Wednesday, 14th May 2025

ನೈಜ ಘಟನೆಯ ಗಾಜನೂರು

ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ‘ಗಾಜನೂರು’ ಚಿತ್ರಕ್ಕೆ ಮಹೂರ್ತ ನೆರವೇರಿದೆ.

ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿಸಿಕೊಂಡ ‘ಗಾಜನೂರು’ ಚಿತ್ರದ ಮೊದಲ ಸನ್ನಿ ವೇಶಕ್ಕೆ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಕ್ಲಾಪ್ ಮಾಡಿ ಶುಭಹಾರೈಸಿದರು. ನಿರ್ದೇಶಕ ನಂದಕಿಶೋರ್ ಕ್ಯಾಮೆರಾ ಆನ್ ಮಾಡಿದರು. ನಿರ್ದೇಶಕ ವಿಜಯ್ ಸಾರಥ್ಯದಲ್ಲಿ ಚಿತ್ರ ಮೂಡಿಬರುತ್ತಿದ್ದು, ಅವಿನಾಶ್ ಕಲಬುರಗಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

‘ಗಾಜನೂರು’ ಶೀರ್ಷಿಕೆಯ ಚಿತ್ರಕ್ಕೂ, ಅಣ್ಣಾವ್ರ ಹುಟ್ಟೂರು ಗಾಜನೂರಿಗೂ ಯಾವುದೇ ಸಂಬಂಧ ವಿಲ್ಲ. ಚಿತ್ರಕ್ಕೆ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗಾಜನೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಕಥೆ. ಪೊಲೀಸ್ ಠಾಣೆ ಯೊಂದರಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿರುತ್ತದೆ.

ಅದರ ಹಿನ್ನೆಲೆ, ತನಿಖೆಯ ಹಾದಿಯಲ್ಲಿ ಸಿನಿಮಾ ಸಾಗಲಿದೆ.

ಫೆಬ್ರವರಿ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ. ಗಾಜನೂರು, ಚಿಕ್ಕಮಗಳೂರು, ಬೆಂಗಳೂರಿನಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ವಿದೇಶದಲ್ಲಿಯೂ ಹಾಡಿನ ಚಿತ್ರೀಕರಣ ಮಾಡುವ ಪ್ಲಾನ್ ಇದೆ ಎಂದರು ನಿರ್ದೇಶಕರು.

ಚಿತ್ರದ ನಾಯಕನಾಗಿ ಅವತಾರ್ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಇದೀಗ ಆ ಸಮಯ ‘ಗಾಜನೂರು’ ಮೂಲಕ ಬಂದಿದೆ.

ಚಿತ್ರ ದಲ್ಲಿ ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಳ್ಳಲಿದ್ದೇನೆ. ನಾನು ಹೋಗುವ ಊರಿನಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆ ಘಟನೆಯ ಹಿನ್ನೆಲೆಯಲ್ಲಿ ನನ್ನ ಪಾತ್ರ ತೆರೆದುಕೊಳ್ಳಲಿದೆ. ಪಾತ್ರಕ್ಕಾಗಿ ಡ್ಯಾನ್ಸ್ ಮತ್ತು ಆ್ಯಕ್ಷನ್ ಸಹ ಕಲಿಯುತ್ತಿದ್ದೇನೆ ಎನ್ನುತ್ತಾರೆ ಅವತಾರ್.

ಚಿತ್ರದ ನಾಯಕಿಯಾಗಿ ಸೋನಲ್ ಮೊಂತೆರೋ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ತಬಲಾನಾಣಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡುತ್ತಿದ್ದು, ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಲ್ಕರ್ ಸಂಕಲನ, ಕಥೆ, ಚಿತ್ರಕಥೆ ಕೀರ್ತಿ, ಭೂಷಣ್ ನೃತ್ಯ ನಿರ್ದೇಶನ, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ.

Leave a Reply

Your email address will not be published. Required fields are marked *