Saturday, 10th May 2025

Saree Davani-Langa Styling: ಸಂಕ್ರಾಂತಿ ಹಬ್ಬಕ್ಕೆ ಸೀರೆಯನ್ನು ದಾವಣಿ-ಲಂಗದಂತೆ ಉಡುವುದು ಹೇಗೆ?

Saree Davani-Langa Styling 2025

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹಬ್ಬಕ್ಕೆ ದಾವಣಿ-ಲಂಗ ಡಿಸೈನರ್‌ವೇರ್ ಖರೀದಿಸಲಿಲ್ಲವೇ! ಅಥವಾ ಹಳೆಯದನ್ನು ಮತ್ತೊಮ್ಮೆ ಧರಿಸಲು ಬೇಸರವೇ! ಹಾಗಾದಲ್ಲಿ ಚಿಂತಿಸಬೇಡಿ, ಹೊಸ ಹೊಸ ಬಗೆಯ ದಾವಣಿ-ಲಂಗವನ್ನು (Saree Davani-Langa Styling 2025) ನೀವು ಹಬ್ಬಗಳಲ್ಲಿ ಮಾತ್ರವಲ್ಲ, ಯಾವುದೇ ಗ್ರ್ಯಾಂಡ್ ಟ್ರೆಡಿಷನಲ್ ಸಮಾರಂಭದಲ್ಲಿ ಧರಿಸಬಹುದು! ಅದು ಹೇಗೆ ಅಂತಿರಾ! ನಿಮ್ಮ ವಾರ್ಡ್ರೋಬ್‌ನಲ್ಲಿರುವ ಯಾವುದಾದರೂ ರೇಷ್ಮೆ ಅಥವಾ ಬಾರ್ಡರ್ ಸೀರೆಯನ್ನು ತೆಗೆದುಕೊಳ್ಳಿ. ದಾವಣಿ-ಲಂಗದಂತೆ ಉಟ್ಟು ಸಂಭ್ರಮಿಸಿ ಎನ್ನುತ್ತಾರೆ ಎಕ್ಸ್‌ಪರ್ಟ್.

ಚಿತ್ರಕೃಪೆ: ಇಷ್ಟಾ ಡಿಸೈನರ್ ಸ್ಟುಡಿಯೋ

ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾದ ಸೀರೆಯ ದಾವಣಿ-ಲಂಗ ಸ್ಟೈಲಿಂಗ್

ಹೌದು, ಹಬ್ಬದ ಸೀಸನ್‌ನಲ್ಲಿ ಈ ಸ್ಟೈಲಿಂಗ್ ಟ್ರೆಂಡಿಯಾಗಿದೆ. ನೀವೂ ಕೂಡ ನಿಮ್ಮ ಅಥವಾ ನಿಮ್ಮ ಅಮ್ಮನ, ಅಕ್ಕನ ಸೀರೆಯನ್ನು ದಾವಣಿಯಂತೆ ಉಟ್ಟು ನಲಿದಾಡಬಹುದು. ಈ ಕುರಿತಂತೆ ಇಷ್ಟಾ ಡಿಸೈನರ್ ಸ್ಟುಡಿಯೋದ ಎಕ್ಸ್‌ಪರ್ಟ್ ರೂಪಾ ಶೆಟ್ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಟ್ರೈ ಮಾಡಿ ನೋಡಿ.

ಮಾಡೆಲ್: ಬಿಂದು

ಸೀರೆಯಲ್ಲಿ ದಾವಣಿ-ಲಂಗದ ಸ್ಟೈಲಿಂಗ್

ಎಕ್ಸ್‌ಪರ್ಟ್ ರೂಪಾ ಶೆಟ್ ಹೇಳುವಂತೆ, ಮೊದಲೇ ಪ್ಲಾನ್ ಮಾಡಿ ಮ್ಯಾಚ್ ಆಗುವಂತಹ ಸೀರೆಯನ್ನು ಆಯ್ಕೆ ಮಾಡಿಟ್ಟುಕೊಳ್ಳಬೇಕು. ಇದಕ್ಕಾಗಿ ಒಂದಿಷ್ಟು ಐಡಿಯಾ ಹಾಗೂ ಟಿಪ್ಸ್ ನೀಡಿದ್ದಾರೆ.

