಜಿನಿಯರಿಂಗ್ ಪ್ಲಾಂಟ್ ಗಳನ್ನು ವಿಶ್ವಾದ್ಯಂತ ಸ್ಥಾಪಿಸುವ ಮೂಲಕ ಜನರು ಹೊರಹಾಕುವ ಎಲ್ಲಾ ಇಂಗಾಲವನ್ನು ವಾತಾವರಣದಿಂದ ಹೀರಿಕೊಳ್ಳುವುದು ಸಾಧ್ಯ.
ತೊಡಕುಗಳು
ಕಾರ್ಯಸಾಧುವಾಗಿ ಕಾಣುವ ಈ ಯೋಜನೆಗೆ ಕೆಲವು ತೊಡಕುಗಳಿವೆ. ಕಾರ್ಬನ್ ಎಂಜಿನಿಯರಿಂಗ್, ಕೇವಲ ಬಿಲ್ ಗೇಟ್ಸ್ ನಿಂದ ಹೂಡಿಕೆಯನ್ನು ಸಂಗ್ರಹಿಸಿಲ್ಲ, ಇತರ ತೈಲ ಉತ್ಪಾದಕ ಸಂಸ್ಥೆಗಳಾದ ಚೆವ್ರೋನ್, ಬಿಹೆಚ್ ಪಿ ಮತ್ತು ಒಕ್ಸಿಡೆಂಟಲ್ನಿಂದ ಸಹ ಸುಮಾರು 68 ಮಿಲಿಯನ್ ಡಾಲರ್ನಷ್ಟು ಹಣವನ್ನು ಸಂಗ್ರಹಿಸಿದೆ.
ಭೂಮಿಯಿಂದ ಪೆಟ್ರೋಲಿಯಂ ಅನ್ನು ಹೊರತೆಗೆಯುವಾಗ ಬಂಡೆಗೆ ಅಂಟಿಕೊಂಡ ಪೆಟ್ರೋಲಿಯಂ ಅನ್ನು ತೆಗೆಯಲು ಹಲವು ಕಡೆ ವೇಗವಾಗಿ ನೀರನ್ನು ಹಾಯಿಸಲಾಗುತ್ತದೆ. ಆದರೆ ಅದು ಅಷ್ಟೊಂದು ಕಾರ್ಯ ಕ್ಷಮತೆಯನ್ನು ಹೊಂದಿಲ್ಲ. ಈ ಪ್ರಕ್ರಿಯೆಗೆ
ಗ್ಯಾಲನ್ ಗಟ್ಟಲೆ ನೀರನ್ನು ಬಳಸಬೇಕಾಗುತ್ತದೆ. ಸದ್ಯ ಹೆಚ್ಚಿನ ತೈಲ ಉತ್ಪಾದಕ ಸಂಸ್ಥೆಗಳು ನೀರಿಗೆ ಪರ್ಯಾಯವಾಗಿ ದ್ರವೀಕೃತ ಇಂಗಾಲವನ್ನು ಬಳಸುತ್ತಿದ್ದಾರೆ.
ಇದು ಹೆಚ್ಚು ಕಾರ್ಯ ಕ್ಷಮತೆಯನ್ನು ಹೊಂದಿದ್ದು, ಪೆಟ್ರೋಲಿಯಂ ಅನ್ನು ಸುಲಭವಾಗಿ ತೆಗೆಯಲು ಸಹಕಾರಿಯಾಗಿದೆ.
ಕಾರ್ಬನ್ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ತೈಲ ಸಂಸ್ಥೆಗಳು ಅದು ಉತ್ಪಾದಿಸುವ ಕಾರ್ಬನ್ ಅನ್ನು ಈ ರೀತಿ ಪೆಟ್ರೋಲಿಯಂ ಗಣಿಗಾರಿಕೆಗೆ ಬಳಸುತ್ತಿವೆ. ಇದರಿಂದ ಮತ್ತೆ ಇಂಗಾಲ ವಾತಾವರಣವನ್ನು ಸೇರಿ, ಸಂಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ವಾತಾವರಣದಿಂದ ಇಂಗಾಲವನ್ನು ಹೊರತೆಗೆದು ಭೂಮಿಗೆ ಬಿಟ್ಟರೆ ಕಾರ್ಬನ್ ಎಂಜಿನಿಯರಿಂಗ್ ಅಥವಾ ಯಾವುದೇ ಸಂಸ್ಥೆಗಾದರು ಏನು ಲಾಭವಾಗುತ್ತದೆ? ಇಂತಹ ಕಾರ್ಯವನ್ನು ಕೇವಲ ಸರಕಾರಗಳು ಮಾಡಬಹುದು.
ಅಷ್ಟೇ ಅಲ್ಲದೆ ಕಾರ್ಬನ್ ಎಂಜಿನಿಯರಿಂಗ್ ತರಹದ ಪ್ಲಾಂಟ್ಗಳು ಎಲ್ಲೆಡೆ ಶುರುವಾದರೆ ಅವರು ಉತ್ಪಾದಿಸುವ ಇಂಗಾಲವನ್ನು ಖರೀದಿವವರು ಬೇಕಾಗುತ್ತಾರೆ. ಮಾರುಕಟ್ಟೆಯಲ್ಲಿ ಇಂಗಾಲದ ಅವಶ್ಯಕತೆ ಹೇರಳವಾಗಿದ್ದರೂ ನವೀಕರಿಸಲಾಗದಂತಹ ಮೂಲಗಳಿಂದ ಉತ್ಪಾದನೆಯಾದ ಇಂಗಾಲ ಕಾರ್ಬನ್ ಎಂಜಿನಿಯರಿಂಗ್ ಉತ್ಪಾದಿಸುವ ಇಂಗಾಲಕ್ಕಿಂತ ಕಡಿಮೆ ಬೆಲೆ
ಯನ್ನು ಹೊಂದಲಿದೆ.
ಅಮೆರಿಕದಲ್ಲಿ ನವೀಕರಿಸಲಾಗದಂತಹ ಮೂಲಗಳಿಂದ ಉತ್ಪಾದನೆಯಾದ ಇಂಗಾಲದ ಪ್ರತಿ ಟನ್ನ ಬೆಲೆ 10 ಡಾಲರ್, ಚೀನಾ ದಲ್ಲಿ ಅದು 5 ಡಾಲರ್ ಮತ್ತು ಯುರೋಪ್ನಲ್ಲಿ ಅದು 20 ಡಾಲರ್. ಅದೇ ಕಾರ್ಬನ್ ಎಂಜಿನಿಯ ರಿಂಗ್ ಉತ್ಪಾದಿಸುವ ಒಂದು ಟನ್ ಇಂಗಾಲದ ಬೆಲೆ ಸುಮಾರು 100 ಡಾಲರ್. ಹಾಗಾಗಿ ವ್ಯಾವಹಾರಿಕವಾಗಿ ಇದು ಲಾಭದಾ ಯಕವಲ್ಲ. ಸರಕಾರಗಳು ಮಧ್ಯಸ್ಥಿಕೆ ವಹಿಸಿ, ನವೀಕರಿಸಲಾಗದಂತಹ ಮೂಲಗಳಿಂದ ಉತ್ಪಾದನೆಯಾದ ಇಂಗಾಲದ ಬೆಲೆಯನ್ನು ಹೆಚ್ಚಿಸುವುದೊಂದೇ ಈ ಸಮಸ್ಯೆಗೆ ಪರಿಹಾರ.