Wednesday, 14th May 2025

ರಾತ್ರೋರಾತ್ರಿ ಹಾರರ್‌ ಕಥನ

ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡಿರುವ ಚಿತ್ರ’ರಾತ್ರೋರಾತ್ರಿ’.

ಸಿನಿಮಾವು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕಥೆಯಾಗಿದೆ. ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ ಇಲ್ಲವೆಂದು, ಇದಕ್ಕಾಗಿ ಐವತ್ತು ಸಾವಿರ ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ.

ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾಾನೆ. ನಂತರ ಪರಿಚಯದವನೊಬ್ಬ ಬಂದು ಒಂದು ಹೆಣವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಶವವನ್ನು ತೆಗೆದುಕೊಂಡು ಹೋಗುತ್ತಾನೆ. ಈ ನಡುವೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದು ಏಕೆ, ಹೇಗೆ? ಆಕೆಯ ಸಾವಿಗೆ ಕಾರಣವೇನು? ಎಂಬುದು ಸನ್ನಿವೇಶಗಳ ಮೂಲಕ ತೆರೆದುಕೊಳ್ಳುತ್ತದೆ. ನಾಲ್ಕು ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಫೈಟರ್ ಆಗಿರುವ ಪವನ್ ಚಿತ್ರದ ನಾಯಕನಾಗಿ ನಟಿಸಿದ್ದು, ಪವನ್ ಚಿತ್ರಾಲಯ ಮೂಲಕ ಬಂಡವಾಳವನ್ನು ಹೂಡಿದ್ದಾರೆ.

ಡೀಲ್‌ಮುರಳಿ ರಚನೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಚಿಕಾ ಹಾಗೂ ಡಯನಾ ನಾಯಕಿಯರಾಗಿ  ಬಣ್ಣ ಹಚ್ಚಿ ದ್ದಾರೆ. ತಾಯಿ ಪಾತ್ರದಲ್ಲಿ ಗಂಗಮ್ಮ, ಖಳನಟರಾಗಿ ರಾಜ್ ಕಾಂತ್, ವಿನಯ್‌ಕುಮಾರ್.ವಿ.ನಾಯಕ್, ಮಂತ್ರವಾದಿಯಾಗಿ ದಿವಾಕರ್, ಹರೀಶ್ ಉಳಿದಂತೆ ಪ್ರಸನ್ನ, ಮುರಳಿ, ಮನೋಜ್, ರಾತ್ರೋರಾತ್ರಿ ಹಾರರ್ ಕಥನ ಸುನೀಲ್ ಮುಂತಾದವರ ನಟನೆ ಇದೆ. ರಾಮನಗರ, ಮಂಡ್ಯ, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

Leave a Reply

Your email address will not be published. Required fields are marked *