  • ದಾವಣಿ-ಲಂಗವನ್ನಾಗಿಸಲು ಅಮ್ಮನ ಅಥವಾ ಯಾವುದೇ ಸಮಾರಂಭಕ್ಕೆ ಕೊಂಡಂತಹ ಮಲ್ಟಿಪಲ್ ಬಾರ್ಡರ್ ಅಥವಾ ಮಲ್ಟಿ ಕಲರ್ಡ್ ಬಿಗ್ ಬಾರ್ಡರ್ ರೇಷ್ಮೆ ಸೀರೆಗಳನ್ನು ಇನ್ಸ್ಟಂಟ್ ಫ್ಲೀಟ್ಸ್ ಲಂಗವಾಗಿ ಪರಿವರ್ತಿಸಬಹುದು.
  • ಮೊದಲಿಗೆ ವೈವಿಧ್ಯಮಯ ಅಂಚು ಹೊಂದಿರುವ ಗ್ರ್ಯಾಂಡ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಆದಷ್ಟೂ ಸಾಫ್ಟ್ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು.
  • ಸ್ಲೀವ್ ಡಿಸೈನ್ ಇರುವಂತಹ ಕಾಂಟ್ರಾಸ್ಟ್ ವರ್ಣದ ರೇಷ್ಮೆಯ ಸೀರೆಯ ಬ್ಲೌಸನ್ನು ಇದಕ್ಕೆ ಮ್ಯಾಚ್ ಮಾಡಬೇಕು.
  • ಮೊದಲಿಗೆ ಪೇಟಿಕೋಟ್ ಮೇಲೆ ನಾರ್ಮಲ್ ಸೀರೆ ಉಡುವಂತೆ ಸಿಕ್ಕಿಸಬೇಕು.
  • ಬಲಭಾಗದ ಸೈಡಿಗೆ ಸೀರೆಯ ಅಂಚನ್ನು ಸಿಕ್ಕಿಸಿ, ನೆರಿಗೆಗಳನ್ನು ಮಾಡುವಂತೆ ಮಾಡಬೇಕು.
  • ಪ್ರತ್ಯೇಕವಾಗಿ ಒಂದೊಂದು ನೆರಿಗೆಯನ್ನು ಒಂದರ ಪಕ್ಕ ಒಂದರಂತೆ ಸಿಕ್ಕಿಸುತ್ತಾ ಬರಬೇಕು. ಇದು ನೋಡಲು ಉದ್ದ ಲಂಗದಂತೆ ಕಾಣಿಸಬೇಕು.
  • ಇಡೀ ಸೀರೆಯ ನೆರಿಗೆ ಮತ್ತೊಮ್ಮೆ ಮೊದಲಿಗೆ ಸಿಕ್ಕಿಸಿದ, ಬಲಭಾಗದ ನೆರಿಗೆ ಬಳಿ ಬಂದಾಗ ಟೈಟಾಗಿ ಅದನ್ನು ಸಿಕ್ಕಿಸಬೇಕು. ಸೇಫ್ಟಿ ಪಿನ್ ಬಳಸಬಹುದು. ಕೊನೆಯಲ್ಲಿ ನೋಡಲು ಇದು ಥೇಟ್ ನೆರಿಗೆಯಿರುವ ರೇಷ್ಮೆಯ ಲಂಗದಂತೆ ಕಾಣುವುದು.
  • ಮತ್ತೊಬ್ಬರ ಸಹಾಯ ತೆಗೆದುಕೊಂಡಲ್ಲಿ ನೆರಿಗೆ ಮಾಡಲು ಸುಲಭವಾಗುವುದು.

ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್!

ಪ್ಲಂಪಿಯಾಗಿರುವವರಾದಲ್ಲಿ ಹೀಗೆ ಉಟ್ಟುಕೊಳ್ಳಿ

  • ಪೆಟಿಕೋಟ್ ಬದಲು ಯಾವುದೇ ರೇಷ್ಮೆಯ ಲೆಹೆಂಗಾ ಕೂಡ ಧರಿಸಬಹುದು.
  • ಸಾಫ್ಟ್ ಸಿಲ್ಕ್ ಸೀರೆಯನ್ನು ದಾವಣಿಯಂತೆ ಬಳಸಿ, ಹಿಂಭಾಗದಲ್ಲಿ ನೆರಿಗೆ ಬರುವಂತೆಯೂ ಉಡಬಹುದು. ಇದಕ್ಕಾಗಿ ಯು ಟ್ಯೂಬ್‌ನಲ್ಲಿ ಸಾಕಷ್ಟು ಟ್ಯುಟೋರಿಯಲ್‌ಗಳಿವೆ. ನೋಡಿ ಕಲಿಯಬಹುದು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Leave a Reply

Your email address will not be published. Required fields are marked *