Thursday, 15th May 2025

ಮೇಘಾಲಯ, ಮಣಿಪುರ, ತ್ರಿಪುರ -‘ರಾಜ್ಯ ಸ್ಥಾಪನಾ ದಿನ’: ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಮೇಘಾಲಯ, ಮಣಿಪುರ ಹಾಗೂ ತ್ರಿಪುರ ಈ ಮೂರು ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ, ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಮೂರೂ ರಾಜ್ಯಗಳು 1972ರ ಜನವರಿ 21 ರಂದು ರಚನೆಯಾಗಿದ್ದವು.

‘ಮೇಘಾಲಯದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಅವರ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು. ಮೇಘಾಲ ಯದ ಯುವಕರು ಸೃಜನಶೀಲ ಮತ್ತು ಉದ್ಯಮಶೀಲತೆಯನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯವು ಪ್ರಗತಿಯ ಹೊಸ ಎತ್ತರಕ್ಕೇರಲಿ’ ಎಂದು ಆಶಿಸಿದ್ದಾರೆ.

ಮಣಿಪುರ ಜನರಿಗೆ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು. ದೇಶದ ಅಭಿವೃದ್ಧಿಗೆ ಮಣಿಪುರ ನೀಡುತ್ತಿರುವ ಕೊಡುಗೆ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಮಣಿಪುರ ಆವಿಷ್ಕಾರ ಮತ್ತು ಕ್ರೀಡಾ ಪ್ರತಿಭೆಗಳ ಶಕ್ತಿಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.

ತ್ರಿಪುರ ಜನರಿಗೆ ಶುಭಾಶಯ ತಿಳಿಸುತ್ತೇನೆ. ಸಂಸ್ಕೃತಿ ಮತ್ತು ಆತ್ಮೀಯ ಸ್ವಭಾವ ಭಾರತದಾದ್ಯಂತ ಮೆಚ್ಚುಗೆ ಗಳಿಸಿದೆ. ರಾಜ್ಯವು ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ’ ಎಂದು ಶ್ಲಾಘಿಸಿದ್ದಾರೆ.

ಇದೇ ವೇಳೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಮಣಿಪುರ ಮುಖ್ಯಮಂತ್ರಿ ಎನ್‌. ಬರೇನ್‌ ಸಿಂಗ್‌ ಹಾಗೂ ತ್ರಿಪುರ ಮುಖ್ಯಮಂತ್ರಿ ಬಿಪ್ಲವ್‌ ಕುಮಾರ್‌ ದೇವ್ ಅವರೂ ತಮ್ಮ ರಾಜ್ಯಗಳ ಜನರಿಗೆ ಶುಭ ಕೋರಿದ್ದಾರೆ.

 

Leave a Reply

Your email address will not be published. Required fields are marked *