Thursday, 15th May 2025

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅರೋರಾ ಆಕಾಂಕ್ಷಾ ಉಮೇದುವಾರಿಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿ ಅರೋರಾ ಆಕಾಂಕ್ಷಾ(34), ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿ ದ್ದಾರೆ.

ಈ ಮೂಲಕ ವಿಶ್ವಸಂಸ್ಥೆಯ ಭಾರತೀಯ ಮೂಲದ ನೌಕರರೊಬ್ಬರು ಮುಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.

ಹಾಲಿ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ಅಧಿಕಾರಾವಧಿ ಡಿಸೆಂಬರ್‌ಗೆ ಕೊನೆಗೊಳ್ಳಲಿದೆ. ಮುಂದಿನ ಐದು ವರ್ಷಗಳ ಅವಧಿಗೂ ತಾನೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಬಯಸಿರುವುದಾಗಿ ಗುಟೆರಸ್ ಕಳೆದ ತಿಂಗಳು ಹೇಳಿದ್ದರು.

ಪ್ರಚಾರಾಂದೋಲನದ ಭಾಗವಾಗಿ ಯುಟ್ಯೂಬ್ ವಿಡಿಯೊದಲ್ಲಿ ‘ನನ್ನ ಸ್ಥಾನದಲ್ಲಿರುವ ಜನರು, ಅಂಥದ್ದೊಂದು ಉನ್ನತ ಹುದ್ದೆಗೆ ಏರುವುದು ಅಸಾಧ್ಯ. ಆದರೆ, ಅಂಥ ಅವಕಾಶ ಬರುವವರೆಗೂ ನಮ್ಮ ಸರದಿಗಾಗಿ ಕಾಯಬೇಕು’ ಎಂದು ಹೇಳಿದ್ದಾರೆ.

 

Leave a Reply

Your email address will not be published. Required fields are marked *