Tuesday, 13th May 2025

ದಿವಂಗತ ಜೆ.ಜಯಲಲಿತಾ 73 ನೇ ಜನ್ಮದಿನಾಚರಣೆ: ಗಣ್ಯರಿಂದ ಗೌರವ ನಮನ

ಚೆನ್ನೈ: ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ದಿವಂಗತ ಜೆ.ಜಯಲಲಿತಾ ಅವರ 73 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದರು.

ನಮ್ಮ ನಾರಿ ಶಕ್ತಿಯನ್ನು ಸಶಕ್ತಗೊಳಿಸುವ ಅವರ ಪ್ರಯತ್ನಗಳು ಗಮನಾರ್ಹವಾದುದು. ಅವರೊಂದಿಗೆ ನಡೆಸಿದ ಹಲವು ಚರ್ಚೆಗಳನ್ನೂ ಸದಾ ನೆನಪಿಸಿಕೊಳ್ಳುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಮತ್ತು ಆಡಳಿತರೂಢ ಪಕ್ಷದ ಇತರ ನಾಯಕರು ನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲರುವ ಜಯಲಲಿತಾ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಎಐಎಡಿಎಂಕೆ ಪಕ್ಷ ರಾಜ್ಯದಾದ್ಯಂತ ಆರೋಗ್ಯ ಶಿಬಿರ ಸೇರಿದಂತೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಯಲಲಿತಾ ಅವರ 73ನೇ ಜನ್ಮದಿನ ಆಚರಿಸಿದೆ.

 

Leave a Reply

Your email address will not be published. Required fields are marked *