Saturday, 10th May 2025

IND vs ENG: ನಿತೀಶ್‌ ರೆಡ್ಡಿ ಇನ್‌, ಮೊದಲನೇ ಟಿ20ಐಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI ವಿವರ!

IND vs ENG: Rinku Singh Out, Shami Replaces Jasprit Bumrah; India's Strongest XI For 1st T20I against England

ನವದೆಹಲಿ: ಇಂಗ್ಲೆಂಡ್‌ ವಿರುದ್ದ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (IND vs ENG) ಜನವರಿ 11 ರಂದು ಬಿಸಿಸಿಐ ಪ್ರಕಟಿಸಿತ್ತು. ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಪ್ರಕಟಿಸಲಾಗಿದೆ. ಈ ಟಿ20ಐ ಸರಣಿಯನ್ನು ಆಡುವ ಕೆಲ ಆಟಗಾರರು ಕೂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಬಹುದು.

ದಕ್ಷಿಣ ಆಫ್ರಿಕಾ ವಿರುದ್ದ ಕೊನೆಯ ಟಿ20ಐ ಸರಣಿಯನ್ನು ಆಡಿದ್ದ ಬಹುತೇಕ ಆಟಗಾರರನ್ನು ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗೆ ಪರಿಗಣಿಸಲಾಗಿದೆ. ಅಂದ ಹಾಗೆ ಜನವರಿ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮೊದಲನೇ ಟಿ20ಐ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಬಲಿಷ್ಠ ಪ್ಲೇಯಿಂಗ್‌ XI ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

Harbhajan Singh: ʻರನ್‌ ಬಾರಿಸಿ ಟೀಕೆಗಳಿಗೆ ತಿರುಗೇಟು ನೀಡಿʼ-ರೋಹಿತ್, ಕೊಹ್ಲಿಗೆ ಹರ್ಭಜನ್‌ ಸಿಂಗ್‌ ಸಲಹೆ!

ಸಂಜು ಸ್ಯಾಮ್ಸನ್‌-ಅಭಿಷೇಕ್‌ ಶರ್ಮಾ ಓಪನರ್ಸ್‌

ಕಳೆದ ಟಿ20ಐ ಸರಣಿಯಂತೆ ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿಯೂ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಇನಿಂಗ್ಸ್‌ ಆರಂಭಿಸಲಿದ್ದಾರೆ. ಸಂಜು ಸ್ಯಾಮ್ಸನ್‌ ಕಳೆದ ಐದು ಟಿ20ಐ ಇನಿಂಗ್ಸ್‌ಗಳಿಂದ ಮೂರು ಶತಕಗಳನ್ನು ಸಿಡಿಸಿದ್ದಾರೆ. ಇದೀಗ ಇಂಗ್ಲೆಂಡ್‌ ವಿರುದ್ಧದವೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಐದನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಬ್ಯಾಟ್‌ ಮಾಡಲಿದ್ದಾರೆ.

ರಿಂಕು ಸಿಂಗ್‌ ಸ್ಥಾನಕ್ಕೆ ನಿತೀಶ್‌ ರೆಡ್ಡಿ

ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಶತಕ ಸೇರಿದಂತೆ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಟಿ20 ತಂಡಕ್ಕೂ ಆಯ್ಕೆ ಮಾಡಲಾಗಿದೆ. ಕಳೆದ ಟಿ20 ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಿತೀಶ್‌ ರೆಡ್ಡಿಗೆ ಅವಕಾಶ ನೀಡಬಹುದು.

ಮೊಹಮ್ಮದ್‌ ಶಮಿ ಕಮ್‌ಬ್ಯಾಕ್‌

ದೀರ್ಘಾವಧಿ ಬಳಿಕ ಮೊಹಮ್ಮದ್‌ ಶಮಿ ಅವರು ಭಾರತ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ದೇಶಿ ಕ್ರಿಕೆಟ್‌ಗೆ ಮರಳಿದ್ದರು. ಇದೀಗ ಅವರು ಟಿ20ಐ ಸರಣಿಯಲ್ಲಿ ಆಡಿದ ಬಳಿಕ ಅವರು ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಆಡಬಹುದು. ಇವರ ಜೊತೆಗೆ ಅರ್ಷದೀಪ್‌ ಸಿಂಗ್‌ ಅವರು ಪೂರ್ಣ ಪ್ರಮಾಣದ ವೇಗಿಯಾಗಿ ಆಡಲಿದ್ದಾರೆ. ರವಿ ಬಿಷ್ಣೋಯ್‌ ಹಾಗೂ ವರುಣ್‌ ಚಕ್ರವರ್ತಿ ಅವರು ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಆಡಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಸಂಜು ಸ್ಯಾಮ್ಸನ್‌ (ಓಪನರ್‌)
ಅಭಿಷೇಕ್‌ ಶರ್ಮಾ (ಓಪನರ್‌)
ತಿಲಕ್‌ ವರ್ಮಾ (ಬ್ಯಾಟ್ಸ್‌ಮನ್‌)
ಸೂರ್ಯಕುಮಾರ್‌ ಯಾದವ್‌ (ನಾಯಕ, ಬ್ಯಾಟ್ಸ್‌ಮನ್‌)
ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)
ನಿತೀಶ್‌ ಕುಮಾರ್‌ ರೆಡ್ಡಿ (ಆಲ್‌ರೌಂಡರ್‌)
ಅಕ್ಷರ್‌ ಪಟೇಲ್‌ (ಸ್ಪಿನ್‌ ಆಲ್‌ರೌಂಡರ್)‌
ವರುಣ್‌ ಚಕ್ರವರ್ತಿ (ಸ್ಪಿನ್ನರ್‌)
ರವಿ ಬಿಷ್ಣೋಯ್‌ (ಸ್ಪಿನ್ನರ್‌)
ಅರ್ಷದೀಪ್‌ ಸಿಂಗ್‌ (ವೇಗದ ಬೌಲರ್‌)
ಮೊಹಮ್ಮದ್‌ ಶಮಿ (ವೇಗದ ಬೌಲರ್‌)

ಈ ಸುದ್ದಿಯನ್ನು ಓದಿ: ರಾಹುಲ್‌, ಜಡೇಜಾ ಔಟ್‌! Champions Trophyಗೆ ಭಾರತ ತಂಡವನ್ನು ಆರಿಸಿದ ಹರ್ಭಜನ್‌ ಸಿಂಗ್‌!

Leave a Reply

Your email address will not be published. Required fields are marked *