Wednesday, 14th May 2025

ಲವ್ಲಿಯಾಗಿದೆ ಆಕ್ಷನ್‌ ಟೀಸರ್‌

ಹೊಸಬರೇ ಸೇರಿ ನಿರ್ಮಿಸಿರುವ ‘ಲವ್ಲಿ’ ಚಿತ್ರದ ಆ್ಯಕ್ಷನ್ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಇದೇ ಸೂಚನೆ’ ಅಂತ ಇಂಗ್ಲೀಷ್ ನಲ್ಲಿ ಅಡಿಬರಹವಿದೆ. ಸದ್ದಿಲ್ಲದೆ ಶೇಕಡ ಎಪ್ಪತ್ತರಷ್ಟು ಚಿತ್ರೀಕರಣ ಮುಗಿಸಿದ್ದು, ಆಕ್ಷನ್
ಟೀಸರ್ ಬಿಡುಗಡೆ ಮಾಡಿದೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ. ಗುಲಬರ್ಗಾ ಜಿಲ್ಲೆಯ ಜೀವರ್ಗಿ ಮೂಲದ ಪ್ರಸನ್ನ ಪುರಾಣಿಕ್ ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಈಗ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.

ಜತೆಗೆ ಪಕ್ಕಾ ಲೋಕಲ್ ಹುಡುಗನಂತೆ ನಾಯಕನಾಗಿ ಅಭಿನಯಿಸಿದ್ದಾಾರೆ. ಶಿವಗುರು ಫಿಲಂ ಎಂಟರ್‌ಟೈನ್ ಮೆಂಟ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಚಿತ್ರದಲ್ಲಿ ಪೋಷಕರ ಮಹತ್ವದ ಸಾರವನ್ನು ಹೇಳಲಾಗುತ್ತಿದೆ.
ಹುಡುಗಿಯ ಮನಸ್ಸನ್ನು ಗೆಲ್ಲಲು ನಾಯಕ ಯಾವೆಲ್ಲಾ ಸದ್ಗುಣಗಳನ್ನು ಕಲಿಯುತ್ತಾನೆ.

ಪ್ರೀತಿ, ಕುಟುಂಬ ಇದರಲ್ಲಿ ಯಾವುದು ಮುಖ್ಯ. ಭಾವನೆಗಳು, ಹಾಸ್ಯ, ಸಾಹಸ ಹೀಗೆ ಎಲ್ಲಾ ತರಹದ ಪ್ಯಾಕೇಜ್ ತುಂಬಿರುವ
ಮನರಂಜನಾತ್ಮಕ ಕಥನವನ್ನು ‘ಲವ್ಲಿ’ ಹೊಂದಿದೆ. ರೇವತಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.

ಉಳಿದಂತೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್, ಸಂಜುಬಸಯ್ಯ, ಇವರೊಂದಿಗೆ ಹೊಸಬರಿಗೆ ಅವಕಾಶ ಮಾಡಿಕೊಡ ಲಾಗುತ್ತಿದೆ. ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಉಳಿದ ಭಾಗವನ್ನು ಬಿಜಾಪುರ, ಹುಬ್ಬಳ್ಳಿಯ ಸುಂದರ ತಾಣಗಳಲ್ಲಿ ಸೆರೆ ಹಿಡಿಯಲು ಯೋಜನೆ ಹಾಕಲಾಗಿದೆ.

Leave a Reply

Your email address will not be published. Required fields are marked *