ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ತನ್ನ 2024ರ ಪ್ರಯಾಣವನ್ನು ಅಭೂತಪೂರ್ವ ಸಾಧನೆಯೊಂದಿಗೆ ಪೂರ್ಣಗೊಳಿಸಿದೆ.
ಕಂಪನಿಯು ಡಿಸೆಂಬರ್ 2024ರಲ್ಲಿ ಒಟ್ಟಾರೆ ಶೇ.18ರಷ್ಟು ಮಾಸಿಕ ಮಾರುಕಟ್ಟೆ ಪಾಲು ಹೊಂದಿದ್ದು ದಾಖಲೆ ನಿರ್ಮಿಸಿದೆ. ಈ ಪರಿಣಾಮಕಾರಿ ಸಾಧನೆಯು ಒಟ್ಟು 10,639 ಟ್ರಾಕ್ಟರ್ ಸಾಧನೆಯಿಂದ ಪ್ರೇರಿತವಾಗಿದ್ದು ಶೇ.33 ರಷ್ಟು ಪ್ರಗತಿ ಸಾಧಿಸಿದ್ದು ಡಿಸೆಂಬರ್ 2023ರಲ್ಲಿ 7,999 ಟ್ರಾಕ್ಟರ್ ಮಾರಾಟ ಹೊಂದಿತ್ತು ಮತ್ತು ಅಂದಾಜು ಉದ್ಯಮದ ಪ್ರಗತಿ 2.4 ಪಟ್ಟು ಮೀರಿದೆ.
ಸೊನಾಲಿಕಾ 2025ರ ಹಣಕಾಸು ವರ್ಷದಲ್ಲಿ ಸದೃಢ ಪ್ರಗತಿ ಮುಂದು ವರಿಸಿದ್ದು ಏಪ್ರಿಲ್-ಡಿಸೆಂಬರ್ 24ರಲ್ಲಿ ವೈಟಿಡಿ ಮಾರಾಟ 1,19,369 ಒಟ್ಟಾರೆ ಟ್ರಾಕ್ಟರ್ ಮಾರಾಟ ದಾಖಲಿಸಿದ್ದು ಇದು ಆವಿಷ್ಕಾರದ ಉತ್ತೇಜನ ಮತ್ತು ಪ್ರತಿ ರೈತರಿಗೂ ವಿಶೇಷವಾಗಿ ರೂಪಿಸಿದ ಹೆವಿ ಡ್ಯೂಟಿ ಟ್ರಾಕ್ಟರ್ ಪರಿಹಾರ ಗಳನ್ನು ಒದಗಿಸಲು ಸೊನಾಲಿನಾ ಬದ್ಧತೆ ಯನ್ನು ಎತ್ತಿ ತೋರಿಸಿದೆ.
ಕೃಷಿ ರೂಢಿಗಳನ್ನು ಆಧುನೀಕರಿಸಲು ಮತ್ತು 150+ ದೇಶಗಳ ರೈತರನ್ನು ಸಬಲೀಕರಿಸಲು ಕಂಪನಿಯು ಸತತವಾಗಿ ಗಡಿಗಳನ್ನು ಮೀರುತ್ತಿದ್ದು ಟ್ರಾಕ್ಟರ್ ಉದ್ಯಮದ ಶ್ರೇಷ್ಠತೆಯನ್ನು ಮರು ವ್ಯಾಖ್ಯಾನಿಸಿದೆ. ತನ್ನ ಹೆವಿ ಡ್ಯೂಟಿ ಟ್ರಾಕ್ಟರ್ ಪೋರ್ಟ್ ಫೋಲಿಯೊವನ್ನು ರೈತರ ಬೆಳೆ ಮತ್ತು ಮಣ್ಣಿನ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸುವುದರಿಂದ ತನ್ನ ಸೇವಾ ಜಾಲ ವಿಸ್ತರಿಸುವವರೆಗೆ ಗ್ರಾಹಕರಿಗೆ ಹತ್ತಿರವಾಗಿ ಉಳಿದಿದ್ದು ಸೊನಾಲಿಕಾ ಕೃಷಿ ಸಂಪತ್ತಿನ ಸೃಷ್ಟಿಯ ಪ್ರಯಾಣದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿದೆ.
ಈ ಅಸಾಧಾರಣ ಸಾಧನೆ ಕುರಿತು ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ಪ್ರತಿಯೊಂದು ಟ್ರಾಕ್ಟರ್ ನೊಂದಿಗೆ ನಾವು ನಮ್ಮ ರೈತ ಸಮುದಾಯಕ್ಕೆ ಪ್ರಗತಿ, ಸದೃಢತೆ ಮತ್ತು ಭರವಸೆಯ ಬೀಜಗಳನ್ನು ನೆಡಲು ನಮ್ಮ ಬದ್ಧತೆಯನ್ನು ಮರು ದೃಢೀಕರಿಸುತ್ತದೆ. ಈ ಹೊಸ ಮೈಲಿಗಲ್ಲು ಡಿಸೆಂಬರ್ 2024ರಲ್ಲಿ ಶೇ.18ರಷ್ಟು ಮಾಸಿಕ ಮಾರುಕಟ್ಟೆ ಹೊಂದಿದ್ದು ಇದು ಮಹತ್ತರ ಸಾಧನೆ ಮತ್ತು ಹೊಸ ಮೈಲಿಗಲ್ಲುಗಳೊಂದಿಗೆ ಸಮಾರೋಪಗೊಂಡಿದೆ.
ಈ ತಿಂಗಳಲ್ಲಿ ಶೇ.33ರಷ್ಟು ಪ್ರಗತಿ ಹೊಂದಿದ್ದು ನಾವು ಉದ್ಯಮದ ಪ್ರಗತಿ 2.4 ಪಟ್ಟು ಮೀರಿದೆ. ಈ ಉತ್ಸಾಹಕರ ಪ್ರಯಾಣದಲ್ಲಿ ನಮ್ಮ ಮಹತ್ತರ ಪುರಸ್ಕಾರವು ಉಜ್ವಲ ಮತ್ತು ಹೆಚ್ಚು ಸಂಪದ್ಭರಿತ ನಾಳೆಯತ್ತ ಕೊಂಡೊಯ್ಯ ಲಿದೆ. ಹೆವಿ-ಡ್ಯೂಟಿ ಟ್ರಾಕ್ಟರ್ ಗಳ ಸದೃಢ ಪೋರ್ಟ್ ಫೋಲಿಯೊ ಮೂಲಕ ನಾವು ಹೊಸ ವರ್ಷ 2025ರ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಲು ಸಜ್ಜಾಗಿದ್ದೇವೆ ಮತ್ತು ನಾವು ರೈತರ ನಿರೀಕ್ಷೆಗಳನ್ನು ಪೂರೈಸಲು ಮತ್ತು ಕೃಷಿ ಸಂಪತ್ತು ಸಾಧ್ಯವಾಗಿಸಲು ಬದ್ಧರಾಗಿದ್ದೇವೆ. ನಿಮಗೆ ಉಜ್ವಲ ಮತ್ತು ಯಶಸ್ವಿ ಹೊಸ ವರ್ಷ 2025 ಹಾರೈಸುತ್ತೇವೆ” ಎಂದರು.