Saturday, 10th May 2025

Viral News: ಗಿಟಾರ್‌ ನುಡಿಸುವ ಹವ್ಯಾಸ ಇದೆ ಎಂದ ಅಭ್ಯರ್ಥಿ- ಕೆಲಸ ಯಾವಾಗ ಮಾಡ್ತೀಯಾ ಅಂತ ಕೇಳಿ ರಿಜೆಕ್ಟ್‌ ಮಾಡಿದ ಬಾಸ್‌!

Viral News

ಕೆಲಸ-ಜೀವನ ಸಮತೋಲನ ಮತ್ತು ಕೆಲಸದ ಅವಧಿ ಹೆಚ್ಚಳದ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೀಗ ಸಿಂಗಾಪುರ ಮೂಲದ ಸಿಒಒ ಒಬ್ಬರು  ತನ್ನ ಭಾರತೀಯ ಬಾಸ್ ರೆಸ್ಯೂಮ್‍ನಲ್ಲಿ ಅಭ್ಯರ್ಥಿಯೊಬ್ಬ ತನ್ನ ಹವ್ಯಾಸಗಳನ್ನು ಉಲ್ಲೇಖಿಸಿದ್ದಕ್ಕಾಗಿ ಆತನನ್ನು ತಿರಸ್ಕರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದು ರೆಸ್ಯೂಮ್‍ನಲ್ಲಿ ನಮ್ಮ ಹವ್ಯಾಸಗಳನ್ನು ಸೂಚಿಸುವುದು ಕೆಲವೊಮ್ಮೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಯುಕೆ ನಿಯತಕಾಲಿಕ ಟಾಟ್ಲರ್ ಏಷ್ಯಾದ ಸಿಒಒ ಪರ್ಮಿಂದರ್ ಸಿಂಗ್ ಈ ವಿಲಕ್ಷಣ ಘಟನೆಯನ್ನು ಹಂಚಿಕೊಂಡಿದ್ದಾರೆ. “ಒಮ್ಮೆ ಒಬ್ಬ ಅಭ್ಯರ್ಥಿ ಮಾರ್ಕೆಟಿಂಗ್ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಮಾರ್ಕೆಟಿಂಗ್ ಕೆಲಸಕ್ಕೆ ಯೋಗ್ಯರಾಗಿದ್ದರು ಕೂಡ ಅವರು ಮ್ಯಾರಥಾನ್‍ಗಳಲ್ಲಿ ಓಡುತ್ತಾರೆ ಮತ್ತು ಗಿಟಾರ್ ನುಡಿಸುತ್ತಾರೆ ಎಂದು ಅವರ ಸಿವಿಯಲ್ಲಿ ಉಲ್ಲೇಖಿಸಿದ ಕಾರಣ ನನ್ನ ಬಾಸ್ ಆತನನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನನಗೆ ಅವಕಾಶ ನೀಡಲಿಲ್ಲ, ‘ಯೇ ಆದ್ಮಿ ಯೇ ಸಬ್ ಕುಚ್ ಕರ್ತಾ ಹೈ ತೋ ಕಾಮ್ ಕಬ್ ಕರೇಗಾ?’ ಎಂದು ಅವರ ಮೇಲಾಧಿಕಾರಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

ಈ ಘಟನೆಯು ಸಿಂಗ್ ಅವರಿಗೆ ವಿಶೇಷವಾಗಿ ನಿರಾಶೆಯನ್ನು ಮೂಡಿಸಿತ್ತು. ಸಮರ್ಥ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆ ನಡೆದಿದ್ದು ಹಲವು ವರ್ಷಗಳ ಹಿಂದೆ. ನಾನು ಭಾರತದಿಂದ ದೂರವಿದ್ದೇನೆ ಹಾಗೇ ಈಗ ವಿಷಯಗಳು ಬದಲಾಗುತ್ತವೆ ಎಂದು ಭಾವಿಸಿದ್ದೇನೆ. ಆದರೆ ಅವರು ಬದಲಾಗಿಲ್ಲ ಎಂದು ಸಿಂಗ್‌ ಹೇಳಿದ್ದಾರೆ.

ಇತ್ತೀಚೆಗೆ, ಲಾರ್ಸೆನ್ & ಟೂಬ್ರೊ ಅಧ್ಯಕ್ಷ ಎಸ್.ಎನ್.ಸುಬ್ರಮಣ್ಯನ್ ಅವರು ಉದ್ಯೋಗಿಗಳಿಗೆ ವಾರಕ್ಕೆ 90 ಗಂಟೆಗಳ ಕೆಲಸವನ್ನು ಪ್ರತಿಪಾದಿಸುತ್ತಿರುವುದನ್ನು ತೋರಿಸುವ ವಿಡಿಯೊ ರೆಡ್ಡಿಟ್‍ನಲ್ಲಿ ವೈರಲ್ ಆಗಿತ್ತು. ಅವರ ಬಹು ಮಿಲಿಯನ್ ಡಾಲರ್ ಕಂಪನಿಯು ಉದ್ಯೋಗಿಗಳನ್ನು ಶನಿವಾರದಂದು ಕೆಲಸ ಮಾಡುವಂತೆ ಏಕೆ ಒತ್ತಾಯ ಮಾಡುತ್ತಿದೆ ಎಂದು ಕೇಳಿದಾಗ, ಅಧ್ಯಕ್ಷರು ಭಾನುವಾರವೂ ಅವರು ಕೆಲಸ ಮಾಡಲಿ ಎಂದು ಬಯಸುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಭಾರತೀಯ UPSC ಮಾರ್ಗದರ್ಶಕನಿಗೆ ಪಾಕ್ ವಿದ್ಯಾರ್ಥಿ ಮಾಡಿದ ಸಂದೇಶ ವೈರಲ್- ಏನಿದೆ ಇದರಲ್ಲಿ?

“ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ನೀವು ಎಷ್ಟು ಸಮಯದವರೆಗೆ ನೋಡಬಹುದು? ಹೆಂಡತಿಯರು ತಮ್ಮ ಗಂಡಂದಿರನ್ನು ಎಷ್ಟು ಕಾಲ ನೋಡಬಲ್ಲರು? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ” ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಆನಂದ್ ಮಹೀಂದ್ರಾ, ಹರ್ಷ್ ಗೋಯೆಂಕಾ ಮತ್ತು ಆದರ್ ಪೂನಾವಾಲಾ ಸೇರಿದಂತೆ ಸೋಶಿಯಲ್ ಮೀಡಿಯಾ ಮತ್ತು ಕಾರ್ಪೊರೇಟ್ ನಾಯಕರು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *