Tuesday, 13th May 2025

ರಾಜ್ಯಸಭೆಯಲ್ಲಿ ಗುಲಾಮ್ ನಬಿ ಆಜಾದ್’ಗೆ ವಿದಾಯ: ಪ್ರಧಾನಿ ಭಾವುಕ ಮಾತು

ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ಗುಲಾಮ್ ನಬಿ ಆಜಾದ್ ಸದಸ್ಯತ್ವ ಸ್ಥಾನದ ಅವಧಿ ಮಂಗಳವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರಿಗೆ ವಿದಾಯ ಹೇಳುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದರು.

ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಪ್ರಯತ್ನಗಳನ್ನು ಎಂದಿಗೂ ಮರೆಯುವುದಿಲ್ಲ. ಆಜಾದ್ ಅವರು ತಮ್ಮದೇ ಕುಟುಂಬದ ಸದಸ್ಯರೇ ಸಿಲುಕಿಕೊಂಡಿದ್ದಾರೆ ಎಂಬ ರೀತಿ ಅವರು ಚಡಪಡಿಸಿ ಕೆಲಸ ಮಾಡಿದ್ದರು ಎಂದು ಆಜಾದ್ ರನ್ನು ಮೋದಿ ಹಾಡಿ ಹೊಗಳಿದ್ದಾರೆ.

ಆಜಾದ್ ಅವರನ್ನು ಹಲವು ವರ್ಷಗಳಿಂದ ನೋಡಿದ್ದೇನೆ, ಇಬ್ಬರು ಒಟ್ಟಿಗೆ ಮುಖ್ಯಮಂತ್ರಿಯಾಗಿದ್ದೆವು ನಾನು ಸಿಎಂ ಆಗುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ. ಆ ವೇಳೆಗಾಗಲೇ ಆಜಾದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು ಎಂದು ಮೋದಿ ಹೇಳಿದ್ದಾರೆ.

ಆಜಾದ್ ಅವರು ನನ್ನ ನಿಜವಾದ ಸ್ನೇಹಿತ, ಅಧಿಕಾರ ಬಂದಾಗ ಹೇಗೆ ಎಲ್ಲವನ್ನು ನಿರ್ವಹಿಸಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು ಎಂದು ಮೋದಿ ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *