Tuesday, 13th May 2025

ರೋಹಿತ್‌-ರಹಾನೆ ಜತೆಯಾಟ ಅಂತ್ಯ

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕಾರ್ಧ (150+) ಬಲ ದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟ 68 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ, ಆಂಗ್ಲರಿಗೆ ಸೆಡ್ಡು ಹೊಡೆದಿದೆ. ಇತ್ತೀಚಿನ ವರದಿ ಪ್ರಕಾರ, ರೋಹಿತ್‌ ಶರ್ಮಾ ಔಟಾಗಿದ್ದಾರೆ.

ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದಲ್ಲಿ ಏಳನೇ ಶತಕ ಸಾಧನೆ ಮಾಡಿದರು. ಈ ಎಲ್ಲ ಶತಕಗಳು ತವರು ಮೈದಾನದಲ್ಲಿ ದಾಖಲಿರುವುದು ವಿಶೇಷ. ಆರಂಭದಲ್ಲೇ ಶುಭ ಮನ್ ಗಿಲ್ (0) ವಿಕೆಟ್ ಕಳೆದುಕೊಂಡ ಭಾರತ ಹಿನ್ನೆಡೆ ಅನುಭವಿಸಿತ್ತು. ಬಳಿಕ ಚೇತೇಶ್ವರ ಪೂಜಾರ (21) ಜೊತೆಗೆ 85 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ರೋಹಿತ್ ಭಾಗಿಯಾದರು.

ಪೂಜಾರ ವಿಕೆಟ್ ಪತನದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಸಹ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ 86 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

Leave a Reply

Your email address will not be published. Required fields are marked *