Tuesday, 13th May 2025

ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ ವಿಶ್ರಾಂತಿ: ಎರಡನೇ ಟೆಸ್ಟ್’ಗೆ ಬ್ರಾಡ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

2021ರಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಹೊಂದಿರುವ ಇಂಗ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್ ಈ ವರ್ಷ ರೊಟೇಶನಲ್ ಪಾಲಿಸಿ ಅನುಸರಿಸುತ್ತಿದೆ. ಹೀಗಾಗಿ ಆಯಂಡರ್ಸನ್ ಗೆ ಎರಡನೇ ಟೆಸ್ಟ್ ನಲ್ಲಿ ವಿಶ್ರಾಂತಿ ನೀಡಿ ಇನ್ನೋರ್ವ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡುವ ನಿರೀಕ್ಷೆ ಇದೆ. ಫೆಬ್ರವರಿ 13ರಿಂದ ಚೆನ್ನೈನಲ್ಲೇ 2ನೇ ಟೆಸ್ಟ್ ಆರಂಭ ವಾಗಲಿದೆ.

ಆಂಡರ್ಸನ್ ಮ್ಯಾಜಿಕ್ ಸ್ಪೆಲ್ ಮೂಲಕ ಇಂಗ್ಲೆಂಡ್ ತಂಡ ಭಾರತವನ್ನು 227 ರನ್ ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ನೆರವಾಗಿದ್ದರು. ಭೋಜನ ವಿರಾಮಕ್ಕೆ ಮೊದಲು 7 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 3 ವಿಕೆಟ್‌ ಗಳನ್ನು ಉರುಳಿಸಿದ್ದರು. ಇದರಲ್ಲಿ 4 ಮೇಡನ್ ಓವರ್ ಗಳಿದ್ದವು. 38ರ ಹರೆಯದ ಆಯಂಡರ್ಸನ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಗಳನ್ನು ಪಡೆದಿದ್ದರು.

Leave a Reply

Your email address will not be published. Required fields are marked *