Sunday, 11th May 2025

ಮೋದಿಯ ಹಿಟ್ಲರ್ ಧೋರಣೆ ಭಾರತದಲ್ಲಿ ನಡೆಯಲ್ಲ: ಶಾಸಕ ವೆಂಕಟರಮಣಪ್ಪ

ಪಾವಗಢ: ಪಾವಗಢ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಮತ್ತು ವಿವಿಧ ವಸ್ತುಗಳ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರಮಾಣದ ಪ್ರತಿಭಟನೆಯಲ್ಲಿ ಉದ್ದೆಶೀಸಿ ಮಾತನಾಡಿದ ಅವರು ಮೋದಿ ಬಂದ ಮೇಲೆ ಸಾಮಾನ್ಯ ಜನರ ಪಾಡು ಹೇಳತೀರದಾಗಿದೆ. ಪ್ರತಿದಿನ ಗಗನಕ್ಕೆ ಏರುತ್ತಿರುವ ವಸ್ತುಗಳ ಬೆಲೆ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿತ್ತು.

ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಬೀದಿಗಿಳಿದು ಹೋರಾಟ ನಡೆಸಿ ದರು. ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ, ಪೆಟ್ರೋಲ, ಡೀಸೆಲ , ಗ್ಯಾಸ್ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ನಿಲುವಿನ ವಿರುದ್ದ ಹೋರಾಟದ ನಗರದ ಕಾಂಗ್ರೆಸ್ ಕಚೇರಿಯಿಂದ ಶನಿ ಮಹಾತ್ಮ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ಹೆಚ್.ವಿ.ವೆಂಕಟೇಶ್ ಮಾತನಾಡಿ, ಈ ಕೂಡಲೇ ದರ ಇಳಿಸುವಂತೆ ಆಗ್ರಹಿಸಿದ ಕಾರ್ಯಕರ್ತರು, ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು. ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಡಳಿತದ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪೆಟ್ರೋಲ್‌, ಡೀಸೆಲ್, ಗ್ಯಾಸ್ ಧರ ಇಳಿಸುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು.

ಇದೇ ವೇಳೆ ಮಾಜಿ ಶಾಸಕ ಸೂಮ್ಲಾನಾಯ್ಕ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ನರಸಿಂಹಯ್ಯ, ಎ.ಶಂಕರ ರೆಡ್ಡಿ, ಪುರಸಭೆಯ ಅಧ್ಯಕ್ಷ ರಾಮಾಂಜಿನಪ್ಪ, ಜಿ.ಪಂ.ಸದಸ್ಯ ಪಾಪಣ್ಣ, ತಾ.ಪಂ.ಸದಸ್ಯರುಗಳಾದ ರವಿ.ರಾಜೇಶ್‌, ಕೇಶವ ಚಂದ್ರ ದಾಸ್, ಅನಿಲ್ ಕುಮಾರ್, ಬೆಳ್ಳಿಬಟ್ಲು ಚಂದ್ರಶೇಖರ್ ರೆಡ್ಡಿ, ತಾಳೆಮರದ ಹಳ್ಳಿ ಮಂಜುನಾಥ್, ಪೋಟೋ ಅಮರ್, ರಿಜ್ವಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್ ಕುಮಾರ್, ನಗರ ಅಧ್ಯಕ್ಷ ನಹೇಶ್, ರಾಜ್ಯ ಯುವ ಕಾರ್ಯದರ್ಶಿ ಕಿರಣ್ ಕುಮಾರ್, ಮಣಿ ಹಾಗೂ ಪುರಸಭೆ,  ಗ್ರಾ.ಪಂ.ಸದಸ್ಯರು ಪ್ರತಿಭಟನೆ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *