Tuesday, 13th May 2025

ತಪೋವನ ಸುರಂಗದಲ್ಲಿ ರಕ್ಷಣಾ ಕಾರ್ಯ ಸ್ಥಗಿತ

ತಪೋವನ: ಧೌಲಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಸುರಕ್ಷತೆಗಾಗಿ ತಪೋವನ ಸುರಂಗದಲ್ಲಿ  ರಕ್ಷಣಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ಭಾನುವಾರ ಹಿಮನದಿ ಸ್ಫೋಟ ದುರಂತ ಸಂಭವಿಸಿದ ಬಳಿಕ ತಪೋ ವನದಲ್ಲಿ 35 ಮಂದಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡಿದ್ದಾರೆ. ಸುರಂಗದ ಒಳಗೆ ಕೆಲಸ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಹೊರಗೆ ಬಂದಿದ್ದು, ಭಾರೀ ಯಂತ್ರಗಳ ಮೂಲಕ ಅವಶೇಷಗಳನ್ನು, ಕೆಸರುಗಳನ್ನು ತೆಗೆಯಲಾಗಿದೆ.

ಚಮೊಲಿ ಜಿಲ್ಲಾಧಿಕಾರಿ ಸ್ವಾತಿ, ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ಧೌಲಿ ಗಂಗಾ ಅಲಕ್ನಂದ ನದಿಯ ಜೊತೆ ಸೇರ್ಪಡೆಯಾಗುತ್ತದೆ. ಪ್ರವಾಹದಲ್ಲಿ ಜನರು ಮತ್ತು ಜಲವಿದ್ಯುತ್ ಕೇಂದ್ರ ವೊಂದು ಕೊಚ್ಚಿ ಹೋಗಿದೆ ಎಂದು ತಿಳಿಸಿದ್ದಾರೆ.

ಸುರಂಗದೊಳಗೆ 25ರಿಂದ 35 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು ಅವರನ್ನು ಪತ್ತೆಹಚ್ಚಿ ಹೊರ ತೆಗೆಯುವ ಕಾರ್ಯ ನಡೆಸಲಾಗುತ್ತಿತ್ತು.

Leave a Reply

Your email address will not be published. Required fields are marked *